»   » ರಿಯಲ್ ಸ್ಟಾರ್ ಉಪೇಂದ್ರರ 'ಉಪ್ಪಿ 2' ರಿಲೀಸ್ ಡೇ ಘೋಷಣೆ

ರಿಯಲ್ ಸ್ಟಾರ್ ಉಪೇಂದ್ರರ 'ಉಪ್ಪಿ 2' ರಿಲೀಸ್ ಡೇ ಘೋಷಣೆ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದ್ರೂ ಸುದ್ದಿಯಾಗುತ್ತೆ. ಇದಕ್ಕೆ ಒಳ್ಳೆ ಉದಾಹರಣೆ ಅಂದ್ರೆ ಅವರು ನಿರ್ದೇಶಿಸುತ್ತಿರುವ 'ಉಪ್ಪಿ 2'. ಬೆಟ್ಟದಷ್ಟು ನಿರೀಕ್ಷೆ ಇರುವ 'ಉಪ್ಪಿ 2' ಚಿತ್ರ ಇದೀಗ ಸದ್ಯದಲ್ಲೆ ತೆರೆ ಮೇಲೆ ಬರುತ್ತಿದೆ.

'ಸೂಪರ್' ಚಿತ್ರದ ನಂತರ ಉಪೇಂದ್ರ ಅವರ ಹೋಮ್ ಬ್ಯಾನರ್ ನಲ್ಲಿ ತಯಾರಾಗಿರೋ 'ಉಪ್ಪಿ 2' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ, ವೆರೈಟಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. [ಕಷ್ಟದಲ್ಲಿ ಬಂದ ಉಪೇಂದ್ರ ಪ್ರತಿಭೆಗಳನ್ನು ಚಿವುಟುತ್ತಿದ್ದಾರೆ!]


Kannada Movie 'Uppi2' releasing on August 14th

ಇದೀಗ ಉಪ್ಪಿ ಅಭಿಮಾನಿಗಳಿಗೆ ಹೊಸ ಸುದ್ದಿ ಏನಪ್ಪಾ ಅಂದ್ರೆ ಬಹುನಿರೀಕ್ಷಿತ 'ಉಪ್ಪಿ 2' ಚಿತ್ರ ಮುಂದಿನ ತಿಂಗಳು ಅಗಸ್ಟ್ 14, ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಗ್ರ್ಯಾಂಡ್ ರಿಲೀಸ್ ಕಾಣುತ್ತಿದೆ.


ರಿಯಲ್ ಸ್ಟಾರ್ ಉಪೇಂದ್ರ ಅದೇನೇ ಮಾಡಿದ್ರೂ ಡಿಫರೆಂಟಾಗಿ ಮಾಡುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಅಂದರೆ 'ಉಪ್ಪಿ 2' ಚಿತ್ರದಲ್ಲಿ ಅವರು ಧರಿಸಿರುವ ಗೆಟಪ್ ಮತ್ತು ಅನ್ಯಗ್ರಹ ಜೀವಿಗಳ ತರಹದ ಬೈಕ್. ಉಪ್ಪಿ ಕಲ್ಪನೆಯ ಬೈಕ್ ಹಿಂದುಗಡೆ ಟೈರ್, ಟ್ರ್ಯಾಕ್ಟರ್ ನ ತರಹದ ಎರಡು ಟೈರ್ ಗಳಿವೆ.[ಅಂದು ಅಪ್ಪು ಚಿತ್ರದಲ್ಲಿ ಉಪ್ಪಿ, ಇಂದು ಉಪ್ಪಿ ಚಿತ್ರದಲ್ಲಿ ಅಪ್ಪು]


Kannada Movie 'Uppi2' releasing on August 14th

ಉಪ್ಪಿ ಫೈಟ್ ಗಾಗಿ ಉಪಯೋಗಿಸಿರುವ ಕಾಸ್ಟೂಮ್ ಕೂಡಾ ವಿಚಿತ್ರವಾಗಿದೆ. ಅತ್ತ ಪೌರಾಣಿಕವೂ ಅಲ್ಲದ ಇತ್ತ ಮಾಡರ್ನ್ ಲುಕ್ ಅಲ್ಲದ ಡಿಫರೆಂಟ್ ಗೆಟಪ್ ನಲ್ಲಿ ಮಿಂಚಿದ್ದಾರೆ.


ಇನ್ನೂ 'ಉಪೇಂದ್ರ' ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದ ಗುರುಕಿರಣ್ ಅವರೇ 'ಉಪ್ಪಿ 2'. ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕ್ರಿಸ್ಟೀನಾ ಉಪೇಂದ್ರನಿಗೆ ನಾಯಕಿಯಾಗಿ ಡ್ಯುಯೆಟ್ ಹಾಡಿದ್ದಾರೆ. ಗಾಂಧಿನಗರದಲ್ಲಿ 'ಉಪ್ಪಿ 2', ಯಾವ ರೀತಿ ಹವಾ ಎಬ್ಬಿಸುತ್ತದೆ ಎಂದು ನೋಡಲು ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕಿದೆ.

English summary
Kannada Movie 'Uppi2' releasing on August 14th, The Movie features Upendra, Kristina. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada