For Quick Alerts
  ALLOW NOTIFICATIONS  
  For Daily Alerts

  ಚಂದನವನದ ಮಹಾನಟಿ ಎಲ್.ವಿ.ಶಾರದಾ ಅವರ ಒಂದಷ್ಟು ವಿವರ

  By ಶಶಿಧರ ಚಿತ್ರದುರ್ಗ
  |

  'ಫಣಿಯಮ್ಮ' ಸಿನಿಮಾ ಖ್ಯಾತಿಯ ನಟಿ ಎಲ್.ವಿ.ಶಾರದಾ (78 ವರ್ಷ) ಇಂದು ಬೆಳಗ್ಗೆ ಅಗಲಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

  'ವಂಶವೃಕ್ಷ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಚೊಚ್ಚಲ ಚಿತ್ರಕ್ಕೇ ರಾಜ್ಯ ಸರ್ಕಾರದ ಶ್ರೇಷ್ಠನಟಿ ಪ್ರಶಸ್ತಿ ಪಡೆದರು. ನಂತರ ಪ್ರೇಮಾಕಾರಂತ ನಿರ್ದೇಶನದ 'ಫಣಿಯಮ್ಮ' ಚಿತ್ರದ ಪಾತ್ರ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು.

  ಕನ್ನಡ ಚಿತ್ರರಂಗದ ಹಿರಿಯ ನಟಿ ಎಲ್ ವಿ ಶಾರದಾ ನಿಧನ

  kannada seniors actress l v sharada passes away today

  ಸಿದ್ದಲಿಂಗಯ್ಯ ನಿರ್ದೇಶನದ 'ಬೂತಯ್ಯನ ಮಗ ಅಯ್ಯು' ಅವರ ಮತ್ತೊಂದು ಪ್ರಮುಖ ಸಿನಿಮಾ. ವ್ಯಾಪಾರಿ ಚಿತ್ರಗಳ ಬಗ್ಗೆ ಆಸಕ್ತಿ ತೋರದ ಅವರು ಕಲಾತ್ಮಕ ಚಿತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರು. 'ವಾತ್ಸಲ್ಯ' ಚಿತ್ರದ ಅಭಿನಯಕ್ಕಾಗಿ ಅವರಿಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಂದಿದೆ. 'ಆದಿ ಶಂಕರಾಚಾರ್ಯ', 'ಮಧ್ವಾಚಾರ್ಯ', 'ನಕ್ಕಳಾ ರಾಜಕುಮಾರಿ', 'ಒಂದು ಪ್ರೇಮದ ಕಥೆ' ಅವರ ಇತರೆ ಕೆಲವು ಸಿನಿಮಾಗಳು.

  kannada seniors actress l v sharada passes away today

  ನಟನೆಯಿಂದ ವಿಮುಖರಾದ ನಂತರ ಶಾರದಾ ಸಾಕ್ಷ್ಯಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು ಕೆರೆಗಳ ಬಗ್ಗೆ ಅವರು ತಯಾರಿಸಿದ 'ಕೆರೆ ಹಾಡು' ವಿಶೇಷ ಮನ್ನಣೆಗೆ ಪಾತ್ರವಾಗಿತ್ತು. 'ಮೈಸೂರು ವೀಣೆ' ಕುರಿತ ಸಾಕ್ಷ್ಯಚಿತ್ರವೂ ಸೇರಿದಂತೆ ದೂರದರ್ಶನಕ್ಕಾಗಿ ಅವರು ಕೆಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದರು.

  kannada seniors actress l v sharada passes away today

  ದಶಕಗಳ ಹಿಂದೆ ತ್ರಿವೆಂಡ್ರಮ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವರು ಜ್ಯೂರಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ್ದ ಎಲ್.ಎಸ್.ವೆಂಕಾಜಿರಾಯರ ಪುತ್ರಿ ಎಲ್.ವಿ.ಶಾರದಾ.

  English summary
  Kannada seniors actress, 'Paniyamma' fame L V Sharada passes away Today in Bengaluru. She is one of the great kannada actress. Her popular movies are 'Boothayyana Maga Ayyu', 'Vamshavruksha'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X