»   » ಕನ್ನಡ ಚಿತ್ರದಲ್ಲಿ ಅಭಿನಯಿಸುವ ಇಚ್ಛೆ ವ್ಯಕ್ತಪಡಿಸಿದ ಕರೀನಾ ಕಪೂರ್ ಖಾನ್

ಕನ್ನಡ ಚಿತ್ರದಲ್ಲಿ ಅಭಿನಯಿಸುವ ಇಚ್ಛೆ ವ್ಯಕ್ತಪಡಿಸಿದ ಕರೀನಾ ಕಪೂರ್ ಖಾನ್

Posted By:
Subscribe to Filmibeat Kannada

ಕೆಲ ದಕ್ಷಿಣ ಭಾರತ ಚಿತ್ರರಂಗದ ನಟಿಯರಿಗೆ ಬಾಲಿವುಡ್ ನಲ್ಲಿ ಮಿಂಚಬೇಕು ಎಂಬ ಆಸೆ ಇದ್ದೇ ಇರುತ್ತೆ. ಆದ್ರೆ, ಬಾಲಿವುಡ್ ನಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದ ಕರೀನಾ ಕಪೂರ್ ಖಾನ್ ಗೆ ಇದೀಗ ಕನ್ನಡ ಚಿತ್ರರಂಗದ ಮೇಲೆ ಕಣ್ಣು ಬಿದ್ದಿದೆ.

ಕನ್ನಡ ಚಿತ್ರವೊಂದರಲ್ಲಿ ನಟಿಸುವ ಇಂಗಿತವನ್ನ ಕರೀನಾ ಕಪೂರ್ ಖಾನ್ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಕರೀನಾ ಕಪೂರ್ ಖಾನ್, ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದಾರೆ.

''ಕನ್ನಡ ಭಾಷೆ ಗೊತ್ತಿಲ್ಲ. ಆದ್ರೆ, ಮುಂದಿನ ದಿನಗಳಲ್ಲಿ ಖಂಡಿತಾ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ'' ಎಂದು ಕರೀನಾ ಕಪೂರ್ ಖಾನ್ ಹೇಳಿದ್ದಾರೆ.

Kareena Kapoor Khan wants to act in Kannada Films

ಬೆಂಗಳೂರಿಗೆ ಬಂದಿದ್ದ ಕರೀನಾ ಕಪೂರ್ ಸ್ಯಾಂಡಲ್ ವುಡ್ ಗೆ ಕೊಟ್ರು ಸಿಹಿ ಸುದ್ದಿ

ಅಲ್ಲಿಗೆ, ಕನ್ನಡ ಚಿತ್ರದಲ್ಲಿ ನಟಿಸಲು ಬಾಲಿವುಡ್ ಬೊಂಬೆ ಕರೀನಾ ಕಪೂರ್ ಗೆ ಇಷ್ಟ ಇದೆ ಅಂತಾಯ್ತು. ಆದ್ರೆ, ಅದು ಈಡೇರಬೇಕು ಅಂದ್ರೆ ಕರೀನಾಗೆ ಒಂದೊಳ್ಳೆ ಕಥೆ ಸಿಗಬೇಕು. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ, ಸ್ಯಾಂಡಲ್ ವುಡ್ ಸ್ಕ್ರೀನ್ ಮೇಲೆ ಕರೀನಾ ಮಿಂಚಬಹುದು.

ಸೈಫ್ ಅಲಿ ಖಾನ್ ಮಡದಿ ಆಗಿ ಒಂದು ಮಗುವಿನ ತಾಯಿ ಆಗಿರುವ ಕರೀನಾ ಕಪೂರ್ ಖಾನ್ ಸದ್ಯ 'ವೀರೇ ದಿ ವೆಡ್ಡಿಂಗ್' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

English summary
Bollywood Actress Kareena Kapoor Khan expressed her desire to act in Kannada Films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada