»   » ವೈವಾಹಿಕ ಜೀವನಕ್ಕೆ ಅಡಿಯಿಟ್ಟ ಕಾಶಿನಾಥ್ ಪುತ್ರ

ವೈವಾಹಿಕ ಜೀವನಕ್ಕೆ ಅಡಿಯಿಟ್ಟ ಕಾಶಿನಾಥ್ ಪುತ್ರ

By: ಉದಯರವಿ
Subscribe to Filmibeat Kannada

ಜನಪ್ರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಕಾಶಿನಾಥ್ ಅವರ ಪುತ್ರ ಅಲೋಕ್ ಯಾನೆ ಅಭಿಮನ್ಯು ಅವರ ವಿವಾಹ ಕೊಪ್ಪ ತಾಲೂಕಿನಲ್ಲಿ ನೆರವೇರಿತು. ಅಭಿಮನ್ಯು ಅವರ ಕುಟುಂಬಿಕರು ಹಾಗೂ ಬಂಧುಬಳಗದ ಸಮ್ಮುಖದಲ್ಲಿ ಬುಧವಾರ (ಜೂ.26) ಮದುವೆ ಶಾಸ್ತ್ರೋಕ್ತವಾಗಿ ನಡೆಯಿತು.

ಕೊಪ್ಪ ತಾಲೂಕಿನ ಜಯಪುರದ ಸಮೀಪದ ಹಿರೇಹಳ್ಳ ಗಣಪತಿ ದೇವಾಲಯದಲ್ಲಿ ಚೇತನಾ ಅವರನ್ನು ಅಭಿಮನ್ಯು ವರಿಸಿದರು. ನೆಂಟರಿಷ್ಟರು ಈ ಮದುವೆಗೆ ಶುಭಕೋರಿದರು. 12 AM ಚಿತ್ರದ ಮೂಲಕ ಅಲೋಕ್ ಅವರು ತಮ್ಮ ಹೆಸರನ್ನು ಅಭಿಮನ್ಯು ಎಂದು ಬದಲಾಯಿಸಿಕೊಂಡಿದ್ದಾರೆ. [ನಟ, ನಿರ್ದೇಶಕ ಕಾಶಿನಾಥ್ ವಿಶೇಷ ಸಂದರ್ಶನ]

Abhimanyu got married

'ಬಾಜಿ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟ ಅಲೋಕ್ ಬಳಿಕ ಅವರ ತಂದೆಯವರ ನಿರ್ದೇಶನದ '12 AM ಮಧ್ಯರಾತ್ರಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಾರರ್ ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸೂ ಸಾಧಿಸಿತು.

ಇತ್ತೀಚೆಗೆ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಅಲೋಕ್ ಅವರ ಉತ್ತಮ ಕ್ಷೇತ್ರ ಪ್ರದರ್ಶನ ಹಾಗೂ ಬೌಲಿಂಗ್ ಎಲ್ಲರ ಗಮನಸೆಳೆದಿತ್ತು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

English summary
Kannada actor, director and producer Kashinath son Abhimanyu the nuptial knot with Chetana. The marriage took place at Koppa taluk Jayapura.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada