»   » ಈ ಶುಕ್ರವಾರದ ಸಿನಿಸಂತೆಯಲ್ಲಿ ನಿಮ್ಮ ಆಯ್ಕೆ ಯಾವುದು?

ಈ ಶುಕ್ರವಾರದ ಸಿನಿಸಂತೆಯಲ್ಲಿ ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಚಿತ್ರ ಪ್ರೇಮಿಗಳಿಗೆ ಈ ವಾರವೂ ಸಿನಿಮಾ ಸುಗ್ಗಿ. ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಸಿನಿಮಾಗಳು ಶುಕ್ರವಾರ ಸ್ಯಾಂಡಲ್ ವುಡ್ ಬೆಳ್ಳಿತೆರೆ ಮೇಲೆ ರಾರಾಜಿಸಲಿವೆ.

ಚಿತ್ರದ ಆರಂಭದಿಂದಲೂ ಪೋಸ್ಟರ್, ಟ್ರೈಲರ್, ಹೀಗೆ ಎಲ್ಲದರಲ್ಲೂ ಕುತೂಹಲ ಹುಟ್ಟುಹಾಕಿರುವ 'ಟೈಗರ್' ಈ ವಾರ ಘರ್ಜಸಿಲಿದೆ. ಒಂದು ಸಣ್ಣ ಗ್ಯಾಪ್ ತಗೊಂಡು ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ 'ಸಿಲಿಕಾನ್ ಸಿಟಿ' ಚಿತ್ರದ ಮೂಲಕ ಕಮ್ ಬ್ಯಾಕ್ ಆಗ್ತಿದ್ದಾರೆ. ಈ ಎರಡು ಚಿತ್ರಗಳ ಜೊತೆಯಲ್ಲಿ ಹೊಸಬರ 'ಸ್ಟೂಡೆಂಟ್ಸ್' ಮತ್ತು 'ಚಿತ್ತ ಚಂಚಲ' ಚಿತ್ರಗಳು ಥಿಯೇಟರ್ ಗೆ ಲಗ್ಗೆಯಿಡುತ್ತಿದೆ.

ಈ ನಾಲ್ಕು ಚಿತ್ರಗಳ ಸ್ಪೆಷಾಲಿಟಿ ಏನು? ಎಂಬುದನ್ನ ಮುಂದೆ ನೀಡಲಾಗಿದೆ. ಮುಂದೆ ಓದಿ.....

'ಟೈಗರ್' ಘರ್ಜನೆ

ಸಕ್ಸಸ್ ಫುಲ್ ನಿರ್ದೇಶಕ ನಂದಕಿಶೋರ್ ನಿರ್ದೇಶನ ಮಾಡಿರುವ 'ಟೈಗರ್' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುವ 'ಟೈಗರ್' ಸಿನಿಮಾದಲ್ಲಿ ಪ್ರದೀಪ್ ನಾಯಕನಾಗಿದ್ದು, Nyra Banerjee ಜೋಡಿಯಾಗಿದ್ದಾರೆ. ಉಳಿದಂತೆ ಚಿಕ್ಕಣ್ಣ, ಕೆ.ಶಿವರಾಂ, ರವಿಶಂಕರ್, ಸಾಧು ಕೋಕಿಲ, ರಂಗಾಯಣ ರಘು ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದ್ದು, ಅರ್ಜುನ್ ಜನ್ಯ ಸಂಗೀತವಿದೆ.

'ಟೈಗರ್' ಚಿತ್ರವನ್ನ ಹಾಡಿ ಹೊಗಳಿದ 'ಆಪ್ತಮಿತ್ರ' ಕಿಚ್ಚ ಸುದೀಪ್

ಸಿಲಿಕಾನ್ ಸಿಟಿ

ಶ್ರೀನಗರ ಕಿಟ್ಟಿ ಅಭಿನಯದ `ಸಿಲಿಕಾನ್ ಸಿಟಿ' ನಾಳೆ ಬಿಡುಗಡೆಯಾಗುತ್ತಿದೆ. ಮುರಳಿ ಗುರಪ್ಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅನೂಪ್ ಸೀಳಿನ್ ಸಂಗೀತವಿದೆ. ಶ್ರೀನಗರ ಕಿಟ್ಟಿ ಜತೆಯಲ್ಲಿ ಸೂರಜ್ ಗೌಡ, ಕಾವ್ಯ ಶೆಟ್ಟಿ, ಏಕ್ತಾ ರಾಥೋಡ್, ಚಿಕ್ಕಣ್ಣ, ಅಶೋಕ್, ತುಳಸಿ, ಗಿರಿ, ಕಡ್ಡಿ ವಿಶ್ವ, ಸಿದ್ದು ತಾರಾಗಣ ಈ ಚಿತ್ರದಲ್ಲಿದೆ. ಅಂದ್ಹಾಗೆ, ಸಿಲಿಕಾನ್ ಸಿಟಿ ಚಿತ್ರ ತಮಿಳಿನ `ಮೆಟ್ರೊ' ಚಿತ್ರದ ರಿಮೇಕ್. ಎಂ ರವಿ, ಮಂಜುಳ ಸೋಮಶೇಖರ್, ಶ್ರೀನಗರ ಕಿಟ್ಟಿ ಹಾಗೂ ಸಿ ಆರ್ ಸುರೇಶ್ ಜೊತೆಯಾಗಿ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.

ಶ್ರೀನಗರ ಕಿಟ್ಟಿ 'ಸಿಲಿಕಾನ್ ಸಿಟಿ' ತೆರೆಗೆ ಬರಲು ರೆಡಿ: ರಿಲೀಸ್ ಯಾವಾಗ?

'ಸ್ಟೂಡೆಂಟ್ಸ್' ತೆರೆಗೆ

ಯುವ ಪ್ರತಿಭೆಗಳೇ ಸೇರಿ ಮಾಡಿರುವ 'ಸ್ಟೂಡೆಂಟ್ಸ್' ಚಿತ್ರವೂ ಈ ವಾರ ತೆರೆಕಾಣುತ್ತಿದೆ. ಸಂತೋಷ್ ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣ ಕೂಡ ಮಾಡಿದ್ದಾರೆ. ಕಿರಣ್, ಸಚಿನ್ ಹೊಸಮನೆ, ಸಚಿನ್ ಪುರೋಹಿತ್, ಸುವರ್ಣ ಶೆಟ್ಟಿ, ಅಂಕಿತ, ಭವ್ಯ ಕೃಷ್ಣ, ರೇಖಾ ದಾಸ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಡ್ವರ್ಡ್ ಷಾ ಹಾಗೂ ಬಿ ಜೆ ಭರತ್ ಅವರ ಸಂಗೀತ, ವಿನು ಮನಸು ಅವರ ಹಿನ್ನಲೆ ಸಂಗೀತ, ಜೆ ಜೆ ಶರ್ಮ ಛಾಯಾಗ್ರಹಣ, ವಿನಯ್ ಕುಮಾರ್ ನಾಯ್ಡು ಸಂಕಲನ, ವಿ ಎಚ್ ಹೇಮಂತ್ ಹಾವೇರಿ ಅವರ ಸಂಭಾಷಣೆ, ನೆಲೆಮನೆ ರಾಘವೇಂದ್ರ ಸಾಹಿತ್ಯ ಚಿತ್ರಕ್ಕಿದೆ.

ಈ ವಾರ ತೆರೆ ಮೇಲೆ 'ಸ್ಟೂಡೆಂಟ್ಸ್'

ಚಿತ್ತ ಚಂಚಲ

ಚಿತ್ತ ಚಂಚಲ.....ಇದೊಂದು ಸಸ್ಪೆನ್ಸ್ ಥ್ರಿಲ್ಲಿಂಗ್ ಮೈಂಡ್ ಗೇಮ್ ಕಥೆ. ವೈಕು ಸುಂದರ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು, ಆಕ್ಷನ್ ಕಟ್ ಹೇಳಿದ್ದಾರೆ. ದಿವಮ್ ಕುಂದರ್, ಚಿತ್ರ ಶೆಣೈ, ಪ್ರಕಾಶ್ ಹೆಗ್ಗೋಡು, ಸೇರಿದಂತೆ ಹಲವರು ಪ್ರಮುಖ ತಾರಬಳಗದಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವನ್ನ ಕರುಣಾಕರ್ ಕುಂದಾರ್, ರಾಘವೇಂದ್ರ ನಾಯಕ್ ಎತ್ತಿನಟ್ಟಿ, ಶರತ್ ಕುಮಾರ್ ಕದ್ರಿ ನಿರ್ಮಾಣ ಮಾಡಿದ್ದಾರೆ.

ನಿಮ್ಮ ಆಯ್ಕೆ ಯಾವುದು?

ಈ ನಾಲ್ಕು ಚಿತ್ರಗಳಲ್ಲಿ ಈ ವಾರ ನಿಮ್ಮೆ ಆಯ್ಕೆ ಯಾವುದು. ಯಾವ ಚಿತ್ರವನ್ನ ಮೊದಲು ನೋಡಬೇಕು ಎಂದುಕೊಂಡಿದ್ದೀರಿ ಎಂದು ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ....

English summary
4 Kannada Movies Releasing On June 16th. Actor Srinagara Kitty Starrer 'Silicon City, Pradeep Starrer 'Tiger', 'Students' And 'Chitha Chanchala' Movies are Releasing this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada