»   » ರಮ್ಯಾ ಕನ್ನಡಿಗರ ಕ್ಷಮೆಯಾಚಿಸಲು ಕರವೇ ಆಗ್ರಹ

ರಮ್ಯಾ ಕನ್ನಡಿಗರ ಕ್ಷಮೆಯಾಚಿಸಲು ಕರವೇ ಆಗ್ರಹ

Posted By:
Subscribe to Filmibeat Kannada
Actress Ramya
ಗೋಲ್ಡನ್ ಗರ್ಲ್ ರಮ್ಯಾ ಅವರು ತಮಿಳು ಭಾಷೆಯಲ್ಲಿ ಚುನಾವಣಾ ಪ್ರಚಾರ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ. ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಪರವಾಗಿ ಪ್ರಚಾರ ಮಾಡುವ ಸಂದರ್ಭದಲ್ಲಿ ರಮ್ಯಾ ತಮಿಳಿನಲ್ಲಿ ಪ್ರಚಾರ ಮಾಡಿದ್ದರು.

ಈ ಬಗ್ಗೆ ಎಲ್ಲೆಡೆಯಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ರಮ್ಯಾ ಅವರು ತಮ್ಮ ತಮಿಳು ಭಾಷಣವನ್ನು ಸಮರ್ಥಿಸಿಕೊಂಡಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣ ಮಾಡಿಕೊಟ್ಟಿದೆ. ರಮ್ಯಾ ಅವರು ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಕರವೇ ಒತ್ತಾಯಿಸಿದೆ.

ಕನ್ನಡಿಗರು ಅವರ ಚಿತ್ರಗಳನ್ನು ನೋಡುವ ಮೂಲಕ ಅವರನ್ನು ಹೆಸರಾಂತ ನಟಿಯನ್ನಾಗಿ ಮಾಡಿದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ತಮಿಳಿನಲ್ಲಿ ಪ್ರಚಾರ ಮಾಡಿರುವುದನ್ನು ರಮ್ಯಾ ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದಿದೆ ಕರವೇ.

ರಮ್ಯಾ ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ಅಭಿನಯದ ಸಿನಿಮಾಗಳು ರಾಜ್ಯದಲ್ಲಿ ತೆರೆಕಾಣಲು ಬಿಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಎಚ್ಚರಿಸಿದ್ದಾರೆ.

ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಕನ್ನಡದಲ್ಲಿ ಪ್ರಚಾರ ಮಾಡದೆ ಕನ್ನಡೇತರ ಭಾಷೆ ಬಳಕೆ ಮಾಡುತ್ತಿವೆ. ಅಂತಹ ಪಕ್ಷಗಳಿಗೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ನಾರಾಯಣ ಗೌಡ ಈ ಸಂದರ್ಭದಲ್ಲಿ ಹೇಳಿದರು.

ಇತ್ತೀಚೆಗೆ ತೆಲುಗು ನಟ ಚಿರಂಜೀವಿ ಅವರು ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ತೆಲುಗಿನಲ್ಲಿ ಭಾಷಣ ಬಿಗಿದಿದ್ದನ್ನು ಕರವೇ ಖಂಡಿಸಿದೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸದಿದ್ದರೆ ತಾವು ಕರ್ನಾಟಕಕ್ಕೆ ಅಡಿಯಿಡುವುದಿಲ್ಲ ಎಂದು ಅವರು ತೆಲುಗಿನಲ್ಲಿ ಹೇಳಿ ಕನ್ನಡಿಗರ ಸ್ವಾಭಿಮಾನಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ನಾರಾಯಯಣ ಗೌಡ ಕಿಡಿ ಕಾರಿದ್ದಾರೆ. (ಏಜೆನ್ಸೀಸ್)

English summary
Karnataka Rakshana Vedike state president TA Narayana Gowda called for an apology from her to the people of the state and threatened to block the release of all her movies. While she campaigning in favour of Nalapad Ahmed Haris, addressing the audience, spoke in Tamil.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada