»   » ಈ ಸಂಕ್ರಾಂತಿ ಹಬ್ಬಕ್ಕೆ ನೀವು ಯಾವ ಸಿನಿಮಾ ನೋಡ್ತೀರಾ?

ಈ ಸಂಕ್ರಾಂತಿ ಹಬ್ಬಕ್ಕೆ ನೀವು ಯಾವ ಸಿನಿಮಾ ನೋಡ್ತೀರಾ?

Posted By:
Subscribe to Filmibeat Kannada

ಈ ಸಂಕ್ರಾತಿ ಹಬ್ಬ ಸಿನಿರಸಿಕರಿಗೆ ಭರ್ಜರಿ ಹಬ್ಬವಾಗಲಿದೆ. ಯಾಕಂತೀರಾ? ಯಾಕೆಂದರೆ ಈ ಶುಕ್ರವಾರ (ಜನವರಿ 15) ಒಂದಲ್ಲಾ ಬರೋಬ್ಬರಿ 4 ಸಿನಿಮಾಗಳು ತೆರೆ ಕಾಣುತ್ತಿವೆ.ಅದರಲ್ಲೂ ಈ ಬಾರಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ವಿಶೇಷ 4 ಸಿನಿಮಾಗಳು ತೆರೆ ಕಾಣುತ್ತಿವೆ.

ಯೋಗರಾಜ್ ಭಟ್ರ 'ಪರಪಂಚ', ಹೊಸಬರ ಹಾರರ್ ಸಿನಿಮಾ 'ಲಾಸ್ಟ್ ಬಸ್' ಮತ್ತು ತರ್ಲೆ ನನ್ ಮಕ್ಳು ಸಿನಿಮಾ ಇಡೀ ಕರ್ನಾಟಕದಾದ್ಯಂತ ಈ ವಾರ ಭರ್ಜರಿಯಾಗಿ ತೆರೆ ಕಾಣುತ್ತಿದೆ.

ಈ ಸಂಕ್ರಾತಿ ಹಬ್ಬದ ದಿನ ಗ್ರ್ಯಾಂಡ್ ರಿಲೀಸ್ ಆಗುತ್ತಿರುವ ನಾಲ್ಕು ಚಿತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Kannada movies releasing this friday January 15th

ಭಟ್ಟರ 'ಪರಪಂಚ': ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಡಿ ಯೋಗರಾಜ್ ಭಟ್ ನಿರ್ಮಾಣದಲ್ಲಿ ನಿರ್ದೇಶಕ ಕ್ರಿಷ್ ಜೋಶಿ ಆಕ್ಷನ್-ಕಟ್ ಹೇಳಿರುವ 'ಪರಪಂಚ' ಸಿನಿಮಾ ಈ ವಾರ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿಯಾಗಿ ತೆರೆ ಕಾಣುತ್ತಿದೆ. ವೆಜ್ ಅಂಡ್ ನಾನ್ ವೆಜ್ ಎಂಬ ಅಡಿಬರಹ ಇರುವ ಈ ಸಿನಿಮಾದಲ್ಲಿ ದಿಗಂತ್, ಯೋಗರಾಜ್ ಭಟ್, ಅನಂತ್ ನಾಗ್, ರಾಗಿಣಿ ದ್ವಿವೇದಿ, ಅನಿತಾ ಭಟ್, ಚೇತನ್ ಗಂಧರ್ವ, ಭಾವನಾ, ರಂಗಾಯಣ ರಘು, ವಿ.ಮನೋಹರ್ ಮುಂತಾದವರು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ವೀರಸಮರ್ಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಅಲೌಕಿಕ ತಲೆಗೇರಿದಾಗ ನೀರಮಲು ಹಾಲಮಲು 'ಪರಪಂಚ' ಅಮಲು]

Kannada movies releasing this friday January 15th

'ಲಾಸ್ಟ್ ಬಸ್': ಗೋಲ್ಸ್ ಅಂಡ್ ಡ್ರೀಮ್ಸ್ ಲಾಂಛನದಲ್ಲಿ ಬಿ.ಕೃಷ್ಣಪ್ಪ, ಗುರುರಾಜ್ ಕುಲಕರ್ಣಿ, ಜಿ.ಎನ್.ಸಿ ರೆಡ್ಡಿ, ಪ್ರಶಾಂತ್ ಕಲ್ಲೂರ್ ಹಾಗೂ ಎಸ್.ಡಿ.ಅರವಿಂದ್ ನಿರ್ಮಾಣದಲ್ಲಿ, ಎಸ್.ಡಿ.ಅರವಿಂದ್ ಆಕ್ಷನ್-ಕಟ್ ಹೇಳಿರುವ 'ಲಾಸ್ಟ್ ಬಸ್' ಈ ವಾರ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ್ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದಲ್ಲಿ ಅವಿನಾಶ್ ನರಸಿಂಹ ರಾಜು, ಮಾನಸ ಜೋಶಿ, ಮೇಘಶ್ರೀ ಭಾಗವತರ್, ಸಮರ್ಥ್ ನರಸಿಂಹರಾಜು, ಸುದಾ ನರಸಿಂಹರಾಜು, ರಾಕ ಶಂಕರ್, ಲೋಕೇಶ್ ಆಚಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖ ತಾರಾಗಣದಲ್ಲಿ ಮಿಂಚಿದ್ದಾರೆ.[ನರಸಿಂಹರಾಜು ಮೊಮ್ಮಕ್ಕಳಿಂದ ಥ್ರಿಲ್ಲರ್ ಸಿನ್ಮಾ ಟ್ರೈಲರ್]

Kannada movies releasing this friday January 15th

ತರ್ಲೆ ನನ್ ಮಕ್ಳು : ಟೈಟಲ್ ನಿಂದಾಗಿ ಹಲವು ದಿನಗಳಿಂದ ಸುದ್ದಿಯಲ್ಲೇ ಇರುವ 'ತರ್ಲೆ ನನ್ಮಕ್ಳು' ಚಿತ್ರ ಜನವರಿ 15 ರಂದು ಬಿಡುಗಡೆ ಆಗಲಿದೆ. ಯರ್ರಾಬಿರ್ರಿ ಕತ್ರಿ ಪ್ರಯೋಗ ಮಾಡಿದ ನಂತ್ರ 'ತರ್ಲೆ ನನ್ಮಕ್ಳು' ಚಿತ್ರ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ನಿಮ್ಮಲ್ಲರ ಮುಂದೆ ಬರೋಕೆ ರೆಡಿಯಾಗಿದೆ. 'ತರ್ಲೆ ನನ್ಮಕ್ಳು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು 'ಜೋಗಿ' ಪ್ರೇಮ್ ಗರಡಿಯಲ್ಲಿ ಪಳಗಿರುವ ನವ ಪ್ರತಿಭೆ ರಾಕೇಶ್. ಅಂದ್ಹಾಗೆ, ತರ್ಲೆ ಟೀಮ್ ನಲ್ಲಿ ಯತಿರಾಜ್ ಜೊತೆ ನಾಗಶೇಖರ್ ಮತ್ತು ಶುಭಾ ಪುಂಜ ಕೂಡ ಇದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತರ್ಲೆಗಳ ಆಟ ಶುರುವಾಗಲಿದೆ.

English summary
Prakash Starrer 'Devara Nadalli', Priyanka Upendra and Tejus starrer 'Priyanka', 'Last Bus', 'Parapancha' movies are releasing this week (January 15th). Here is the complete report on all the movies. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada