For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದಂತೆ ಟಾಲಿವುಡ್ ಗೆ ಹಾರಿದ ಕನ್ನಡ ಮೈನಾ

  By Rajendra
  |

  ಪರಭಾಷೆಯಲ್ಲಿ ಗೆದ್ದ ಚಿತ್ರಗಳು ಕನ್ನಡದಲ್ಲಿ ರೀಮೇಕ್ ಆಗುವುದು ಮಾಮೂಲು ಸಂಗತಿ. ಕನ್ನಡ ಚಿತ್ರಗಳು ಪರಭಾಷೆಗೆ ರೀಮೇಕ್ ಆಗುವುದು ಅಪರೂಪದ ಸಂಗತಿ. ಈಗ ಇಂತಹದ್ದೇ ಒಂದು ಅಪರೂಪದ ಸಂಗತಿ ನಾಗಶೇಖರ್ ಅವರ ನೈಜ ಘಟನೆ ಆಧಾರಿತ 'ಮೈನಾ' ಚಿತ್ರಕ್ಕೆ ಎದುರಾಗಿದೆ.

  ಮೈನಾ ಚಿತ್ರ ಅರ್ಧ ಸೆಂಚುರಿ ಬಾರಿಸಲು ಸಿದ್ಧವಾಗಿದೆ. ಬಾಕ್ಸ್ ಆಫೀಸಲ್ಲೂ ಚಿತ್ರ ಸೌಂಡ್ ಮಾಡಿದೆ. ಸಹಜವಾಗಿ ಚೇತನ್ ಕುಮಾರ್ ಹಾಗೂ ನಿತ್ಯಾ ಮೆನನ್ ಅಭಿನಯದ ಈ ಚಿತ್ರದ ಮೇಲೆ ಟಾಲಿವುಡ್ ಕಣ್ಣು ಬಿದ್ದಿದೆ. ಸದ್ದಿಲ್ಲದಂತೆ ಈ ಚಿತ್ರ ಈಗ ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ.

  ಎನ್.ಎಸ್. ರಾಜಶೇಖರ್ ನಿರ್ಮಿಸುತ್ತಿರುವ ತೆಲುಗು ಮೈನಾ ಚಿತ್ರಕ್ಕೆ ತೆಲುಗು ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. ತೆಲುಗು ಪ್ರೇಕ್ಷಕರ ಮನೋಭಾವಕ್ಕೆ ತಕ್ಕಂತೆ ಒಂದಷ್ಟು ಹಾಸ್ಯ ಸನ್ನಿವೇಶಗಳನ್ನು ಚಿತ್ರದಲ್ಲಿ ಸೇರಿಸಲಾಗುತ್ತಿದೆ.

  ತೆಲುಗು ಚಿತ್ರದಲ್ಲಿ ಯಾರ್‍ಯಾರು ಅಭಿನಯಿಸುತ್ತಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಮೂಲ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ತೆಲುಗು ರೀಮೇಕ್ ನಲ್ಲಿ ಬದಲಾಯಿಸಲಾಗುತ್ತಿದೆಯಂತೆ. ಮೈನಾ ತೆಲುಗು ರೀಮೇಕ್ ಚಿತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.

  ತೆಲುಗು ಚಿತ್ರದ ಬಳಿಕ ತಮಿಳು ಹಾಗೂ ಮಲಯಾಳಂನತ್ತಲೂ ಮೈನಾ ಚಿತ್ರ ಹಾರಲಿದೆ ಎನ್ನುತ್ತವೆ ಮೂಲಗಳು. ಪರಭಾಷಾ ಚಿತ್ರಗಳ ತೀವ್ರ ಪೈಪೋಟಿ ನಡುವೆ ಕನ್ನಡ ಚಿತ್ರಗಳು ಮುನ್ನುಗ್ಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. (ಏಜೆನ್ಸೀಸ್)

  English summary
  Kannada true based story film 'Myna' to remade in Telugu. This romantic drama stars Nithya Menon and Chetan in lead roles and Sarath Kumar is playing the role of a police officer. A major part of Myna is being reshot to suit the sensibilities of Telugu audience and buzz is that even the climax is being changed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X