For Quick Alerts
  ALLOW NOTIFICATIONS  
  For Daily Alerts

  KGF 2 : ಕನ್ನಡ ಭಾಷೆಯದ್ದೇ 'ಕೆಜಿಎಫ್ 2' ಬೇಕು ಎಂದ ಕನ್ನಡಿಗರಿಗೆ ಚಿತ್ರತಂಡ ಹೇಳಿದ್ದೇನು?

  |

  ವಿಶ್ವದಾದ್ಯಂತ 'KGF 2' ಸಿನಿಮಾ ಬೇಜಾನ್ ಸೌಂಡ್ ಮಾಡುತ್ತಿದೆ. ಐದೂ ಭಾಷೆಯಲ್ಲೂ ರಾಕಿ ಭಾಯ್ ಮತ್ತು ತಂಡ ಭರ್ಜರಿ ಪ್ರಚಾರ ಮಾಡುತ್ತಿದೆ. ದೆಹಲಿ, ಮುಂಬೈ ಎಲ್ಲಿ ನೋಡಿದರೂ 'ಕೆಜಿಎಫ್ 2' ಸಿನಿಮಾದ್ದೇ ಹವಾ. ಇಂದು (ಏಪ್ರಿಲ್ 07) ಚೆನ್ನೈನಲ್ಲಿ ಯಶ್ ಸಿನಿಮಾ ಬಗ್ಗೆ ಪ್ರಚಾರ ಮಾಡಲಿದ್ದಾರೆ.

  'ಕೆಜಿಎಫ್ 2' ಸಿನಿಮಾದ ರೇಂಜ್ ಬದಲಾಗಿದೆ. ಈ ಸಿನಿಮಾವೀಗ ಪ್ಯಾನ್ ಇಂಡಿಯಾ ಲೆವೆಲ್ ಅನ್ನೂ ಮೀರಿಸುತ್ತಿದೆ. ಕಳೆದೊಂದು ವಾರದಿಂದ 'ಕೆಜಿಎಫ್ 2' ಮಾಡುತ್ತಿರುವ ಸದ್ದು ನೋಡಿದರೆ, ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುವುದು ಪಕ್ಕಾ ಎಂದೇ ಭವಿಷ್ಯ ನುಡಿಯುತ್ತಿದ್ದಾರೆ.

  Prashnath Neel: 8 ವರ್ಷದ ಬಳಿಕವೇ ಪ್ರಶಾಂತ್ ನೀಲ್ ಕನ್ನಡ ಚಿತ್ರ ಮಾಡೋದು, ಕಾರಣ ಇಲ್ಲಿದೆ!Prashnath Neel: 8 ವರ್ಷದ ಬಳಿಕವೇ ಪ್ರಶಾಂತ್ ನೀಲ್ ಕನ್ನಡ ಚಿತ್ರ ಮಾಡೋದು, ಕಾರಣ ಇಲ್ಲಿದೆ!

  ಪ್ಯಾನ್ ಇಂಡಿಯಾ ಸಿನಿಮಾ ಯಾವುದೆ ರಿಲೀಸ್ ಆದರೂ, ಕರ್ನಾಟಕದಲ್ಲಿ ಕನ್ನಡ ವರ್ಷನ್ ರಿಲೀಸ್ ಆಗಲ್ಲ. ಹೆಸರಿಗಷ್ಟೇ ಪ್ಯಾನ್ ಇಂಡಿಯಾ ಸಿನಿಮಾ. ಆದರೆ, ಇದು ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳೇ ಬಿಡುಗಡೆಯಾಗುತ್ತವೆ ಎನ್ನುವ ಆರೋಪವಿತ್ತು. ಈಗ ಕನ್ನಡದ್ದೇ ಫ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಕರ್ನಾಟಕದಲ್ಲಿ ಕನ್ನಡ ಅವತರಣಿಕೆಯನ್ನೇ ಬಿಡುಗಡೆ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

  ಕನ್ನಡದ 'ಕೆಜಿಎಫ್ 2' ಚಿತ್ರವನ್ನೇ ಬಿಡುಗಡೆ ಮಾಡಿ

  ಕನ್ನಡದ 'ಕೆಜಿಎಫ್ 2' ಚಿತ್ರವನ್ನೇ ಬಿಡುಗಡೆ ಮಾಡಿ

  RRR ಸಿನಿಮಾದಿಂದ ಹಿಡಿದು ಈ ಹಿಂದೆ ಬಿಡುಗಡೆಯಾದ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳೂ ಕೂಡ ಕನ್ನಡಕ್ಕೆ ಡಬ್ ಆಗಿವೆ. ಆ ಸಿನಿಮಾಗಳು ಕರ್ನಾಟಕದಲ್ಲೂ ಬಿಡುಗಡೆಯಾಗಿವೆ. ಆದರೆ, ಕನ್ನಡ ಭಾಷೆಯಲ್ಲಿ ಅಲ್ಲ. ತೆಲುಗು, ಹಿಂದಿ ಭಾಷೆಯಲ್ಲಿಯೇ ಈ ಸಿನಿಮಾ ರಿಲೀಸ್ ಆಗಿದೆ. ಇದರ ವಿರುದ್ಧ ಕನ್ನಡಿಗರು ಅದೆಷ್ಟೇ ಧ್ವನಿ ಎತ್ತಿದರೂ, ವಿತರಕರು ಕನ್ನಡದಲ್ಲಿ ಡಬ್ ಆದ ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದರು. ವಿರೋಧ ವ್ಯಕ್ತಪಡಿಸಿದವರೂ ವಿಧಿ ಇಲ್ಲದೆ, ಬೇರೆ ಭಾಷೆಯಲ್ಲಿಯೇ ಸಿನಿಮಾ ನೋಡಿದ್ದರು. ಅದಕ್ಕೆ 'ಕೆಜಿಎಫ್ 2' ಸಿನಿಮಾ ಕರ್ನಾಟಕದಲ್ಲಿ ಕನ್ನಡ ಅವತರಣಿ ರಿಲೀಸ್ ಆಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

  KGF 2 Ticket Booking : 'ಕೆಜಿಎಫ್ 2' ಕರ್ನಾಟಕದಲ್ಲಿ ಬುಕಿಂಗ್ ಆರಂಭ ಯಾವಾಗ?KGF 2 Ticket Booking : 'ಕೆಜಿಎಫ್ 2' ಕರ್ನಾಟಕದಲ್ಲಿ ಬುಕಿಂಗ್ ಆರಂಭ ಯಾವಾಗ?

  'ಕೆಜಿಎಫ್ 2' ಬೇರೆ ಭಾಷೆಯಲ್ಲೂ ರಿಲೀಸ್

  ಕರ್ನಾಟಕದಲ್ಲಿ 'ಕೆಜಿಎಫ್ 2' ಸಿನಿಮಾ ಬೇರೆ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ 'ಕೆಜಿಎಫ್ 2' ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. " ನಿಮ್ಮ 'ಕೆಜಿಎಫ್ ಚಾಪ್ಟರ್ 2' ಕರ್ನಾಟಕದಲ್ಲಿ ತೆಲುಗು, ಹಿಂದಿಯಲ್ಲಿ ಬಿಡುಗಡೆ ಮಾಡಿದಲ್ಲಿ, ಅದಕ್ಕಿಂತ ಕನ್ನಡ ದ್ರೋಹ ಇಲ್ಲವೇ ಇಲ್ಲ. ಯಶ್‌ಗೆ, ಹೊಂಬಾಳೆ ಫಿಲಂಸ್‌ಗೆ ಎಂದಿಗೂ ಕನ್ನಡಿಗರ ಕ್ಷಮೆ ಇಲ್ಲ." ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

  ಮಲ್ಟಿಪ್ಲೆಕ್ಸ್ ಓಕೆ, ಸಿಂಗಲ್ ಸ್ಕ್ರೀನ್ ಯಾಕೆ?

  ಮಲ್ಟಿಪ್ಲೆಕ್ಸ್ ಓಕೆ, ಸಿಂಗಲ್ ಸ್ಕ್ರೀನ್ ಯಾಕೆ?

  ಕರ್ನಾಟಕದಲ್ಲಿ 'ಕೆಜಿಎಫ್ 2' ಸಿನಿಮಾ ಬೇರೆ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ 'ಕೆಜಿಎಫ್ 2' ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. "ನಿಮ್ಮ 'ಕೆಜಿಎಫ್ ಚಾಪ್ಟರ್ 2' ಕರ್ನಾಟಕದಲ್ಲಿ ತೆಲುಗು, ಹಿಂದಿಯಲ್ಲಿ ಬಿಡುಗಡೆ ಮಾಡಿದಲ್ಲಿ, ಅದಕ್ಕಿಂತ ಕನ್ನಡ ದ್ರೋಹ ಇಲ್ಲವೇ ಇಲ್ಲ. ಯಶ್‌ಗೆ, ಹೊಂಬಾಳೆ ಫಿಲಂಸ್‌ಗೆ ಎಂದಿಗೂ ಕನ್ನಡಿಗರ ಕ್ಷಮೆ ಇಲ್ಲ." ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

  KGF 2: 'ಕೆಜಿಎಫ್' ನೋಡಿಲ್ಲವಂತೆ ಈ ಹಾಟ್ ನಟಿ: ದಕ್ಷಿಣದ ಈ ನಟ ಬಲು ಇಷ್ಟವಂತೆKGF 2: 'ಕೆಜಿಎಫ್' ನೋಡಿಲ್ಲವಂತೆ ಈ ಹಾಟ್ ನಟಿ: ದಕ್ಷಿಣದ ಈ ನಟ ಬಲು ಇಷ್ಟವಂತೆ

  ಯುಕೆಯಲ್ಲೂ ಕನ್ನಡ ಸಿನಿಮಾ ಇಲ್ಲ

  ಯುಕೆಯಲ್ಲಿ ನೆಲೆಸಿರುವ ಕನ್ನಡಿಗರು ಇದೇ ಆರೋಪ ಮಾಡಿದ್ದರು. ಕನ್ನಡದಲ್ಲಿ ಕನ್ನಡ ಸಿನಿಮವನ್ನೇ ತೋರಿಸುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದರು. ಇದಕ್ಕೆ ಹೊಂಬಾಳೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. " ಯುಕೆಯಲ್ಲಿ ಕನ್ನಡ ಸಿನಿಮಾವನ್ನು ಹಾಕುತ್ತಿಲ್ಲ ಎಂದು ಕಾಳಜಿ ವಹಿಸುತ್ತಿರುವವರಿಗೆ ಹೇಳುವುದೇನಂದರೆ, ಯುಕೆಯಲ್ಲಿ ಕನ್ನಡ ಅವತರಣಿಕೆಯ 'ಕೆಜಿಎಫ್ 2' ಶೋ ಆಗುತ್ತಿದೆ. ಸೋಮವಾರ ಮತ್ತಷ್ಟು ಶೋಗಳು ಸೇರಿಕೊಳ್ಳಲಿದೆ." ಎಂದು ಹೇಳುತ್ತಾ, ಪ್ರದರ್ಶನ ಆಗುತ್ತಿರುವ ಸಿನಿಮಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

  English summary
  Kannadigas Demand About KGF 2 Kannada Version To Be Released In Karnataka. Know More.
  Thursday, April 7, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X