For Quick Alerts
  ALLOW NOTIFICATIONS  
  For Daily Alerts

  'ಕೆಸಿಸಿ' ಟೂರ್ನಿಯ ವೇಳಾಪಟ್ಟಿ ನೋಡಿ: ಯಾರ ಪಂದ್ಯ ಯಾರ ವಿರುದ್ಧ.?

  By Bharath Kumar
  |
  Kannada Chalanachitra Cup 2018 : ಪ್ರಕಟವಾಯ್ತು ಕೆಸಿಸಿ ವೇಳಾ ಪಟ್ಟಿ..! | Oneindia Kannada

  ಸ್ಯಾಂಡಲ್ ವುಡ್ ನಟರ ಆಯೋಜನೆಯಲ್ಲಿ ನಡೆಯುವ ಕೆಸಿಸಿ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ ಹಾಗೂ ಗಣೇಶ್ ಸೇರಿದಂತೆ ಕನ್ನಡ ನಟರು ಭಾಗವಹಿಸುವ ಈ ಟೂರ್ನಿಯಲ್ಲಿ ಈ ಬಾರಿ ಅಂತಾರಾಷ್ಟ್ರೀಯ ಆಟಗಾರರು ಆಡುತ್ತಿರುವುದು ವಿಶೇಷ.

  ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಕೆಸಿಸಿ ಟೂರ್ನಿಯ ವೇಳಾಪಟ್ಟಿ ಪೋಸ್ಟ್ ಮಾಡಿದ್ದು, ಸೆಪ್ಟಂಬರ್ 8 ರಂದು ಕೆಸಿಸಿಯ ಮೊದಲ ಪಂದ್ಯ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 1.30ಕ್ಕೆ ಒಡೆಯರ್ ಚಾರ್ಜಸ್ ವರ್ಸಸ್ ಕದಂಬ ಲಯನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.

  ನಂತರ 3.45ಕ್ಕೆ ರಾಷ್ಟ್ರಕೂಟ ಪ್ಯಾಂಥರ್ಸ್ ವರ್ಸಸ್ ವಿಜಯನಗರ ಪೇಟ್ರಿಯಟ್ಸ್ ಪಂದ್ಯ ಜರುಗಲಿದೆ. ಆಮೇಲೆ 6 ಗಂಟೆಗೆ ಹೊಯ್ಸಳ ಈಗಲ್ಸ್ ವರ್ಸಸ್ ಒಡೆಯರ್ ಚಾರ್ಜಸ್ ಪಂದ್ಯ ಆರಂಭವಾಗಲಿದೆ. ಮೊದಲ ದಿನದ ಕೊನೆಯ ಪಂದ್ಯ ವಿಜಯನಗರ ಪೇಟ್ರಿಯಟ್ಸ್ ವರ್ಸಸ್ ಗಂಗಾ ವಾರಿಯರ್ಸ್ ನಡುವೆ ನಡೆಲಿದೆ.

  ಎರಡನೇ ದಿನ ಮಧ್ಯಾಹ್ನ 2 ಗಂಟೆಗೆ ಗಂಗಾ ವಾರಿಯರ್ಸ್ ವರ್ಸಸ್ ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯ ಜರುಗಲಿದೆ. ಸಂಜೆ 4.15ಕ್ಕೆ ಕದಂಬ ಲಯನ್ಸ್ ವರ್ಸಸ್ ಹೊಯ್ಸಳ ಈಗಲ್ಸ್ ಪಂದ್ಯ ಆರಂಭವಾಗಲಿದೆ. ಲೀಗ್ ಹಂತದ ಪಂದ್ಯಗಳು ಇಲ್ಲಿಗೆ ಮುಕ್ತಾಯವಾಗಲಿದ್ದು, ರಾತ್ರಿ 8.15ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

  ಅಂತಾರಾಷ್ಟ್ರೀಯ ಆಟಗಾರರಾದ ವಿರೇಂದ್ರ ಸೆಹ್ವಾಗ್ ಕದಂಬ ಲಯನ್ಸ್ ನಲ್ಲಿ ಆಟವಾಡಿದ್ರೆ, ಹರ್ಷೆಲ್​ ಗಿಬ್ಸ್ ಹೊಯ್ಸಳ ಈಗಲ್ಸ್, ತಿಲಕರತ್ನೆ ದಿಲ್ಸ್ಯಾನ್ ಒಡೆಯರ್ ಚಾರ್ಜರ್ಸ್, ಲ್ಯಾನ್ಸ್​ ಕ್ಲೂಸ್ನರ್ ಗಂಗಾ ವಾರಿಯರ್ಸ್, ಓವೈ ಷಾ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಆಯಡಂ ಗಿಲ್​ಕ್ರಿಸ್ಟ್ ವಿಜಯನಗರ ಪೇಟ್ರಿಯಟ್ಸ್ ತಂಡದಲ್ಲಿ ಆಡಲಿದ್ದಾರೆ.

  KCC season II match schedule

  ಈ ಕಡೆ ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್​ ವಿಜಯನಗರ ಪೇಟ್ರಿಯಟ್ಸ್, ಪುನೀತ್ ರಾಜಕುಮಾರ್ ಗಂಗಾ ವಾರಿಯರ್ಸ್, ಸುದೀಪ್ ಕದಂಬ ಲಯನ್ಸ್, ಯಶ್ ರಾಷ್ಟ್ರಕೂಟ ಪ್ಯಾಂಥರ್ಸ್, ಉಪೇಂದ್ರ ಹೊಯ್ಸಳ ಈಗಲ್ಸ್, ಹಾಗೂ ಗಣೇಶ್ ಒಡೆಯರ್ ಚಾರ್ಜರ್ಸ್ ತಂಡದ ಪರವಾಗಿ ಅಖಾಡಕ್ಕೆ ಇಳಿಯಲಿದ್ದಾರೆ.

  English summary
  KCC season II starts on 8th and 9th of september at Chinnaswamy stadium. here is the match schedule.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X