For Quick Alerts
  ALLOW NOTIFICATIONS  
  For Daily Alerts

  BREAKING: 'ಮಗಳು ಜಾನಕಿ' ಖ್ಯಾತಿಯ ಕಿರುತೆರೆ ಕಲಾವಿದ ಮಂಡ್ಯ ರವಿ ವಿಧಿವಶ

  |

  ಕನ್ನಡ ಕಿರುತೆರೆಯ ಚಿರಪರಿಚಿತ ನಟ ಮಂಡ್ಯ ರವಿ ಇಂದು (ಸಪ್ಟೆಂಬರ್​14) ವಿಧಿವಶರಾಗಿದ್ದಾರೆ.

  ಕಳೆದ ಕೆಲದಿನಗಳಿಂದ ಲಿವರ್​ ಸಿರೋಸಿಸ್​​ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಹವ್ಯಾಸಿ ನಾಟಕ ತಂಡದ ಕಲಾವಿದರಾಗಿದ್ದ ಮಂಡ್ಯ ರವಿ ಅವರ ಪೂರ್ಣ ಹೆಸರು ರವಿ ಪ್ರಸಾದ್​ ಎಂ. ಟಿ.ಎಸ್​ ನಾಗಾಭರಣ ಅವರ ನಿರ್ದೇಶನದ ಮಹಾಮಾಯಿ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅವರು, ಸಿನಿಮಾಗಳಲ್ಲೂ ನಟಿಸಿದ್ದರು.

  ಖ್ಯಾತ ನಿರ್ದೇಶಕ ಟಿ.ಎನ್​ ಸೀತಾರಾಮ್​ ಅವರ ಆತ್ಮೀಯ ನಟರಾದ ಮಂಡ್ಯ ರವಿ ಪುಟ್ಟಗೌರಿ ಮದುವೆ, ಮಗಳು ಜಾನಕಿ, ಯಶೋಧೆ, ಚಿತ್ರಲೇಖ, ನಮ್ಮನೆ ಯುವರಾಣಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಪ್ರಸಾರವಾಗುತ್ತಿದ್ದ ವರಲಕ್ಷ್ಮಿ ಸ್ಟೋರ್ಸ್​ ಧಾರವಾಹಿಯಲ್ಲಿ ಹಿರಿಯಣ್ಣನ ಪಾತ್ರದಲ್ಲಿ ನಟಿಸಿದ್ದರು.

  ರವಿ ಅವರ ನಟನಾ ವೃತ್ತಿಗೆ ಬೆನ್ನೆಲುಬಾಗಿದ್ದ ನಿರ್ದೇಶಕ ಟಿ.ಎನ್.ಸೀತಾರಾಮ್, ತಮ್ಮ ನೆಚ್ಚಿನ ನಟನ ನಿಧನಕ್ಕೆ ಫೇಸ್‌ಬುಕ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ''ಮಗಳು ಜಾನಕಿ ಯ 'ಚಂದು ಭಾರ್ಗಿ' ರವಿ ಅಸ್ತಂಗತ. ಇನ್ನೂ 42..ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ. ಅತ್ಯಂತ ಆಘಾತಕಾರಿ'' ಎಂದು ಬರೆದಿದ್ದಾರೆ. ಟಿ.ಎನ್.ಸೀತಾರಾಮ್ ನಿರ್ದೇಶನದ ಹಲವು ಧಾರಾವಾಹಿಗಳಲ್ಲಿ ಮಂಡ್ಯ ರವಿ ನಟಿಸಿದ್ದರು. ಇವರ ಧಾರಾವಾಹಿಗಳ ಮೂಲಕವೇ ಜನಪ್ರಿಯತೆ ಗಳಿಸಿದ್ದರು ರವಿ.

  English summary
  Magalu Janaki Kannada serial actor Mandya Ravi passed Away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X