»   » ಸತ್ಯಾನಂದ ರವಿಚೇತನ್ ಈಗ ಕಾರ್ಕಳದ ಪವಾಡ ಪುರುಷ

ಸತ್ಯಾನಂದ ರವಿಚೇತನ್ ಈಗ ಕಾರ್ಕಳದ ಪವಾಡ ಪುರುಷ

Posted By:
Subscribe to Filmibeat Kannada
Actor Ravi Chetan
ಯಾರಿವನು (ಆರಂಭದ ಟೈಟಲ್ ಸತ್ಯಾನಂದ) ಚಿತ್ರದಲ್ಲಿ ನಿತ್ಯಾನಂದ ಅನುಭವಿಸಿದ್ದ ನಟ ರವಿಚೇತನ್ ಈಗ ಸಂತ ಲಾರೆನ್ಸ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರು ಕಾರ್ಕಳದ ಪವಾಡ ಪುರುಷನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಡಿವೈನ್ ವರ್ಲ್ಡ್ ಇಂಟರ್ ನ್ಯಾಷನಲ್ ಸಂಸ್ಥೆಯ 'ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್' ಚಿತ್ರವು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣವಾಗಿ ಇದೀಗ ಬೆಂಗಳೂರಿನಲ್ಲಿ ಕ್ಲೈಮಾಕ್ಸ್ ಚಿತ್ರೀಕರಣ ನಡೆಸಿದೆ. ಬೆಂಗಳೂರಿನ ಕಗ್ಗಲಿಪುರ ಚರ್ಚ್ ಅಲ್ಲಿ ಈ ಚಿತ್ರದ ಚಿತ್ರೀಕರಣ ಕೆಲವು ದಿವಸ ನಡೆಸಲಾಯಿತು.

'ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್' ಜೀವನ ಆಧಾರದ ಮೇಲೆ ಚಿತ್ರದ ಕಥೆ ರಚಿಸಲಾಗಿದ್ದು ಇದರಲ್ಲಿ ಅನೇಕ ಪವಾಡಗಳನ್ನು ತೆರೆಯಮೇಲೆ ಹೇಳಲಾಗಿದೆ. ಈ ಚಿತ್ರವೂ ಕಳೆದ ಮೇ 19ರಂದು ಮಂಗಳೂರಿನಲ್ಲಿ ಪ್ರಾರಂಭವಾಗಿ ಶೇಕಡ 75 ರಷ್ಟು ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಕ್ಲೈಮಾಕ್ ಗಾಗಿ ಆಗಮಿಸಿದೆ.

ಕ್ರಿ.ಪೂ 258 ಕಥೆ ಹಿನ್ನೆಲೆ ಇರುವ ವ್ಯಕ್ತಿ ಚಿತ್ರ ಇದು. ಪ್ರಾಚೀನ ರೋಮ್ ದೇಶದಲ್ಲಿ ನಡೆದ ಸಂದರ್ಭಗಳನ್ನು ಚಿತ್ರಕತೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.
ಪ್ರವೀಣ್ ತಕೋಟ್ ನಿರ್ದೇಶನದ ಈ ಚಿತ್ರಕ್ಕೆ ಸ್ಟೀಫನ್ ಮೆಂಡಿಸ್ ಅವರು ನಿರ್ಮಾಪಕರು. ಶಂಕರ್ ಅವರ ಛಾಯಾಗ್ರಹಣ, ಬಾಲ ಅವರ ಸಂಗೀತ ಇರುವ ಈ ಚಿತ್ರದಲ್ಲಿ ಆರು ಹಾಡುಗಳಿವೆ. ನಾಲ್ಕು ಹಾಡುಗಳನ್ನು ಈಗಾಗಲೇ ಚಿತ್ರೀಕರಿಸಿಕೊಳ್ಳಲಾಗಿದೆ. [ಯಾರಿವನು ಚಿತ್ರ ವಿಮರ್ಶೆ]

ತಾರಾಗಣದಲ್ಲಿ 'ಯಾರಿವನು' ಚಿತ್ರದಲ್ಲಿ ಅಭಿನಯಿಸಿದ್ದ ರವಿ ಚೇತನ್ ಮುಖ್ಯಪಾತ್ರದಲ್ಲಿದ್ದಾರೆ. ನಟಿ ಭವ್ಯಾ, ಟೆನ್ನಿಸ್ ಕೃಷ್ಣ, ರೇಖಾ ದಾಸ್, ಶೋಭರಾಜ್, ಸ್ವಸ್ತಿಕ್ ಶಂಕರ್, ಮನ್ ಮೋಹನ್ ರಾಯ್, ಅಲ್ವಿನ್ ಡಿ ಸಿಲ್ವಾ, ಶಕ್ತಿ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
The climax scenes of devotional Kannada film 'Karkalada Pavada Purusha St Lawrence' shoot at Bangalore church. Stephen Mendis is producer of this film. Shanker is behind camera and Bala is scoring music for six songs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada