For Quick Alerts
  ALLOW NOTIFICATIONS  
  For Daily Alerts

  '6-5=2' ಚಿತ್ರದ ನಿಜವಾದ ಕಥೆ ಇಲ್ಲಿದೆ ಓದಿ

  By ಜೀವನರಸಿಕ
  |

  ಕೋಟಿಗಟ್ಟಲೆ ಸುರಿದು ಸಿನಿಮಾ ನಿರ್ಮಿಸುತ್ತಿರುವ ಕನ್ನಡದ ನಿರ್ಮಾಪಕರಿಗೆ ಶಾಕ್ ಆಗಿದೆ. ಕನ್ನಡದ '6-5=2' ಅನ್ನೋ ಹಾರರ್ ಸಿನಿಮಾ ಬಂದಾಗ ಎಲ್ಲೂ ಪ್ರಚಾರ ಪಡೆದುಕೊಳ್ಳದ ಈ ಸಿನಿಮಾ ಥಿಯೇಟರ್ ನಲ್ಲಿ ಒಂದು ವಾರ ಇರೋದೇ ಕಷ್ಟ ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ.

  ಹೊಸಬರ ಈ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ ಇದೆ. ಚಿತ್ರಮಂದಿರದ ಪ್ರತಿ ಶೋಗಳೂ ಹೌಸ್ ಫುಲ್. ಕೇವಲ ಕೆಲವೇ ಕೆಲವು ಲಕ್ಷಗಳ ಬಜೆಟ್ ನ '6-5=2' ಈಗ ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ತಯಾರಾಗಲಿದೆ.

  ತಮಿಳಿನಲ್ಲಿ ಚಿತ್ರದ ರೈಟ್ಸ್ ಈಗಾಗಲೇ ರು.40 ಲಕ್ಷಕ್ಕೆ ಮಾರಾಟವಾಗಿದೆ. ಚಿತ್ರದ ಹಿಂದಿ ರೈಟ್ಸ್ ಕೂಡ ಭರ್ಜರಿ ಬೇಡಿಕೆ ಬಂದಿದೆಯಂತೆ. ಒಟ್ಟಾರೆ ಒಂದು ಸಣ್ಣ ಗೆಳೆಯರ ತಂಡ ಮಾಡಿದ ಪ್ರಯತ್ನಕ್ಕೆ ಸ್ಯಾಂಡಲ್ ವುಡ್ ಬೆಚ್ಚಿಬಿದ್ದಿದೆ. ['6-5=2' ವಿಮರ್ಶೆ: ಮೀಟರ್ ಇರುವವರಿಗೆ ಮಾತ್ರ]

  ಥಿಯೇಟರ್ ಒಳಗೆ ಚಿತ್ರಪ್ರಿಯರು ಕ್ಷಣ ಕ್ಷಣಕ್ಕೂ ಬರೋ ಹಾರರ್ ಸೀನ್ ಗಳನ್ನ ಸೌಂಡ್ ಗಳನ್ನ ನೋಡಿ ಶಾಕ್ ಆದರೆ, ಹೊರಗೆ ಕೋಟಿಗಟ್ಟಲೆ ಸುರಿದ ಸಿನಿಮಾ ಮಂದಿ ಲಕ್ಷಗಳ ಸಿನಿಮಾ ಮಾಡ್ತಿರೋ ಕಮಾಲ್ ನೋಡಿ ಶಾಕ್ ಆಗ್ತಿದ್ದಾರೆ. ಇದು ಸಿನಿಮಾದಲ್ಲಿ ನೋಡೋ ಕಥೆ. ನೀವು ನಿಜವಾದ ಕಥೆ ಕೇಳಿದ್ರೆ ಮತ್ತೊಂದು ಶಾಕ್ ಖಂಡಿತ ಸ್ಲೈಡ್ ನಲ್ಲಿ ನೋಡಿ.

  ನಾಪತ್ತೆಯಾಗೋ ಟ್ರೆಕ್ಕಿಂಗ್ ಕ್ರೇಜಿ ಮೈಂಡ್ ಗಳ ಕಥೆ

  ನಾಪತ್ತೆಯಾಗೋ ಟ್ರೆಕ್ಕಿಂಗ್ ಕ್ರೇಜಿ ಮೈಂಡ್ ಗಳ ಕಥೆ

  ಅಂದಹಾಗೆ ಇದು ಪಶ್ಚಿಮ ಘಟ್ಟದಲ್ಲಿ ಬರೋ ಗುಂಡ್ಯ ಅರಣ್ಯ ಪ್ರದೇಶಕ್ಕೆ ಬಂದು ನಾಪತ್ತೆಯಾಗೋ ಟ್ರೆಕ್ಕಿಂಗ್ ಕ್ರೇಜಿ ಮೈಂಡ್ ಗಳ ಕಥೆ. ಟ್ರೆಕ್ಕಿಂಗೆ ಹೋದ ಆರು ಜನರಲ್ಲಿ ಕೊನೆಗೆ ಐದು ಜನರು ಸತ್ತು ಒಬ್ಬರು ಮಾತ್ರ ಉಳಿದುಕೊಳ್ಳೋ ಕಥೆ ಇದು.

  ಈ ದುರಂತದಲ್ಲಿ ಒಬ್ಬರೂ ಬದುಕಿ ಉಳಿದಿಲ್ಲ

  ಈ ದುರಂತದಲ್ಲಿ ಒಬ್ಬರೂ ಬದುಕಿ ಉಳಿದಿಲ್ಲ

  6-5=2 ಅನ್ನೋ ಸಿನಿಮಾದಲ್ಲಿ ನೋಡೋದು ಕಟ್ಟುಕಥೆ ಆದರೆ ನಿಜವಾದ ಕಥೆ ಇಲ್ಲಿದೆ. ಈ ಕಥೆ ನಡೆಯೋದು ಅಕ್ಟೋಬರ್ ತಿಂಗಳಲ್ಲಿ ಇಲ್ಲಿಗೆ ಬರೋದು ಬೆಂಗಳೂರಲ್ಲಿ ಲಕ್ಷಗಟ್ಟಲೆ ಸಂಪಾದನೆ ಮಾಡ್ತಿದ್ದ ರಿಚ್ ವ್ಯಕ್ತಿಗಳಿದ್ದ ಒಂದು ತಂಡ.

  ಅದೇ ಜಾಗಕ್ಕೆ ಬಂದು ಹೋಗ್ತಿದ್ದವರು

  ಅದೇ ಜಾಗಕ್ಕೆ ಬಂದು ಹೋಗ್ತಿದ್ದವರು

  ಇಷ್ಟಕ್ಕೂ ಈ ಅರಣ್ಯದಲ್ಲಿ ಟ್ರೆಕ್ಕಿಂಗ್ ಮಾಡ್ತಿದ್ದ ಅವರು ಅಲ್ಲಿಗೆ ಹೊಸಬರೇನಲ್ಲ. ಐದಾರು ವರ್ಷಗಳಿಂದ ಅದೇ ಅಕ್ಟೋಬರ್ ನಲ್ಲಿ ಅದೇ ಜಾಗಕ್ಕೆ ಬಂದು ಹೋಗ್ತಿದ್ದವರು.

  ಒಂದಷ್ಟು ಆಹಾರ ಕಟ್ಟಿಸಿಕೊಂಡು ಕಾಡಿನೊಳಕ್ಕೆ ಪ್ರವೇಶ

  ಒಂದಷ್ಟು ಆಹಾರ ಕಟ್ಟಿಸಿಕೊಂಡು ಕಾಡಿನೊಳಕ್ಕೆ ಪ್ರವೇಶ

  ಆದರೆ 2010 ಅಕ್ಟೋಬರ್ ನಲ್ಲಿ ಆ ಸ್ಥಳಕ್ಕೆ ಬಂದಾಗ ಮಾತ್ರ ಅವರ ಗ್ರಹಚಾರ ಕೆಟ್ಟಿತ್ತು. ಅವರು ಸಕಲೇಶಪುರಕ್ಕೆ ಬಂದು ಎರಡು ದಿನ ತಿನ್ನೋಕೆ ಬೇಕಾದ ಒಂದಷ್ಟು ಆಹಾರ ಕಟ್ಟಿಸಿಕೊಂಡು ಕಾಡಿನೊಳಕ್ಕೆ ಪ್ರವೇಶ ಮಾಡಿದರು.

  ಧೋ ಅಂತ ಮಳೆ ಸುರಿಯೋಕೆ ಶುರುವಾಗಿತ್ತು

  ಧೋ ಅಂತ ಮಳೆ ಸುರಿಯೋಕೆ ಶುರುವಾಗಿತ್ತು

  ಅವರು ಕಾಡಿನೊಳಕ್ಕೆ ಎಂಟ್ರಿಕೊಟ್ಟಿದ್ದು 10 ಗಂಟೆಯ ಬೆಳಿಗ್ಗೆ, ಆ ವೇಳೆಗೆಲ್ಲಾ ಸೂರ್ಯ ಕಂಗೊಳಿಸ್ತಾ ಬಿಸಿಲು ಚೆಲ್ತಿದ್ದ. ಆದರೆ ಅದಾದ 2 ಗಂಟೆಯ ನಂತರ ಅಂದರೆ 12 ಗಂಟೆ ಸುಮಾರಿಗೆ ಧೋ ಅಂತ ಮಳೆ ಸುರಿಯೋಕೆ ಶುರುವಾಗಿತ್ತು.

  ಆ ಆರೂ ಜನರಿಗೆ ವಾಪಾಸ್ ಬರೋಕಾಗ್ಲಿಲ್ವಾ

  ಆ ಆರೂ ಜನರಿಗೆ ವಾಪಾಸ್ ಬರೋಕಾಗ್ಲಿಲ್ವಾ

  ಮಲೆನಾಡ ಮಳೆ ಅಂದಮೇಲೆ ಕೇಳಬೇಕಾ. ಹೆಚ್ಚೂ ಕಡಿಮೆ ಎರಡೂವರೆ ದಿನ ಬಿಡದೆ ಮಳೆ ಸುರೀತಾನೇ ಇತ್ತು. ಆ ಮಳೆಗೆ ಸಿಕ್ಕ ಆ ಆರೂ ಜನರಿಗೆ ವಾಪಾಸ್ ಬರೋಕಾಗ್ಲಿಲ್ವಾ. ಅಥವಾ ಅಲ್ಲಿ ಕಾಡುಪ್ರಾಣಿಗಳ ಕೈಗೆ ಸಿಕ್ಕಿ ಸತ್ತರೋ ಇಲ್ಲ ನಕ್ಸಲರ ಕೈಯ್ಯಲ್ಲಿ ಕೊಲೆಯಾಗಿ ಹೋದ್ರೋ ಗೊತ್ತಿಲ್ಲ.

  ಆರು ಜನರಲ್ಲಿ ಒಂದು ತುಂಡು ಬಟ್ಟೆ ಕೂಡ ಸಿಕ್ಕಲಿಲ್ಲ

  ಆರು ಜನರಲ್ಲಿ ಒಂದು ತುಂಡು ಬಟ್ಟೆ ಕೂಡ ಸಿಕ್ಕಲಿಲ್ಲ

  ಅಕ್ಕಪಕ್ಕದ ಊರಿನವರೆಲ್ಲ ಒಂದಿಡೀ ವಾರ ಹುಡುಕಿದ್ರೂ ಕಾಡಲ್ಲಿ ಒಂದು ಸಣ್ಣ ಸುಳಿವೂ ಸಿಕ್ಕಲಿಲ್ಲ. ಆಮೇಲೆ ಹೆಲಿಕಾಫ್ಟರ್ ಸಹಾಯದಿಂದಲೂ ಹುಡುಕಲಾಯ್ತೂ. ಎಷ್ಟೇ ಪ್ರಯತ್ನ ಮಾಡಿದ್ರೂ ಆರು ಜನರಲ್ಲಿ ಒಂದು ತುಂಡು ಬಟ್ಟೆ ಕೂಡ ಸಿಕ್ಕಲಿಲ್ಲ.

  ಗುಂಡ್ಯ ಅರಣ್ಯದಲ್ಲಿ ನಡೆದ ನೈಜ ಕಥೆ

  ಗುಂಡ್ಯ ಅರಣ್ಯದಲ್ಲಿ ನಡೆದ ನೈಜ ಕಥೆ

  ಇದಾದ 15 ದಿನಗಳ ನಂತರ ಒಂದು ಅಸ್ಥಿಪಂಜರ ಮಾತ್ರ ಕಾಡಿನೊಳಗೆ ಸಿಕ್ಕಿತ್ತು. ಇದು ಮಂಗಳೂರು ಧರ್ಮಸ್ಥಳಕ್ಕೆ ಹೋಗೋ ದಾರಿಯಲ್ಲಿ ಸಿಕ್ಕೋ ಗುಂಡ್ಯ ಅರಣ್ಯದಲ್ಲಿ ನಡೆದ ನೈಜ ಕಥೆ. ಏನೇ ಆಗ್ಲಿ ಚಿತ್ರತಂಡದವ್ರೂ ಕೂಡ ಕಥೆಯನ್ನ ಚೆನ್ನಾಗಿ ಹೆಣೆದು ಅಷ್ಟೇ ಅದ್ಭುತವಾಗಿ ತೆರೆಗೆ ತಂದಿದ್ದಾರೆ.

  English summary
  Here is the real story of Kannada horror movie 6-5=2. It was biggest mystery in the history of Kannada film industry, ever since the movie 6-5=2 (Six Minus Five Equals Two) got released on November 29, 2013. Since the cast and crew of the movie remained anonymous, even for the people of Gandhinagara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X