twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನ ವಿರುದ್ಧ ತಿರುಗಿಬಿದ್ದಿದ್ದ ಅಹೋರಾತ್ರ, ಚರಣ್: ದೂರು ನೀಡಿದ ಫಿಲ್ಮ್ ಚೇಂಬರ್!

    |

    ಕಳೆದ ಕೆಲವು ವರ್ಷಗಳಿಂದ ಕಿಚ್ಚ ಸುದೀಪ್ ವಿರುದ್ಧ ಅಹೋರಾತ್ರ ತಿರುಗಿಬಿದ್ದಿದ್ದರು. ಸುದೀಪ್ ರಮ್ಮಿ ಹಾಜೀರಾತು ನೀಡಿದ್ದಕ್ಕೆ ಆಕ್ರೋಶಗೊಂಡಿದ್ದ ಅಹೋರಾತ್ರಿ ಕಳೆದ ಕೆಲವು ವರ್ಷಗಳಿಂದ ಸುದೀಪ್ ವಿರುದ್ಧ ತಿರುಗಿಬಿದ್ದಿದ್ದರು.

    ಆಹೋರಾತ್ರ ಬಳಿಕ ಕೆಲವು ದಿನಗಳ ಹಿಂದಷ್ಟೇ ಚರಣ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನುಬಿಟ್ಟಿದ್ದರು. ಇದು ನಿರ್ದೇಶಕ ನಂದಕಿಶೋರ್ ಅವರನ್ನು ಕೆರಳಿಸಿತ್ತು. ಬಳಿಕ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದ ಚರಣ್, ಕಿಚ್ಚ ಸುದೀಪ್ ಹಾಗೂ ವಾಣಿಜ್ಯ ಮಂಡಳಿ ವಿರುದ್ಧ ಕಿಡಿಕಾರಿದ್ದರು.

    ಕಿಚ್ಚ ಸುದೀಪ್ ರಮ್ಮಿ ವಿವಾದ: ನಂದಕಿಶೋರ್‌ಗೆ ಯುವಕ ತಿರುಗೇಟು!ಕಿಚ್ಚ ಸುದೀಪ್ ರಮ್ಮಿ ವಿವಾದ: ನಂದಕಿಶೋರ್‌ಗೆ ಯುವಕ ತಿರುಗೇಟು!

    ಇದೇ ವಿಚಾರವಾಗಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ ದೂರು ಫಿಲ್ಮಿಬೀಟ್‌ ಕನ್ನಡಗೆ ಪ್ರತಿಕ್ರಿಯೆ ನೀಡಿದ್ದಾರೆ.

    ವಾಣಿಜ್ಯ ಮಂಡಳಿ ದೂರು

    ವಾಣಿಜ್ಯ ಮಂಡಳಿ ದೂರು

    ಕಿಚ್ಚ ಸುದೀಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಗಂಭೀರವಾಗಿ ತೆಗೆದುಕೊಂಡಿದೆ. ಇತ್ತೀಚೆಗೆ ಚರಣ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್‌ರನ್ನು ನಿಂದಿಸಿದ್ದರು. ಇದೇ ವೇಳೆ ವಾಣಿಜ್ಯ ಮಂಡಳಿಯನ್ನು ಟಾರ್ಗೆಟ್ ಮಾಡಲಾಗಿತ್ತು. ಈ ಕಾರಣಕ್ಕೆ ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ನಟ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್: ಆಕ್ರೋಶಗೊಂಡ ನಿರ್ದೇಶಕ ನಂದ ಕಿಶೋರ್!ನಟ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್: ಆಕ್ರೋಶಗೊಂಡ ನಿರ್ದೇಶಕ ನಂದ ಕಿಶೋರ್!

    ಫಿಲ್ಮ್ ಚೇಂಬರ್ ದೂರಿನಲ್ಲಿ ಏನಿದೆ?

    ಫಿಲ್ಮ್ ಚೇಂಬರ್ ದೂರಿನಲ್ಲಿ ಏನಿದೆ?

    " ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತರಾಗಿರುವ ಶ್ರೀ ಸುದೀಪ್ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಚ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಶ್ರೀ ಸುದೀಪ್‌ರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರದ ಸಂಗತಿಯಾಗಿದೆ. ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲಸಲ್ಲದ ಗೊಂದಲಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಆದ್ಧರಿಂದ ತಾವು ದಯಮಾಡಿ ಅಹೋರಾತ್ರ ಮತ್ತು ಚರಣ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಸಹಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ." ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಅಧ್ಯಕ್ಷ ಫಿಲ್ಮ್ ಚೇಂಬರ್ ಹೇಳಿದ್ದೇನು?

    ಅಧ್ಯಕ್ಷ ಫಿಲ್ಮ್ ಚೇಂಬರ್ ಹೇಳಿದ್ದೇನು?

    ಕನ್ನಡ ಚಿತ್ರರಂಗದ ಯಾವೊಬ್ಬ ನಟನ ಬಗ್ಗೆನೂ ಈ ರೀತಿ ಅವಹೇಳಕಾರಿಯಾಗಿ ಮಾತಾಡಬಾರದು. ಇದು ಅವರ ವ್ಯಕ್ತಿತ್ವಕ್ಕೆ ಒಳ್ಳೆಯದಲ್ಲ. ಹೀಗಾಗಿ ಫಿಲ್ಮ್ ಚೇಂಬರ್ ವತಿಯಿಂದ ದೂರು ದಾಖಲಿಸಿದ್ದೇವೆ. ಸುದೀಪ್ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದ ಮೇರು ನಟ. ಅವರಿಗೆ ಈ ರೀತಿ ವಹೇಳಕಾರಿಯಾಗಿ ಮಾತಾಡುವುದು ಒಳ್ಳೆಯದಲ್ಲ. ಮುಂದೆ ಮತ್ತೆ ಹೀಗೆ ಆಗಬಾರದೆಂದು ದೂರು ನೀಡಿದ್ದೇವೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ." ಎಂದು ಭಾ ಮ ಹರೀಶ್ ಫಿಲ್ಮ್ ಚೇಂಬರ್‌ಗೆ ತಿಳಿಸಿದ್ದಾರೆ.

    ಸುದೀಪ್ ವಿರುದ್ಧ ತಿರುಗಿ ಬೀಳಲು ಕಾರಣವೇನು?

    ಸುದೀಪ್ ವಿರುದ್ಧ ತಿರುಗಿ ಬೀಳಲು ಕಾರಣವೇನು?

    ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ರಮ್ಮಿಯ ಜಾಹೀರಾತೊಂದನ್ನು ನೀಡಿದ್ದರು. ಈ ಜಾಹೀರಾತಿನ ವಿರುದ್ಧ ಅಹೋರಾತ್ರ ತಿರುಗಿಬಿದ್ದಿದ್ದರು. ಜನರು ರಮ್ಮಿ ಆಡಿ ಮನೆ ಮಟ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಆ ಬಳಿಕ ಸುದೀಪ್ ಅಭಿಮಾನಿಗಳು ಅಹೋರಾತ್ರ ಮನೆಗೆ ಹೋಗಿ ಗಲಾಟೆ ಮಾಡಿದ್ದರು. ಆ ಬಳಿಕ ಚರಣ್ ಎಂಬುವವರು ಕಿಚ್ಚ ಸುದೀಪ್ ವಿರುದ್ಧ ಕಿಡಿಕಾರಿದ್ದರು. ಅದರ ವಿರುದ್ಧವೇ ವಾಣಿಜ್ಯ ಮಂಡಳಿ ದೂರು ದಾಖಲಿಸಿದೆ.

    English summary
    Karnataka Film Chamber Filed Complaint Against Charan And Ahorathra For Scolding Kichcha Sudeep, Know More.
    Tuesday, July 12, 2022, 9:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X