Just In
Don't Miss!
- Sports
ಐಎಸ್ಎಲ್: ಅಂಕ ಹಂಚಿಕೊಂಡ ಹೈದರಾಬಾದ್ ಮತ್ತು ಮುಂಬೈ ಸಿಟಿ
- News
ಅಮಿತ್ ಶಾ ಆಗಮನ; ಬೆಳಗಾವಿಯಲ್ಲಿ ರೈತರ ಪ್ರತಿಭಟನೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪರುಲ್ ಯಾದವ್ ಜೊತೆ ಹಿಮಾಲಯದಲ್ಲಿ 'ಉಪ್ಪಿ 2'
ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳು ಸಾಕಷ್ಟು ಕಾತುರ, ಕುತೂಹಲದಿಂದ ನಿರೀಕ್ಷಿಸುತ್ತಿರುವ ಚಿತ್ರ 'ಉಪ್ಪಿ 2'. ಈ ಬಾರಿ ಉಪೇಂದ್ರ ಏನೆಲ್ಲಾ ಮ್ಯಾಜಿಕ್, ಗಿಮ್ಮಿಕ್ ಮಾಡುತ್ತಾರೆ ಎಂಬ ಸಂಗತಿ ಅಭಿಮಾನಿಗಳನ್ನು ಅಡಿಯಿಂದ ಮುಡಿಯತನಕ ಕಾಡುತ್ತಿದೆ.
ಗುರುಕಿರಣ್ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು ಸ್ವತಃ ಉಪೇಂದ್ರ ಅವರೇ ಆಕ್ಷನ್ ಕಟ್ ಹೇಳುತ್ತಿರುವುದು ಇನ್ನಷ್ಟು ಕುತೂಹಲ ಕೆರಳುವಂತೆ ಮಾಡಿದೆ. 'ಉಪೇಂದ್ರ' ಅನ್ನೋ ಬಂಪರ್ ಹಿಟ್ ಸಿನಿಮಾದ ಮುಂದುವರಿದ ಭಾಗ 'ಉಪ್ಪಿ 2' ಅಂತ ಸಿನಿಮಾದ ಬಗ್ಗೆ ಇರೋ ಕುತೂಹಲಗಳನ್ನ ಡಬಲ್ ಮಾಡಿದೆ. [ರಿಯಲ್ ಸ್ಟಾರ್ 'ಉಪ್ಪಿ 2' ಜತೆ ರಷ್ಯನ್ ಕೇಸರಿಬಾತ್]
ಉಪ್ಪಿ 2 ಸಿನಿಮಾದ ಮೊದಲ ಭಾಗದ ಶೂಟಿಂಗ್ ಹಿಮಾಲಯ, ಹಿಮಾಚಲಪ್ರದೇಶದಲ್ಲಿ ಮಾಡಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು. ಈ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪರುಲ್ ಯಾದವ್ ಹಾಗೂ ಉಪೇಂದ್ರ ಜೊತೆಗಿನ ಸನ್ನಿವೇಶಗಳನ್ನು ಹಿಮಾಲಯದಲ್ಲಿ ಸೆರೆಹಿಡಿಯಲಾಗಿದೆ.
ಸಿನಿಮಾದಲ್ಲಿ ರಿಯಲ್ ಸ್ಟಾರ್ ಎಂಟ್ರಿ ಹಿಮಾಲಯದಿಂದಲೇ ಶುರುವಾಗುತ್ತಂತೆ. ಉಪೇಂದ್ರ ಚಿತ್ರದ ಕೊನೆಯಲ್ಲಿ ನಾನು ಯಾರು ಅನ್ನೋದನ್ನ ತಿಳಿಯೋದಕ್ಕೆ ದಿಗಂತದ ಕಡೆ ನಡೆದುಕೊಂಡು ಹೋಗೋ ಸೀನ್ ಇದೆ. ಉಪ್ಪಿ ಅಲ್ಲಿಂದ ಹೊರಬರೋದೇ ಮೊದಲ ಸೀನ್ ಅನ್ನೋದು ಕುತೂಹಲದ ಜೊತೆಗೆ ಸತ್ಯವೂ ಅಂತೆ.
ಉಪ್ಪಿ-2 ಚಿತ್ರದಲ್ಲೂ ಮೂರು ಹೀರೋಯಿನ್ ಗಳಿರ್ತಾರೆ. ಇಲ್ಲಿ ಮೂರನೇ ಹೀರೋಯಿನ್ನಾಗಿ ಪ್ರಿಯಾಂಕಾ ಉಪೇಂದ್ರ ನಟಿಸ್ತಿದ್ದಾರೆ. ಉಪ್ಪಿ ಆಯ್ಕೆ ಮಾಡೋದ್ರಲ್ಲಿ ಎಕ್ಸ್ ಪರ್ಟ್. ಹಾಗಾಗಿ ಪ್ರೊಡಕ್ಷನ್ ನೋಡ್ಕೊಂಡು ನಟಿಸೋದು ಕಷ್ಟ ಅನ್ನೋ ಕಾರಣಕ್ಕೆ ಮೂರನೇ ಹೀರೋಯಿನ್ನಾಗಿ ಆಯ್ಕೆ ಮಾಡಿದ್ದಾರೆ ಅನ್ಸುತ್ತೆ.
ಸ್ವತಃ ಉಪ್ಪಿ ಹೇಳೋ ಪ್ರಕಾರ ನನ್ನ ಕಥೆಯನ್ನ ಬೇರೆಯವ್ರಿಗೆ ಕೊಟ್ರೂ ಇದನ್ನ ಬೇರೆಯವರು ಮಾಡೋಕೆ ಸಾಧ್ಯವಿಲ್ಲ ಅಂತ. ಹಾಗಂದ ಮೇಲೆ ಉಪ್ಪಿ-2ನಲ್ಲಿ ಅದಿನ್ನೆಂಥೆಂತಹ ಥ್ರಿಲ್ ಇರುತ್ತೋ ಕಾದು ನೋಡಿ. (ಫಿಲ್ಮಿಬೀಟ್)