twitter
    For Quick Alerts
    ALLOW NOTIFICATIONS  
    For Daily Alerts

    ಲಾಸ್ಟ್ ಬಾಲ್ ನಲ್ಲಿ ಶಿವಣ್ಣನ ತಂಡವನ್ನು ಸೋಲಿಸಿದ ರಾಜಾಹುಲಿ ಯಶ್

    |

    'ಕೆಸಿಸಿ'ಯ ಮೊದಲ ಪಂದ್ಯದ ರೀತಿ ಎರಡನೇ ಪಂದ್ಯವೂ ಸಿಕ್ಕಾಪಟ್ಟೆ ರೋಚಕವಾಗಿ ಇತ್ತು. ಮೊದಲ ಪಂದ್ಯದ ರೀತಿ ಈ ಪಂದ್ಯದಲ್ಲಿಯೂ ಕೊನೆಯ ಎಸೆತದವರೆಗೆ ಯಾರು ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಇತ್ತು.

    ಎರಡನೇ ಪಂದ್ಯ ಶಿವರಾಜ್ ಕುಮಾರ್ ಅವರ ವಿಜಯನಗರ ಪ್ಯಾಟ್ರಿಯಾಟ್ಸ್ ಹಾಗೂ ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಗಳ ನಡುವೆ ನಡೆಯಿತು ಇದರಲ್ಲಿ ಎರಡು ರನ್‌ಗಳಿಂದ ಯಶ್ ತಂಡ ಗೆಲುವು ಪಡೆಯಿತು.

    ಪಂದ್ಯದ ಕೊನೆಯ ಎಸೆತದಲ್ಲಿ ನಟ ಡಾರ್ಲಿಂಗ್ ಕೃಷ್ಣ ತಮ್ಮ ಒಳ್ಳೆ ಬೌಲಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಅಂದಹಾಗೆ, ವಿಜಯನಗರ ಪ್ಯಾಟ್ರಿಯಾಟ್ಸ್ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ನಡುವಿನ ಪಂದ್ಯದ ಹೈಲೈಟ್ಸ್ ಮುಂದಿದೆ ನೋಡಿ...

    ಟಾಸ್ ಗೆದ್ದ ಯಶ್ ಬ್ಯಾಟಿಂಗ್ ಆಯ್ಕೆ

    ಟಾಸ್ ಗೆದ್ದ ಯಶ್ ಬ್ಯಾಟಿಂಗ್ ಆಯ್ಕೆ

    ಟಾಸ್ ಗೆದ್ದ ನಟ ಯಶ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದರು. ಆರಂಭಿಕ ಆಟಗಾರರಾಗಿ ಬಂದ ಓವಿಯಸ್ ಶಾ ಹಾಗೂ ರಾಜೀವ್ ಒಳ್ಳೆಯ ಒಪನಿಂಗ್ ತಂದು ಕೊಟ್ಟರು. ಇಬ್ಬರು ಅರ್ಧಶತಕದ ಜತೆಯಾಟ ನೀಡಿದರು.

    ರಾಜೀವ್ ಅಜೇಯ 65 ರನ್

    ರಾಜೀವ್ ಅಜೇಯ 65 ರನ್

    ಒಳ್ಳೆಯ ಆಟ ಆಡಿದ ರಾಜೀವ್ 65 ರನ್ ಗಳನ್ನು ಕೇವಲ 28 ಎಸೆತಗಳಲ್ಲಿ ಗಳಿಸಿ ಅಜೇಯರಾಗಿ ಉಳಿದರು. ಜೊತೆಗೆ ಕೃಷ್ಣ 22 ರನ್ ಕಲೆ ಹಾಕಿದರು. ಯಶ್ ತಂಡ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತು.

    109 ರನ್‌ ಗಳಿಸಿ ಸೋತ ವಿಜಯನಗರ ಪ್ಯಾಟ್ರಿಯಾಟ್ಸ್

    109 ರನ್‌ ಗಳಿಸಿ ಸೋತ ವಿಜಯನಗರ ಪ್ಯಾಟ್ರಿಯಾಟ್ಸ್

    ಎರಡನೇ ಇನ್ನಿಂಗ್ಸ್ ಶುರು ಮಾಡಿದ ವಿಜಯನಗರ ಪ್ಯಾಟ್ರಿಯಾಟ್ಸ್ 112 ರನ್‌ಗಳ ಬೆನ್ನು ಹತಿತ್ತು. ಆದರೆ, ಶಿವರಾಜ್ ಕುಮಾರ್ ಅವರ ತಂಡ 109 ರನ್‌ ಗಳಿಸು ಸೋಲು ಒಪ್ಪಿಕೊಂಡಿತು. ಕೊನೆಯ ಬಾಲ್ ಗೆ ಗೆಲ್ಲಲು ನಾಲ್ಕು ರನ್ ಬೇಕಿತ್ತು. ಆದರೆ, ಮದರಂಗಿ ಕೃಷ್ಣ ಯಾರ್ಕರ್ ಎಸೆದು ಕೇವಲ ಒಂದು ರನ್ ನೀಡಿದರು.

    ಸ್ಟೋಟಕ ಆಟವಾಡಿದ ಶರತ್

    ಸ್ಟೋಟಕ ಆಟವಾಡಿದ ಶರತ್

    ವಿಜಯನಗರ ಪ್ಯಾಟ್ರಿಯಾಟ್ಸ್ ತಂಡದ ಪರವಾಗಿ ಬಿ.ಆರ್. ಶರತ್ ಅಜೇಯ 48 ರನ್ ಗಳಿಸಿದರು. ಕೇವಲ 19 ಬಾಲ್ ಗಳಲ್ಲಿ ಸ್ಟೋಟಕ ಆಟ ಆಡಿದರು. ಆದರೂ ಕೂಡ ಅವರ ಶ್ರಮ ವ್ಯರ್ತವಾಗಿತು. ವಿಜಯನಗರ ತಂಡದ ಪರವಾಗಿ ಅಭಿಷೇಕ್ 15 ರನ್ ನೀಡಿ 2 ವಿಕೆಟ್ ಪಡೆದರು.

     ಬರೀ 21 ರನ್ ಹೊಡೆದ ಗಿಲ್ ಕ್ರಿಸ್ಟ್

    ಬರೀ 21 ರನ್ ಹೊಡೆದ ಗಿಲ್ ಕ್ರಿಸ್ಟ್

    ವಿಜಯನಗರ ಪ್ಯಾಟ್ರಿಯಾಟ್ಸ್ ತಂಡ ಆಡಂ ಗಿಲ್ ಕ್ರಿಸ್ಟ್ ಈ ಪಂದ್ಯದ ಪ್ರಮುಖ ಆಕರ್ಷಣೆ ಆಗಿತ್ತು. ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಆಗಿರುವ ಇವರ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ ಅವರು ಕೇವಲ 21 ರನ್ ಗಳಿಸಿ ಪ್ರೀತಂ ಗುಬ್ಬಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಗಿಲ್ ಕ್ರಿಸ್ಟ್ ಅವರ ಜೊತೆಗೆ ಪ್ರೀತಮ್ ಗುಬ್ಬಿ ಇನ್ನೂ ಎರಡು ವಿಕೆಟ್ ಪಡೆದರು.

    ಮೊದಲ ಪಂದ್ಯದಲ್ಲಿ ಗೆದ್ದ ಗಣೇಶ್ ತಂಡ

    ಮೊದಲ ಪಂದ್ಯದಲ್ಲಿ ಗೆದ್ದ ಗಣೇಶ್ ತಂಡ

    ಈ ಪಂದ್ಯಕ್ಕೆ ಮುಂಚೆ ನಡೆದ ಕೆಸಿಸಿ ಸೀರಿಸ್ ನ ಮೊದಲ ಪಂದ್ಯದಲ್ಲಿ ಸುದೀಪ್ ತಂಡದ ವಿರುದ್ಧ ಗಣೇಶ್ ತಂಡಕ್ಕೆ ಸಿಕ್ಕಿತು. ಗಣೇಶ್ ಅವರ ಒಡೆಯರ್ ಚಾರ್ಜರ್ಸ್ 126 ರನ್ ಗಳಿಸಿ ವಿಜಯ ಸಾಧಿಸಿತು. ಪಂದ್ಯದ ಬಳಿಕ ಮಾತನಾಡಿದ ಗಣೇಶ್ ''ಇವತ್ತು ನನ್ನ ತಂಡ ಗೆದ್ದಿರುವುದಕ್ಕೆ ರಿತೇಶ್, ಸೈಯದ್ ಕಾರಣ. ದಿಲ್ಶಾನ್ ನಮಗೆ ಲಕ್. ಅದು ನಮಗೆ ವರ್ಕ್ ಆಯ್ತು'' ಎಂದು ಸಂತಸದಿಂದ ನುಡಿದರು.

    English summary
    KCC cricket tournament : Vijayanagara Patriots v/s Rashtrakuta Panthers match report. Rashtrakuta Panthers won the match.
    Saturday, September 8, 2018, 20:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X