Don't Miss!
- News
BBC Documentary Screening: ದೆಹಲಿಯಲ್ಲಿ ಪ್ರತಿಭಟನೆಯ ಬೆನ್ನಲ್ಲೆ ಸಮಿತಿ ರಚನೆ!
- Technology
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಜನರ ಸಮಯ ಹಾಳು ಮಾಡಿದ್ದಕ್ಕೆ ಕ್ಷಮೆ ಇರಲಿ.. 'ಮೈಂಡ್‌ಲೆಸ್' ನನ್ನ ಪದವಲ್ಲ": ಕಿಶೋರ್
ಇತ್ತೀಚೆಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಕಿಶೋರ್ 'KGF' ಸಿನಿಮಾ ಬಗ್ಗೆ ಮಾತನಾಡಿದ್ದರು. ಅದು ನನ್ನ ಅಭಿರುಚಿಯ ಸಿನಿಮಾ ಅಲ್ಲ ಎಂದಿದ್ದರು. ಜೊತೆಗೆ ಅದೊಂದು 'ಮೈಡ್‌ಲೆಸ್' ಎಂದು ಹೇಳಿದ್ದಾಗಿಯೂ ವರದಿ ಆಗಿತ್ತು. ಆದರೆ ಅದಕ್ಕೆ ನಟ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.
ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ KGF. ಕನ್ನಡದ ಹೆಮ್ಮೆಯ KGF ಸರಣಿ ಸಿನಿಮಾಗಳು ಮಾಡಿದ ದಾಖಲೆಗಳು ಕಣ್ಣ ಮುಂದಿದೆ. ಇಂತಾದೊಂದು ಚಿತ್ರವನ್ನು ನಟ ಕಿಶೋರ್ "ಮೈಂಡ್ ಲೆಸ್" ಸಿನಿಮಾ ಎಂದುಬಿಟ್ರಾ? ಎಂದು ಕೆಲವರು ಬೇಸರಗೊಂಡಿದ್ದರು. ತಮ್ಮ ಅಭಿರುಚಿಯ ಸಿನಿಮಾ ಅಲ್ಲ ಅಂದಮೇಲೆ, ಸಿನಿಮಾ ನೋಡಿಲ್ಲ ಎಂದಮೇಲೆ ಮೈಂಡ್‌ಲೆಸ್ ಸಿನಿಮಾ ಎಂದು ಹೇಗೆ ಹೇಳಿದ್ರಿ? ಎಂದು ಕೆಲವರು ಕೇಳಿದ್ದರು. ಕೆಲವರು ಕಿಶೋರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅದರಲ್ಲಿ ತಪ್ಪಿಲ್ಲ ಎಂದಿದ್ದರು. ಇದೀಗ ಈ ಬಗ್ಗೆ ಸ್ವತಃ ಕಿಶೋರ್ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಾನಿನ್ನೂ
ಕೆಜಿಎಫ್
ನೋಡಿಲ್ಲ,
ಮೈಂಡ್‌ಲೆಸ್
ಚಿತ್ರಗಳನ್ನು
ನಾನು
ನೋಡುವುದೂ
ಇಲ್ಲ
ಎಂದ
ಕಿಶೋರ್!
ಸಂದರ್ಶನದ ವೇಳೆ ತಾವು ಹೇಳಿದ್ದೇನು? ಅದು ಯಾಕೆ ಆ ರೀತಿ ವರದಿ ಆಯಿತು? ಅಷ್ಟಕ್ಕೂ ತಾವು 'KGF' ಸಿನಿಮಾ ಬಗ್ಗೆ ಮಾತನಾಡಿದ್ದು ಯಾಕೆ? ಎನ್ನುವುದನ್ನು ತಿಳಿಸಿದ್ದಾರೆ. ಜೊತೆಗೆ 'KGF' ಸಿನಿಮಾ ಯಶಸ್ಸಿನ ಬಗ್ಗೆ ಸಂತೋಷವಿದೆ ಎಂದು ಹೇಳಿದ್ದಾರೆ.

ರೈತರ ವಿಚಾರ ಚರ್ಚೆ ಆಗಿದ್ದರೆ ಖುಷಿ ಆಗ್ತಿತ್ತು
ನಟ ಕಿಶೋರ್ ಹೇಳಿಕೆಗೆ ಭಾರೀ ಅಸಮಾಧಾನ ವ್ಯಕ್ತವಾಗಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಚಿತ್ರವನ್ನು 'ಮೈಂಡ್‌ಲೆಸ್' ಸಿನಿಮಾ ಎಂದುಬಿಟ್ರಾ? ಎಂದು ಭಾರೀ ಚರ್ಚೆ ನಡೆದಿತ್ತು. ಯಶ್ ಅಭಿಮಾನಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಕಿಶೋರ್ "ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ . ಆದರೂ ಅದಕ್ಕಾಗಿ ಕ್ಷಮೆಯಿರಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆಯಾಗಿದ್ದರೆ ತೃಪ್ತಿಯಿರುತ್ತಿತ್ತು" ಎಂದಿದ್ದಾರೆ.

"ಮೈಂಡ್‌ಲೆಸ್" ನನ್ನ ಪದವಲ್ಲ
ಕಾಂತಾರ ಸಿನಿಮಾ ರಿಲೀಸ್ ಬೆನ್ನಲ್ಲೇ ಮಾಧ್ಯಮದವರು ಸಿನಿಮಾ ನೋಡಿದ್ರಾ? ಎಂದು ರಶ್ಮಿಕಾ ಅವರನ್ನು ಕೇಳಿದ್ದರು. ಆಗಿನ್ನು ಸಿನಿಮಾ ನೋಡಿರದ ರಶ್ಮಿಕಾ, ಇಲ್ಲ ಎಂದು ಹೇಳಿದ್ದರು. ಇದರಿಂದ ಆಕೆ ಭಾರೀ ಟ್ರೋಲ್ ಎದುರಿಸುವಂತಾಯಿತು. ಇದೇ ವಿಚಾರವಾಗಿ ಮಾತನಾಡುತ್ತಾ, 'KGF' ಸಿನಿಮಾ ಹೆಸರು ಬಂತು ಎಂದು ಕಿಶೋರ್ ಹೇಳಿದ್ದಾರೆ. "ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ. "ಮೈಂಡ್ ಲೆಸ್" ನನ್ನ ಪದವಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು KGF ಚಿತ್ರ "ನೋಡಿಲ್ಲ" ಎಂದಿದ್ದೆ
"ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ. "ನೋಡಿಲ್ಲ"ದಿಂದ "ನೋಡುವುದಿಲ್ಲ" ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ. ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ. ಮಾಡಿದರೆ ತಪ್ಪೂ ಸಹ." ಎಂದು ಬರೆದುಕೊಂಡಿದ್ದಾರೆ. ನಾನು ಕೆಜಿಎಫ್ ಸಿನಿಮಾ ನೋಡಿಲ್ಲ ಎಂದಿದ್ದೆ. ಅದನ್ನು ನೋಡುವುದಿಲ್ಲ ಎಂದು ಬರೆದಿದ್ದಾರೆ ಎಂದು ವಿವರಿಸಿದ್ದಾರೆ.

'KGF' ಯಶಸ್ಸಿನ ಬಗ್ಗೆ ಸಂತೋಷವಿದೆ
"ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು. ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ. ಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ 'KGF' ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ 'KGF' ಕಲ್ಪನೆ ಬೇರೆಯೇ ಆದರೂ ಸಹ" ಎಂದು ನಟ ಕಿಶೋರ್ ತಪ್ಪಾಗಿ ಬಿಂಬಿತವಾದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.