»   » ಬ್ರೇಕಿಂಗ್ ; ನಿರ್ಮಾಪಕರ ಧರಣಿಗೆ ಕದನ ವಿರಾಮ

ಬ್ರೇಕಿಂಗ್ ; ನಿರ್ಮಾಪಕರ ಧರಣಿಗೆ ಕದನ ವಿರಾಮ

Posted By:
Subscribe to Filmibeat Kannada

ಕಳೆದ 17 ದಿನಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯುತ್ತಿರುವ ನಿರ್ಮಾಪಕರ ಪ್ರತಿಭಟನೆ ಇಂದು ಅಂತ್ಯವಾಗಿದೆ. ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿ, ಸಮಸ್ಯೆ ಪರಿಹಾರ ಮಾಡುವ ಬಗ್ಗೆ ಭರವಸೆ ನೀಡಿರುವುದರಿಂದ ನಿರ್ಮಾಪಕರು ಧರಣಿ ಕೈಬಿಟ್ಟಿದ್ದಾರೆ.

ಇಂದು ಬೆಳ್ಳಗ್ಗೆ ವಾರ್ತಾ ಸಚಿವ ರೋಷನ್ ಬೇಗ್ ಜೊತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ, ಹಿರಿಯ ನಟಿ ಜಯಮಾಲ, ನಟ ಜಗ್ಗೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ವಿಕಾಸ ಸೌಧದಲ್ಲಿ ಸಭೆ ನಡೆಸಿದರು. [ಫಿಲ್ಮ್ ಚೇಂಬರ್ ನಲ್ಲಿ ಕೂಗಾಟ-ಕಿತ್ತಾಟ-ರಂಪಾಟ]

Karnataka government intervenes ; Producers end hunger strike

'ತುರ್ತು ಕ್ರಮ ಕೈಗೊಳ್ಳಬೇಕು' ಅಂತ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸೂಚನೆ ಮೇರೆಗೆ ವಿವಿಧ ಬೇಡಿಕೆಗಳನ್ನ ಈಡೇರಿಸುವ ಬಗ್ಗೆ ಸಚಿವ ರೋಷನ್ ಬೇಗ್ ಭರವಸೆ ನೀಡಿದರು. [ನೊಂದ ನಿರ್ಮಾಪಕರಿಂದ ಅಂಬರೀಶ್ ಗೆ ಮಹಾ ಮಂಗಳಾರತಿ]

ಅದರಂತೆ, ಇಂದು ಸಂಜೆ 5 ಗಂಟೆ ಸುಮಾರಿಗೆ ವಾಣಿಜ್ಯ ಮಂಡಳಿಗೆ ಆಗಮಿಸಿದ ಸಚಿವ ರೋಷನ್ ಬೇಗ್, ಧರಣಿ ನಿರತ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದರು. [''ನಿರ್ಮಾಪಕರು ಭಿಕ್ಷುಕರು'' - ಮಂಡ್ಯದ ಗಂಡು ಅಂಬರೀಶ್]

Karnataka government intervenes ; Producers end hunger strike

''ಸಿ.ಎಂ ನೇತೃತ್ವದಲ್ಲಿ ಸದ್ಯದಲ್ಲೇ ನಿರ್ಮಾಪಕರ ಸಂಘದ ಸಭೆ ಕರೆಯಲಾಗುವುದು. ಕಲಾವಿದರನ್ನೂ ಕರೆಸಿ ಚರ್ಚೆ ಮಾಡಿ, ಸಮಸ್ಯೆ ಪರಿಹಾರ ಮಾಡಲಾಗುವುದು'' ಅಂತ ಸತ್ಯಾಗ್ರಹ ಕೈಗೊಂಡಿದ್ದ ನಿರ್ಮಾಪಕರ ಮನವೊಲಿಸಿ ಜ್ಯೂಸ್ ಕುಡಿಸಿ, ಉಪವಾಸ ಸತ್ಯಾಗ್ರಹವನ್ನ ಅಂತ್ಯ ಗೊಳಿಸಿದರು. ಆದ್ರೆ, ಯಾವ ಜ್ಯೂಸ್ ಅಂತ ತಿಳಿದು ಬಂದಿಲ್ಲ! ['ಡೆತ್ ನೋಟ್' ಬರೆದಿಟ್ಟು ಆಸ್ಪತ್ರೆ ಸೇರಿದ ನಿರ್ಮಾಪಕ]

ಕೇಸರಿ ಬಣ್ಣದ ಜ್ಯೂಸ್ ಕುಡಿದು, ವಿವಾದಕ್ಕೆ ಶುಭಂ ಹಾಡಲು ಸರ್ಕಾರ ಮಧ್ಯಪ್ರವೇಶಿಸಿರುವ ಬಗ್ಗೆ ನಿರ್ಮಾಪಕರು ಈಗ ದಿಲ್ ಖುಷ್ ಆಗಿದ್ದಾರೆ. ಜೊತೆಗೆ ನಾಳೆ ಕರೆದಿದ್ದ ಚಿತ್ರೋದ್ಯಮ ಬಂದ್ ನ ವಾಪಸ್ ಪಡೆದಿದ್ದಾರೆ.

English summary
Kannada Film producers end their Hunger strike as Karnataka government and Information Minister Roshan Baig intervened and assured to solve the issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada