»   » ನೆಲಮಂಗಲ ರೆಸಾರ್ಟ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್

ನೆಲಮಂಗಲ ರೆಸಾರ್ಟ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್

Posted By:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ತಂಡದ ತಯಾರಿ ಕೂಡ ಜೋರಾಗಿಯೇ ಇದೆ. ಕ್ರಿಕೆಟ್ ಅಭಿಮಾನಿಗಳು, ಚಿತ್ರರಸಿಕರು ಪಂದ್ಯಾವಳಿ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಕಳೆದ ಮೂರನೇ ಆವೃತ್ತಿಯಲ್ಲಿ ನಡೆದ ಸಿಸಿಎಲ್ ನಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದೀಗ ಶುರುವಾಗಲಿರುವ ನಾಲ್ಕನೇ ಆವೃತ್ತಿಯಲ್ಲಿ ಯಾರು ಚಾಂಪಿಯನ್ ಆಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.

ಅಂದಹಾಗೆ ಹೊಸ ವರ್ಷದ ಆರಂಭದಲ್ಲೇ ಭರ್ಜರಿ ಮನರಂಜನೆ ನೀಡಲು ಸಿಸಿಎಲ್ ರೆಡಿಯಾಗಿದೆ. ಸಿಸಿಎಲ್ ಬರಮಾಡಿಕೊಳ್ಳಲು ಸಿನಿಪ್ರೇಮಿಗಳು ಸೇರಿದಂತೆ ಕ್ರೀಡಾಭಿಮಾನಿಗಳೂ ತುದಿಗಾಲ ಮೇಲೆ ನಿಂತಿದ್ದಾರೆ.

ಸಿಸಿಎಲ್ ಕಠಿಣ ಅಭ್ಯಾಸದಲ್ಲಿ ಕರ್ನಾಟಕ ಬುಲ್ಡೋಜರ್ಸ್

ಈಗಾಗಲೇ ಸಿಸಿಎಲ್ ನಲ್ಲಿ ಭಾಗವಹಿಸಲಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರಕಟಗೊಂಡಿದ್ದು, ಎಂದಿನಂತೆ ಈ ಬಾರಿಯೂ ಕಠಿಣ ಅಭ್ಯಾಸದಲ್ಲಿ ಬುಲ್ಡೋಜರ್ಸ್ ತಂಡ ನಿರತವಾಗಿದೆ. ಈ ಬಾರಿಯೂ ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ಪಟ್ಟವನ್ನು ಹಾಗೆಯೇ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.

ಮುಂಬೈನಲ್ಲಿ ಸಿಸಿಎಲ್ ಗೆ ಚಾಲನೆ ಸಿಗಲಿದೆ

2014 ರ ಜನವರಿ 25 ರಂದು ಮುಂಬೈನಲ್ಲಿ ಸಿಸಿಎಲ್ ಗೆ ಚಾಲನೆ ಸಿಗಲಿದೆ. ಅಂದು ಮಧ್ಯಾಹ್ನ 3 ರಿಂದ 7 ಗಂಟೆಯವರೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್ ಹಾಗೂ ಚೆನ್ನೈ ತಂಡಗಳು ಸೆಣೆಸಾಟ ನಡೆಸಲಿವೆ.

ವೀರ್ ಮರಾಠಿ Vs ಭೋಜ್ ಪುರಿ

ಅದೇ ದಿನ 7 ರಿಂದ 11 ಗಂಟೆಯವರೆಗೆ ನಡೆಯಲಿರುವ ಎರಡನೇ ಪಂದ್ಯದಲ್ಲಿ ವೀರ್ ಮರಾಠಿ ಮತ್ತು ಭೋಜ್ ಪುರಿ ದಬಾಂಗ್ಸ್ ತಂಡಗಳು ತಮ್ಮ ಗೆಲುವಿಗಾಗಿ ಮೈದಾನದಲ್ಲಿ ಹೋರಾಟ ನಡೆಸಲಿವೆ.

ಕರ್ನಾಟಕ ಬುಲ್ಡೋಜರ್ಸ್ Vs ಬೆಂಗಾಲ್ ಟೈಗರ್ಸ್

ಜ. 26 ರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಕೇರಳ ಸ್ಟ್ರೈಕರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವೆ ಪಂದ್ಯ ನಡೆಯಲಿದ್ದು. ಆ ಬಳಿಕ ಸಂಜೆ 7 ಗಂಟೆಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡವನ್ನು ಎದುರಿಸಲಿದೆ.

ಜನವರಿ 25 ರಿಂದ ಫೆಬ್ರವರಿ 23 ರವರೆಗೂ ಪಂದ್ಯ

ಜನವರಿ 25 ರಿಂದ ಫೆಬ್ರವರಿ 23 ರವರೆಗೂ ನಡೆಯಲಿರುವ ಸಿಸಿಎಲ್ ಪಂದ್ಯಾವಳಿ ಮುಂಬೈ, ಚೆನ್ನೈ, ಕೊಚ್ಚಿ, ಬೆಂಗಳೂರು, ರಾಂಚಿ ಮತ್ತು ದುಬೈನಲ್ಲಿ ಜರುಗಲಿದೆ.

ಸಿಸಿಎಲ್ ನಲ್ಲಿ ಒಟ್ಟು ಎಂಟು ತಂಡಗಳು

ಕರ್ನಾಟಕ ಬುಲ್ಡೋಜರ್ಸ್ ಸೇರಿದಂತೆ ಸಿಸಿಎಲ್ ನಲ್ಲಿ ಪ್ರಸ್ತುತ ಎಂಟು ತಂಡಗಳಿವೆ. ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಮುಂಬೈ ಹೀರೋಸ್, ಬೆಂಗಾಲ್ ಟೈಗರ್ಸ್, ಭೋಜ್ ಪುರಿ ದಬಾಂಗ್ಸ್, ವೀರ್ ಮರಾಠಿ.

ತೆಲುಗು ವಾರಿಯರ್ಸ್ ಗೆ ಮಣ್ಣುಮುಕ್ಕಿಸಿದ್ದ ಕಿಚ್ಚನ ತಂಡ

ಇದುವರೆಗೂ ನಡೆದ ಮೂರು ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್ ಹಂತ ತಲುಪಿರುವುದು ವಿಶೇಷ. 2013ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಮಣ್ಣುಮುಕ್ಕಿಸಿ ಸಿಸಿಎಲ್ ಕಪ್ ತನ್ನದಾಗಿಸಿಕೊಂಡಿದೆ.

2011ರಲ್ಲಿ ಆರಂಭವಾದ ಸಿಸಿಎಲ್ ಲೀಗ್

2011ರಲ್ಲಿ ಆರಂಭವಾದ ಸಿಸಿಎಲ್ ಲೀಗ್ ಗಳು ಬರುಬರುತ್ತಾ ಜನಪ್ರಿಯತೆ ಗಳಿಸಿಕೊಂಡವು. ಐಸಿಸಿ ಕ್ರಿಕೆಟ್ ಮ್ಯಾಚ್ ಗಳಿಗೂ ಇದರಿಂದ ಕೊಂಚ ಹೊಡೆತಬಿತ್ತು. ಸಿಸಿಎಲ್ ಮ್ಯಾಚ್ ಗಳಿಗೆ ಮಾಧ್ಯಮಗಳು ಸಾಕಷ್ಟು ಪ್ರಚಾರ ಕೊಡುವ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿತು.

ಕೊರೆಯುವ ಚಳಿಯಲ್ಲಿ ಪ್ರಾಕ್ಟಿಸ್

ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ತನ್ನ ತಂಡವನ್ನು ಚುಮುಚುಮು ಕೊರೆಯುವ ಚಳಿಯಲ್ಲೂ ಪ್ರಾಕ್ಟೀಸ್ ಮಾಡಿಸಿ ಬೆವರಿಳಿಸಿದ್ದಾರೆ. ಈ ಹಿಂದಿನ ಮೂರು ಆವೃತ್ತಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಎಲ್ಲರ ಫೇವರಿಟ್ ಅನ್ನಿಸಿಕೊಂಡಿತ್ತು. ಈ ಬಾರಿಯೂ ಕ್ರಿಕೆಟ್ ಅಭಿಮಾನಿಗಳ ಹಾಗೂ ಸಿನಿಮಾ ಅಭಿಮಾನಿಗಳಿಗೆ ನಿರಾಸೆಯಾಗದಂತೆ ತಮ್ಮ ತಂಡವನ್ನು ತರಬೇತಿಗೊಳಿಸಿದ್ದಾರೆ.

ಪೂಲ್ A ಹಾಗೂ ಪೂಲ್ B

ಪೂಲ್ 'A' ನಲ್ಲಿ ಕರ್ನಾತಕ ಬುಲ್ಡೋಜರ್ಸ್, ಕೇರಳ ಸ್ಟೈಕರ್ಸ್, ಭೋಜ್ ಪುರಿ ದಬಾಂಗ್ಸ್, ಮುಂಬೈ ಹೀರೋಸ್ ತಂಡಗಳಿವೆ. ಪೂಲ್ 'B'ನಲ್ಲಿ ತೆಲುಗು ವಾರಿಯರ್ಸ್, ವೀರ್ ಮರಾಠಿ, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್ ತಂಡಗಳಿವೆ.

English summary
Celebrity cricket league practice session photos. The Karnataka Bulldozers team consisting of Kannada actors have moved to resort near Nelamangala on Saturday. For the last one week, the team was practicing at the KSCA stadium. Team sources say that it is a common practice as the players need to be free from the regular tensions associated with shooting and work.
Please Wait while comments are loading...