For Quick Alerts
  ALLOW NOTIFICATIONS  
  For Daily Alerts

  ದೀಪಾವಳಿ ಹಬ್ಬಕ್ಕೆ 'ಹೆಡ್ ಬುಷ್' Vs 'ಕಾಂತಾರ': ಬಾಕ್ಸಾಫೀಸ್‌ ಕಥೆಯೇನು?

  |

  ಹಬ್ಬ ಬಂತು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತವೆ. ಹೆಚ್ಚು ಕಡಿಮೆ ಒಂದೆರಡು ತಿಂಗಳಿನಿಂದಲೇ ಸಿನಿಮಾ ತಂಡದಲ್ಲೇ ಸಂಭ್ರಮ ಮನೆ ಮಾಡಿರುತ್ತೆ. ಬೆಳಕಿನ ಹಬ್ಬ ದೀಪಾವಳಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲೇಬೇಕು ಅನ್ನೋ ಅಂತ ಡಾಲಿ ಧನಂಜಯ್ ಮತ್ತು ಅವರ ತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ.

  ಸ್ಯಾಂಡಲ್‌ವುಡ್‌ನಿಂದ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿರೋ ಸ್ಟಾರ್ ಸಿನಿಮಾ ಅಂದರೆ ಅದು 'ಹೆಡ್ ಬುಷ್'. ಕರ್ನಾಟಕದ ಹಲವು ಕಡೆಗಳಲ್ಲಿ ಸ್ವತ: ಧನಂಜಯ್ 'ಹೆಡ್‌ ಬುಷ್' ಸಿನಿಮಾವನ್ನು ಜೋರಾಗಿಯೇ ಪ್ರಚಾರ ಮಾಡಿದ್ದಾರೆ. ಹೀಗಾಗಿ ಎಲ್ಲರ ಬಾಯಲ್ಲೂ ಡಾಲಿ ಸಿನಿಮಾ ಹೆಸರು ಓಡಾಡುತ್ತಲೇ ಇದೆ. ಹಾಗಂತ ಇಲ್ಲಿಗೆ ಸವಾಲುಗಳು ಇಲ್ಲಾ ಅಂತಲ್ಲ.

  ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 9 ಸಿನಿಮಾ ಹೊಡೆದುರುಳಿಸಿದ 'ಕಾಂತಾರ': ಲಿಸ್ಟ್ ಇಲ್ಲಿದೆ!ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 9 ಸಿನಿಮಾ ಹೊಡೆದುರುಳಿಸಿದ 'ಕಾಂತಾರ': ಲಿಸ್ಟ್ ಇಲ್ಲಿದೆ!

  ಈಗಾಗಲೇ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಅಷ್ಟೇ ಅಲ್ಲ. ದೇಶದ ಬಹುತೇಕ ಎಲ್ಲಾ ಭಾಗಗಳಲ್ಲೂ ಈ ಸಿನಿಮಾ ಬಗ್ಗೆನೇ ಚರ್ಚೆಯಾಗ್ತಿರೋದ್ರಿಂದ ಇನ್ನೂ ಒಂದೆರಡು ವಾರವಂತೂ ಈ ಸಿನಿಮಾ ಹವಾ ಇದ್ದೇ ಇರುತ್ತೆ. ಹೀಗಾಗಿ 'ಕಾಂತಾರ' ಹಾಗೂ 'ಹೆಡ್ ಬುಷ್' ಸಿನಿಮಾಗಳಲ್ಲಿ ದೀಪಾವಳಿ ಹಬ್ಬ ಯಾರಿಗೆ ಅಡ್ವಾಂಟೇಜ್ ಆಗುತ್ತೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.

  ಬೆಳಕಿನ ಹಬ್ಬಕ್ಕೆ 'ಹೆಡ್ ಬುಷ್'

  ಬೆಳಕಿನ ಹಬ್ಬಕ್ಕೆ 'ಹೆಡ್ ಬುಷ್'

  ಡಾಲಿ ಧನಂಜಯ್ ಸಿನಿಮಾ 'ಹೆಡ್ ಬುಷ್' ಅಕ್ಟೋಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಇತ್ತೀಚೆಗೆಷ್ಟೇ ದಾವಣಗೆರೆಯಲ್ಲಿ 'ಹೆಡ್ ಬುಷ್' ಸಿನಿಮಾದ ಟ್ರೈಲರ್ ಲಾಂಚ್ ಮಾಡಲಾಗಿದೆ. ಈ ವೇಳೆ ಬಹುತೇಕ ಚಿತ್ರರಂಗದ ದಿಗ್ಗಜರೆಲ್ಲ ಒಟ್ಟಿಗೆ ಸೇರಿದ್ದಾರೆ. ಹೊಂಬಾಳೆಯ ಅಂಗ ಸಂಸ್ಥೆ ಕೆಆರ್‌ಜಿ ಸ್ಟುಡಿಯೋ ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ಜೊತೆಗೆ ಪ್ರಮೋಷನ್ ಕೂಡ ಮಾಡುತ್ತಿದೆ. ಹೀಗಾಗಿ 'ಹೆಡ್ ಬುಷ್' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸೌಂಡ್ ಮಾಡುತ್ತೆ ಅನ್ನೋ ನಿರೀಕ್ಷೆಯಿದೆ. ಜಯರಾಜ್ ಅವತಾರದಲ್ಲಿ ಬರೋ ಡಾಲಿ ದೀಪಾವಳಿ ಹಬ್ಬದಲ್ಲಿ ಬಾಕ್ಸಾಫೀಸ್‌ ದೋಚೋದು ಗ್ಯಾರಂಟಿ ಅನ್ನೋ ಹಲವರ ಲೆಕ್ಕಾಚಾರ.

  ಬಸ್‌ನಲ್ಲಿ ಬಂದು 'ಕಾಂತಾರ' ವೀಕ್ಷಿಸಿದ ಕಾಸರಗೋಡಿನ ಒಂದೇ ಗ್ರಾಮದ 69 ಮಂದಿ!ಬಸ್‌ನಲ್ಲಿ ಬಂದು 'ಕಾಂತಾರ' ವೀಕ್ಷಿಸಿದ ಕಾಸರಗೋಡಿನ ಒಂದೇ ಗ್ರಾಮದ 69 ಮಂದಿ!

  'ಹೆಡ್‌ ಬುಷ್‌'ಗೆ 'ಕಾಂತಾರ' ಸವಾಲು

  'ಹೆಡ್‌ ಬುಷ್‌'ಗೆ 'ಕಾಂತಾರ' ಸವಾಲು

  ಕಳೆದ 18 ದಿನಗಳಿಂದ 'ಕಾಂತಾರ' ಸಿನಿಮಾ ಅಬ್ಬರ ತಗ್ಗಿಲ್ಲ. ಪ್ರತಿದಿನ 'ಕಾಂತಾರ' ಸಿನಿಮಾ ನೋಡವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಕಾರಣಕ್ಕೆ ಡಾಲಿ ಧನಂಜಯ್ 'ಹೆಡ್ ಬುಷ್' ಸಿನಿಮಾವನ್ನು ನಿರಂತರವಾಗಿ ಪ್ರಚಾರ ಮಾಡುತ್ತಲೇ ಇದ್ದರು. 'ಕಾಂತಾರ' ಅಬ್ಬರದ ನಡುವೆನೇ ತಮ್ಮ ಸಿನಿಮಾ ಬಗ್ಗೆನೂ ಗಮನ ಸೆಳೆಯುವುದಕ್ಕೆ ಬೇಕಾಗಿರೋ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದರು. ಆದರೂ, ದೀಪಾವಳಿ ರಜೆಯಲ್ಲಿ ಜನರು 'ಕಾಂತಾರ' ಕಡೆ ಮುಖ ಮಾಡುತ್ತಾರಾ? ಇಲ್ಲಾ ಹೊಸ ಸಿನಿಮಾ 'ಹೆಡ್ ಬುಷ್' ನೋಡುತ್ತಾರಾ? ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

  ಈ ಪೈಪೋಟಿ ಇದೇ ಮೊದಲು

  ಈ ಪೈಪೋಟಿ ಇದೇ ಮೊದಲು

  ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆದ ಉದಾಹರಣೆಗಳು ಇವೆ. ಆ ಎರಡು ಸಿನಿಮಾಗಳು ಪೈಪೋಟಿಗೆ ಬಿದ್ದಿದ್ದೂ ಇದೆ. ಆದರೆ, ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ ವಿರುದ್ಧ 'ಹೆಡ್ ಬುಷ್' ಕಾಂಪಿಟೇಷನ್‌ಗೆ ಬೀಳಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಂಬಾಳೆ ಹಾಗೂ ಕೆಆರ್‌ಜಿ ಸ್ಟುಡಿಯೋ ಈ ಎರಡೂ ಸಿನಿಮಾಗಳನ್ನು ರಿಲೀಸ್ ಮಾಡಿದ್ದು, ತಮ್ಮದೇ ಸಂಸ್ಥೆಯ ಎರಡು ಸಿನಿಮಾಗಳನ್ನು ಪೈಪೋಟಿಗೆ ಇಳಿಸಿದ್ದಾರೆ. ಹೀಗಾಗಿ ರಿಸಲ್ಟ್‌ಗಾಗಿ ಜನರು ಕಾಯುತ್ತಿದ್ದಾರೆ.

  'ಹೆಡ್ ಬುಷ್'ಗೆ ಅನುಕೂಲ ಆಗೋದೇನು?

  'ಹೆಡ್ ಬುಷ್'ಗೆ ಅನುಕೂಲ ಆಗೋದೇನು?

  'ಹೆಡ್ ಬುಷ್' ಬಿಡುಗಡೆಯಾಗುವ ವೇಳೆ 'ಕಾಂತಾರ' ಕರ್ನಾಟಕದಲ್ಲಿ ರಿಲೀಸ್ ಆಗಿ ಮೂರು ವಾರಗಳಾಗುತ್ತೆ. ಅಷ್ಟೊತ್ತಿಗೆ 'ಕಾಂತಾರ' ಅಬ್ಬರ ಸ್ವಲ್ಪ ಮಟ್ಟಿಗೆ ತಗ್ಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಈಗಾಗಲೇ 'ಕಾಂತಾರ' ಸಿನಿಮಾ ನೋಡಿರುವವರು 'ಹೆಡ್ ಬುಷ್' ಸಿನಿಮಾ ನೋಡುವ ಅವಕಾಶವಿದೆ. ಅಲ್ಲದೆ ಕೆಆರ್‌ಜಿ ಸ್ಟುಡಿಯೋ ವಿತರಣೆ ಮಾಡುತ್ತಿರುವುದರಿಂದ ಗ್ರ್ಯಾಂಡ್ ಆಗಿಯೇ ರಿಲೀಸ್ ಮಾಡುತ್ತೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಬಹುದು ಅನ್ನೋ ನಿರೀಕ್ಷೆಯಿದೆ.

  English summary
  Kantara Vs Head Bush: Which Film Will Perform Better In Diwali Festival, Know More.
  Wednesday, October 19, 2022, 10:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X