»   » ಈ ವಾರ ಕನ್ನಡದಲ್ಲಿ ಮೂರು ವಿಭಿನ್ನ ಚಿತ್ರಗಳು ರಿಲೀಸ್!

ಈ ವಾರ ಕನ್ನಡದಲ್ಲಿ ಮೂರು ವಿಭಿನ್ನ ಚಿತ್ರಗಳು ರಿಲೀಸ್!

Posted By:
Subscribe to Filmibeat Kannada

ಈ ವಾರ ಸ್ಯಾಂಡಲ್ ವುಡ್ ನಲ್ಲಿ ತ್ರಿಬಲ್ ಧಮಾಕ. ಜೊತೆಗೆ ಮನಂರಜನೆಯ ಮಜಾ ಕೂಡ ಪಕ್ಕಾ. ಕನ್ನಡದಲ್ಲಿ ಈ ವಾರ ಮೂರು ಸಿನಿಮಾಗಳು ತೆರೆಕಾಣುತ್ತಿವೆ.

ಸತೀಶ್ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು', ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ 'ರಿಕ್ತ', ಹಾಗೂ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಅಭಿನಯದ 'ಏನ್ ನಿನ್ ಪ್ರಾಬ್ಲಮ್ಮ' ಚಿತ್ರಗಳು ಬಿಡುಗಡೆಯಾಗುತ್ತಿವೆ.

ಜನವರಿ 19 ರಂದು 'ರಿಕ್ತ'!

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ 'ರಿಕ್ತ' ನಾಳೆ ಅಂದ್ರೆ ಜನವರಿ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾರರ್ ಕಮ್ ಕಾಮಿಡಿಯ ಕಥಾಹಂದರವನ್ನ ಹೊಂದಿರುವ ಈ ಚಿತ್ರವನ್ನ ಅಮೃತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅಧ್ವಿಕ ಎಂಬ ನವನಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅರುಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.[ಕನ್ನಡ ಚಿತ್ರಗಳಿಗೆ ನಿಮ್ಮಿಂದಲೇ ಅನ್ಯಾಯ: ಸತೀಶ್ ನೀನಾಸಂ ಆಕ್ರೋಶ!]

ಜನವರಿ 20 ರಂದು 'ಬ್ಯೂಟಿಫುಲ್ ಮನಸ್ಸುಗಳು'!

ಜನವರಿ 20 ರಂದು ಸತೀಶ್ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಒಲವೇ ಮಂದಾರ', 'ಟೋನಿ', 'ಬುಲೆಟ್ ಬಸ್ಯ' ಅಂತಹ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಜಯತೀರ್ಥ ಆಕ್ಟನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ 'ನೀರ್ ದೋಸೆ' ಖ್ಯಾತಿಯ ನಿರ್ಮಾಪಕ ಪ್ರಸನ್ನ, ಬಂಡವಾಳ ಹಾಕಿದ್ದಾರೆ. ಇನ್ನು ಬಿಜೆ ಭರತ್ ಅವರ ಸಂಗೀತ ನಿರ್ದೇಶನವಿದ್ದು, ಕಿರಣ್ ಹಂಪಾಪುರ ಅವರ ಛಾಯಗ್ರಹಣ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕಿದೆ.[ಕನ್ನಡ ತಾರೆಯರು ಮೆಚ್ಚಿದ 'ರಿಕ್ತ' ಈ ವಾರ ಬಿಡುಗಡೆ!]

ಈ ವಾರ 'ಏನ್ ನಿನ್ ಪ್ರಾಬ್ಲಮ್ಮು' ತೆರೆಗೆ!

ಗಡ್ಡಪ್ಪ, ಸೆಂಚುರಿಗೌಡ, ಅಭಿಷೇಕ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಏನ್ ನಿನ್ ಪ್ರಾಬ್ಲಮ್ಮು' ಈ ವಾರ ತೆರೆಕಾಣುತ್ತಿದ್ದು, ಜನವರಿ 20ರಂದು ಬಿಗ್ ಸ್ಕ್ರೀನ್ ಗೆ ಲಗ್ಗೆಯಿಡುತ್ತಿದೆ. ಈ ಹಿಂದೆ 'ಗಾಲಿ', 'ರೈನ್ ಕೋಟ್', 'ಮಾತುಕತೆ' ಅಂತಹ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಗಾಲಿ ಲಕ್ಕಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಡಬಲ್ ಮೀನಿಂಗ್ ಡೈಲಾಗ್ ಗಳಿಂದ ಸುದ್ದಿ ಮಾಡಿರುವ ಈ ಚಿತ್ರದ ಹಣೆ ಬರಹ ಈ ವಾರ ನಿರ್ಧಾರವಾಗಲಿದೆ.['ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ ]

ತ್ರಿಬಲ್ ಧಮಾಕ, ನಿಮ್ಮ ಆಯ್ಕೆ ಯಾವುದು?

ರೊಮ್ಯಾಂಟಿಕ್, ಹಾರರ್ ಕಾಮಿಡಿ, ಜೊತೆಗೆ ಔಟ್ ಅಂಡ್ ಔಟ್ ಎಂಟರ್ ಟೈನ್ ಮೆಂಟ್ ಚಿತ್ರಗಳು ಈ ವಾರ ಥಿಯೇಟರ್ ಗೆ ಬರ್ತಿದ್ದು, ಈ ಮೂರು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.....

English summary
Kannada Actor Sathish Neenasam starrer Kannada Movie 'Beautiful Manasugalu', Sanchari Vijay starrer 'Riktha', 'Yen Nin Problem' Movies are Releasing on January 19th. here is the detil report....

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X