»   » ನಾದಬ್ರಹ್ಮ ಹಂಸಲೇಖ ಆರೋಗ್ಯದಲ್ಲಿ ಚೇತರಿಕೆ

ನಾದಬ್ರಹ್ಮ ಹಂಸಲೇಖ ಆರೋಗ್ಯದಲ್ಲಿ ಚೇತರಿಕೆ

Posted By:
Subscribe to Filmibeat Kannada

ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯದ ಮೂಲಕ ಸಿನಿ ಪ್ರೇಮಿಗಳನ್ನು ಪರವಶಗೊಳಿಸಿದ, ಸ್ಯಾಂಡಲ್ ವುಡ್ ನ 'ನಾದಬ್ರಹ್ಮ' ಅಂತಲೇ ಖ್ಯಾತಿ ಪಡೆದಿರುವ ಸಂಗೀತ ನಿರ್ದೇಶಕ ಹಂಸಲೇಖ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಕಳೆದ ಬುಧವಾರ ರಾತ್ರಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಹಂಸಲೇಖ ಅವರನ್ನ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿಯಿಂದಲೇ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಅವರ ಆರೋಗ್ಯ ಪರಿಶೀಲಿಸಲಾಗುತ್ತಿದೆ. [ಪ್ರೀತಿಗೆ, ಅವರ ರೀತಿಗೆ - ಹಂಸಲೇಖಗೆ ಶುಭಾಶಯಗಳು]

Kannada Music Director Hamsalekha health condition better

ನಿನ್ನೆ ಹಂಸಲೇಖ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಿಸಲಾಗಿದೆ ಅಂತ ಕುಟುಂಬದ ಮೂಲಗಳು ತಿಳಿಸಿವೆ. ಆಂಜಿಯೋಪ್ಲಾಸ್ಟಿ ನಂತರ ಹಂಸಲೇಖ ಚೇತರಿಸಿಕೊಂಡಿದ್ದಾರೆ.

''ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಹಂಸಲೇಖ ಆರೋಗ್ಯವಾಗಿದ್ದಾರೆ'' ಅಂತ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹಂಸಲೇಖ ಅವರ ಆರೋಗ್ಯ ವಿಚಾರಿಸಲು ಆಪ್ತರು, ಬಂಧುಗಳು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ.

English summary
Kannada Music Director Hamsalekha, who suffered a mild heart attack was admitted in Fortis Hospital, Bengaluru on Wednesday (Aug 12th) has recovered. After Angioplasty Hamsalekha's health condition improves say family sources.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada