»   » ಚಿತ್ರದ ಟೈಟಲ್ 'ವಜ್ರಮುನಿ', ಟ್ಯಾಗ್ ಲೈನ್ ಎಲಾ ಕುನ್ನಿ

ಚಿತ್ರದ ಟೈಟಲ್ 'ವಜ್ರಮುನಿ', ಟ್ಯಾಗ್ ಲೈನ್ ಎಲಾ ಕುನ್ನಿ

By: ಜೀವನರಸಿಕ
Subscribe to Filmibeat Kannada

ಅದೆಷ್ಟೋ ಧೀಮಂತ ನಟ, ನಟಿಯರ ಹೆಸರುಗಳು ಸಿನಿಮಾದ ಟೈಟಲ್ ಆಗ್ತವೆ. ಇದರಿಂದ ಆರಂಭದಲ್ಲೇ ಸಿನಿಮಾಗೆ ಮೈಲೇಜ್ ಸಿಗುತ್ತೆ. ಅಂತಹ ವ್ಯಕ್ತಿಯ ಹೆಸರಿಟ್ಟಿದ್ದಾರೆ ಅಂದರೆ ಸಿನಿಮಾದಲ್ಲಿ ಏನ್ಮಾಡಿರ್ತಾರೆ? ಏನಿರುತ್ತೆ ಕಥೆ? ಅನ್ನೋ ಕುತೂಹಲಕ್ಕಾದ್ರೂ ಒಂದ್ಸಾರಿ ಸಿನಿಮಾ ನೋಡ್ತಾರೆ.

ಇನ್ನು ಇಂತಹ ಟೈಟಲ್ ಇಟ್ಟು ಸಿನಿಮಾ ಮಾಡೋಕೆ ಹೊರಟ್ರೆ ಬೇಡ ಅಂದ್ರೂ ವಿವಾದಗಳು ಬೆನ್ನಿಗೆ ಹತ್ತಿಬಿಡ್ತವೆ. ಸಿನಿಮಾಕ್ಕೊಂದಿಷ್ಟು ಪ್ರಚಾರ ಪಕ್ಕಾ ಸಿಕ್ಕಿಬಿಡುತ್ತೆ. ಈಗ ಅಂತಹದ್ದೇ ಮತ್ತೊಂದು ಸಿನಿಮಾ ಸೆಟ್ಟೇರೋಕೆ ರೆಡಿಯಾಗಿದೆ. [ನಟ ಭೈರವ ವಜ್ರಮುನಿ ಸವಿನೆನಪು...ಚಿತ್ರ ನಮನ]


ಅದರ ಹೆಸರು 'ವಜ್ರಮುನಿ'. ಚಿತ್ರದ ಟ್ಯಾಗ್ ಲೈನ್ನ್ 'ಎಲಾ ಕುನ್ನಿ'. ಖಳನಾಯಕನ ಪಾತ್ರಗಳಿಗೆ ಹೊಸ ಭಾಷ್ಯ ಬರೆದ ಧೀಮಂತ ನಟ ಭೈರವ ವಜ್ರಮುನಿ. ಈಗ ವಜ್ರಮುನಿ ಹೆಸರಿನಲ್ಲಿ ಸಿನಿಮಾ ಆಗ್ತಿರೋದು ಎಲ್ಲರಲ್ಲಿ ಕುತೂಹಲ ಮೂಡಿಸ್ತಿದೆ.

ಪಟ್ರೆ ಲವ್ಸ್ ಪದ್ಮ ಸಿನಿಮಾ ಮಾಡಿದ್ದ ಪ್ರಮೀಳಾ ಅನ್ನೋ ನಿರ್ಮಾಪಕರ ಕೈಯಲ್ಲಿ ವಜ್ರಮುನಿ ಅನ್ನೋ ಟೈಟಲ್ ಇದೆ. ಸಿನಿಮಾ ಇನ್ನೂ ಶುರುವಾಗಿಲ್ಲ. ಆದರೆ ಇತ್ತೀಚೆಗೆ ಸಿನಿಮಾ ಶುರುವಾಗೋ ಮೊದಲೇ ವಿವಾದಗಳು ಶುರುವಾಗಿಬಿಡ್ತವೆ. ಅಂತಹಾ ಅದ್ಭುತ ನಟನ ಹೆಸರಲ್ಲಿ ಬರೋ ಸಿನಿಮಾ ವಿವಾದ ಮಾಡಿಕೊಳ್ಳದಿದ್ರೆ ಸಾಕು.

English summary
Kannada movie tilted as Vajramuni, who had portrayed negative characters during most of his career and was considered one of Kannada cinema's finest actors. The tagline of the movie is 'Ela Kunni'.
Please Wait while comments are loading...