twitter
    For Quick Alerts
    ALLOW NOTIFICATIONS  
    For Daily Alerts

    11 ದಿನಕ್ಕೆ 'ಕಾಂತಾರ' ಕಲೆಕ್ಷನ್ 75 ಕೋಟಿ.. 'ಪೊನ್ನಿಯಿನ್' ಸೆಲ್ವನ್ 400 ಕೋಟಿ: ಆದರೆ ಗೆದ್ದಿದ್ದು ಮಾತ್ರ ಕನ್ನಡ ಸಿನಿಮಾ!

    |

    ದಸರಾ ಹಬ್ಬಕ್ಕಿಂತ 5 ದಿನ ಮೊದಲೇ ಬಾಕ್ಸಾಫೀಸ್‌ನಲ್ಲಿ ಭಾರೀ ಕದನ ಏರ್ಪಟ್ಟಿತ್ತು. ಕನ್ನಡದ 'ಕಾಂತಾರ', ತಮಿಳಿನ 'ಪೊನ್ನಿಯಿನ್ ಸೆಲ್ವನ್' ಹಾಗೂ ಬಾಲಿವುಡ್‌ನ 'ವಿಕ್ರಂವೇದಂ' ಸಿನಿಮಾಗಳು ಏಕಕಾಲಕ್ಕೆ ತೆರೆಗಪ್ಪಳಿಸಿ ಸದ್ದು ಮಾಡಿದ್ದವು. 11 ದಿನ ಕಳೆದರೂ ಬಾಕ್ಸಾಫೀಸ್‌ನಲ್ಲಿ 3 ಸಿನಿಮಾಗಳ ಆರ್ಭಟ ಜೋರಾಗಿದೆ. ಆದರೆ ರಿಷಬ್ ಶೆಟ್ಟಿ ಮಾಸ್ಟರ್‌ಪೀಸ್ 'ಕಾಂತಾರ' ಖದರ್ ಒಂದು ಕೈ ಮೇಲಾಗಿದೆ.

    ಪರಭಾಷೆಯ ಸಿನಿಮಾಗಳ ಆರ್ಭಟದ ನಡುವೆ ಕನ್ನಡ ಸಿನಿಮಾಗಳು ನಡುಗುವ ಕಾಲವೊಂದಿತ್ತು. ಆದರೆ ಈಗ ಪರಿಸ್ಥಿತಿ ಬೇರೆನೇ ಇದೆ. ಬೇರೆ ರಾಜ್ಯಗಳಿಗೂ ನುಗ್ಗು ಕನ್ನಡ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡ್ತಿವೆ. 'ಪೊನ್ನಿಯಿನ್ ಸೆಲ್ವನ್' ಆರ್ಭಟದ ನಡುವೆಯೂ ಚೆನ್ನೈನಲ್ಲಿ 'ಕಾಂತಾರ' ಸದ್ದು ಮಾಡ್ತಿದೆ ಎಂದರೆ ಕನ್ನಡ ಸಿನಿಮಾ ತಮಿಳು ಪ್ರೇಕ್ಷಕರ ಮನಗೆದ್ದಿರುವುದು ಗೊತ್ತಾಗುತ್ತಿದೆ. ಬಜೆಟ್, ಸ್ಟಾರ್‌ಕಾಸ್ಟ್‌, ಕ್ಯಾನ್ವಾಸ್ ವಿಚಾರದಲ್ಲಿ ಉಳಿದೆರಡು ಸಿನಿಮಾಗಳಿಗಿಂತ 'ಕಾಂತಾರ' ಚಿಕ್ಕ ಸಿನಿಮಾ ಇರಬಹುದು. ಆದರೆ ಕಂಟೆಂಟ್ ಅಂತ ಬಂದರೆ 'ಕಾಂತಾರ' ಮೊದಲ ಸ್ಥಾನದಲ್ಲಿದೆ.

    ಪರಭಾಷೆ ವಿಮರ್ಶಕರು, ಬುದ್ದಿವಂತ ಪ್ರೇಕ್ಷಕರು ಕೂಡ ಕನ್ನಡದ ಕರಾವಳಿ ಮಣ್ಣಿನ 'ಕಾಂತಾರ' ಚಿತ್ರಕ್ಕೆ ಹ್ಯಾಟ್ಸಾಪ್ ಹೇಳ್ತಿದ್ದಾರೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, 'ಕಾಂತಾರ' ಸಿನಿಮಾ ಚೆನ್ನಾಗಿಲ್ಲ, ಅಥವಾ ಓಕೆ ಓಕೆ ಎಂದ ಪ್ರೇಕ್ಷಕರು ಸಿಗುವುದೇ ಇಲ್ಲ. ಇದಲ್ಲವೇ ನಿಜವಾದ ಸಿನಿಮಾ ಸಕ್ಸಸ್ ಅಂದರೆ.

     ಕಂಟೆಂಟ್ ವಿಚಾರದಲ್ಲಿ 'ಕಾಂತಾರ' ಬೆಸ್ಟ್

    ಕಂಟೆಂಟ್ ವಿಚಾರದಲ್ಲಿ 'ಕಾಂತಾರ' ಬೆಸ್ಟ್

    ಕನ್ನಡ ಸಿನಿಮಾಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪರಭಾಷಾ ಸ್ಟಾರ್‌ಗಳೇ 'ಕಾಂತಾರ' ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಅಂದಾಜು 16- 18 ಕೋಟಿ ಬಜೆಟ್ ಸಿನಿಮಾ, 300 ಕೋಟಿ ಬಜೆಟ್ಟಿನ 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೆ ಟಕ್ಕರ್ ಕೊಡ್ತಿದೆ. 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಓದಿಕೊಂಡವರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಆದರೆ 'ಕಾಂತಾರ' ಎಲ್ಲರನ್ನೂ ಸೆಳೀತಿದೆ. 2ನೇ ವಾರವೂ ಟಿಕೆಟ್‌ಗಾಗಿ ಪರದಾಡುವಂತಾಗಿದೆ. ಇನ್ನು ರಿಲೀಸ್ ವಿಚಾರದಲ್ಲೂ 'ಪೊನ್ನಿಯಿನ್ ಸೆಲ್ವನ್' ಹಾಗೂ 'ವಿಕ್ರಂವೇದಂ'ಗಿಂತ ಕಡಿಮೆ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ 'ಕಾಂತಾರ' ರಿಲೀಸ್ ಆಗಿದೆ.

     ಕನ್ನಡ ಭಾಷೆಯಲ್ಲೇ ಸದ್ದು ಮಾಡ್ತಿರುವ ಚಿತ್ರ

    ಕನ್ನಡ ಭಾಷೆಯಲ್ಲೇ ಸದ್ದು ಮಾಡ್ತಿರುವ ಚಿತ್ರ

    ಸಾಮಾನ್ಯವಾಗಿ ಪರಭಾಷಿಕರು ಕನ್ನಡ ಸಿನಿಮಾಗಳನ್ನು ಅವರ ಭಾಷೆಗೆ ಡಬ್ ಮಾಡದ ಹೊರತು ನೋಡುತ್ತಿರಲಿಲ್ಲ. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ರಿಷಬ್ ಶೆಟ್ಟಿ ಅಂಡ್ ಟೀಂ ಕನ್ನಡದಲ್ಲೇ ಎಲ್ಲಾ ಕಡೆ ಸಿನಿಮಾ ರಿಲೀಸ್ ಮಾಡಿದ್ದರು. ಚಿತ್ರಕ್ಕೆ ಎಲ್ಲೆಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಇಂಗ್ಲೀಷ್ ಸಬ್‌ಟೈಟಲ್ಸ್ ಜೊತೆಗೆ ಕನ್ನಡದಲ್ಲೇ ಸಿನಿಮಾ ಜಗತ್ತಿನ ಮೂಲೆ ಮೂಲೆಯಲ್ಲಿ ರಿಲೀಸ್ ಆಗಿ ಸದ್ದು ಮಾಡ್ತಿದೆ. ಆದರೆ ಈಗ ಬೇಡಿಕೆ ಹೆಚ್ಚಾದ ಕಾರಣಕ್ಕೆ ಡಬ್ ಮಾಡುವ ಪ್ರಯತ್ನ ನಡೀತಿದೆ.

     'ಕಾಂತಾರ' ಚಿತ್ರಕ್ಕೆ ಪ್ರೇಕ್ಷಕರ ಮತ ಹೆಚ್ಚು

    'ಕಾಂತಾರ' ಚಿತ್ರಕ್ಕೆ ಪ್ರೇಕ್ಷಕರ ಮತ ಹೆಚ್ಚು

    ಇನ್ನು ಸೋಶಿಯಲ್ ಮೀಡಿಯಾ ಜಮಾನದಲ್ಲಿ ಬುಕ್‌ಮೈ ಶೋ, IMDb ರೇಟಿಂಗ್‌ ನೋಡಿ ಥಿಯೇಟರ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರೇ ಇಲ್ಲಿ ರೇಟಿಂಗ್ ಕೊಡ್ತಾರೆ. ಇದರಲ್ಲೂ 'ಪೊನ್ನಿಯಿನ್ ಸೆಲ್ವನ್' ಹಾಗೂ 'ವಿಕ್ರಂವೇದಂ' ಸಿನಿಮಾಗಳನ್ನು 'ಕಾಂತಾರ' ಹಿಂದಿಕ್ಕಿದೆ. IMDb ರೇಟಿಂಗ್‌ನಲ್ಲಿ 'ಪೊನ್ನಿಯಿನ್ ಸೆಲ್ವನ್' 8.4 ಹಾಗೂ 'ವಿಕ್ರಂವೇದಂ' 7.2 ರೇಟಿಂಗ್ ಪಡೆದಿದ್ರೆ, 'ಕಾಂತಾರ' ಚಿತ್ರಕ್ಕೆ 9.6 ರೇಟಿಂಗ್ ಸಿಕ್ಕಿದೆ. ಇನ್ನು ಬುಕ್‌ಮೈ ಶೋನಲ್ಲಿ 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೆ 85% ಮತ್ತು 'ವಿಕ್ರಂವೇದಂ' 86% ರೇಟಿಂಗ್ ಸಿಕ್ಕಿದ್ದರೆ ಕಾಂತಾರ ಬರೋಬ್ಬರಿ 99% ರೇಟಿಂಗ್ ಪಡೆದು ಹುಬ್ಬೇರಿಸಿದೆ.

     ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ'

    ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ'

    ಇಷ್ಟು ದಿನ ಬರೀ ಕನ್ನಡದಲ್ಲಿ ಮಾತ್ರ 'ಕಾಂತಾರ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಇದೀಗ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿದೆ. ಶುಕ್ರವಾರದಿಂದ ಪರಭಾಷಿಕರು ಅವರ ಭಾಷೆಯಲ್ಲಿ ಕನ್ನಡ ಮಣ್ಣಿನ ಕಥೆಯನ್ನು ನೋಡಬಹುದು. ಈಗಾಗಲೇ ಹೊರರಾಜ್ಯಗಳಲ್ಲಿ ಸಿನಿಮಾ ಪ್ರಮೋಷನ್ ಶುರುವಾಗಿದೆ. ಇಷ್ಟು ದಿನ ಕನ್ನಡ ಅರ್ಥ ಆಗಲ್ಲ ಎಂದುಕೊಂಡಿದ್ದವರು ಇನ್ಮುಂದೆ 'ಕಾಂತಾರ' ಸಿನಿಮಾ ನೋಡಲು ಥಿಯೇಟರ್‌ಗೆ ಬರಲಿದ್ದಾರೆ.'

    English summary
    Kantara bigger blockbuster than Ponniyin Selvan and Vikram Vedha. Know More.
    Tuesday, October 11, 2022, 21:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X