»   » 'ಕೆಂಡಸಂಪಿಗೆ' ನಾಯಕನ ಹೊಸ ಚಿತ್ರಕ್ಕೆ ಡೈರೆಕ್ಟರ್ ಯಾರು ಗೊತ್ತಾ?

'ಕೆಂಡಸಂಪಿಗೆ' ನಾಯಕನ ಹೊಸ ಚಿತ್ರಕ್ಕೆ ಡೈರೆಕ್ಟರ್ ಯಾರು ಗೊತ್ತಾ?

Posted By:
Subscribe to Filmibeat Kannada

'ಕೆಂಡಸಂಪಿಗೆ' ಚಿತ್ರದ ನಂತರ ನಾಯಕ ನಟ ವಿಕ್ಕಿ ಎಲ್ಲೂ ಕಾಣ್ತನೇ ಇಲ್ವಲ್ಲ ಅಂತ ಯೋಚನೆ ಮಾಡ್ತಿದ್ದವರಿಗೆ ಇಲ್ಲೊಂದು ಗುಡ್ ನ್ಯೂಸ್ ಸಿಕ್ಕಿದೆ.

ಹೌದು, 'ಕೆಂಡಸಂಪಿಗೆ' ನಾಯಕ ವಿಕ್ಕಿ ಸದ್ದಿಲ್ಲದೆ ಹೊಸ ಪ್ರಾಜೆಕ್ಟ್ ವೊಂದನ್ನ ಶುರು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಮಾತುಕತೆ ಕೂಡ ಮುಗಿಸಿದ್ದು, ಕನ್ನಡದ ಯಶಸ್ವಿ ನಿರ್ದೇಶಕನ ಸಿನಿಮಾವನ್ನ ಒಪ್ಪಿಕೊಂಡಿದ್ದಾರಂತೆ.['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

Kendasampige Hero Vicky Next With Director Santhu

ವಿಕ್ಕಿ ಅಭಿನಯಿಸಲಿರುವ ಹೊಸ ಸಿನಿಮಾವನ್ನ ನಿರ್ದೇಶನ ಮಾಡಲಿರುವುದು 'ಅಲೆಮಾರಿ' ಖ್ಯಾತಿಯ ನಿರ್ದೇಶಕ ಸಂತು. ಸದ್ಯ, 'ಡವ್' ಚಿತ್ರದ ನಂತರ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿರುವ ಸಂತು, ರೋರಿಂಗ್ ಸ್ಟಾರ್ ಶ್ರೀಮುರುಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಅದು ಇನ್ನು ಮಾತುಕತೆಯ ಹಂತದಲ್ಲಿದ್ದು, ಈ ಮಧ್ಯೆ 'ಕೆಂಡಸಂಪಿಗೆ' ನಾಯಕ ವಿಕ್ಕಿ ಜೊತೆ ಸಿನಿಮಾ ಶುರು ಮಾಡುವ ತಯಾರಿ ನಡೆಸಿದ್ದಾರಂತೆ.[ದುನಿಯಾ ಸೂರಿ 'ಕೆಂಡಸಂಪಿಗೆ'ಗೆ ಸಿಕ್ತಾ ವಿಮರ್ಶಕರ ಜೈಕಾರ?]

Kendasampige Hero Vicky Next With Director Santhu

ದುನಿಯಾ ಸೂರಿ ನಿರ್ದೇಶನ ಮಾಡಿದ್ದ 'ಕೆಂಡಸಂಪಿಗೆ', ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದಲ್ಲದೆ, ಶತದಿನ ಪೂರೈಸಿತ್ತು. ಅದಾದ ನಂತರ ಚಿತ್ರದ ನಟಿ ಮಾನ್ವಿತ ಹರೀಶ್ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾದ್ರು. ಆದ್ರೆ, ವಿಕ್ಕಿ ಯಾಕೋ ಸೈಲಾಂಟ್ ಆಗಿದ್ರು. ಇದೀಗ, ಒಂದು ವಿರಾಮದ ನಂತರ ನಟ ವಿಕ್ಕಿ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಬ್ಯುಸಿಯಾಗುತ್ತಿದ್ದಾರೆ.

'ಅಲೆಮಾರಿ' ಸಂತು ಹಾಗೂ ಕೆಂಡಸಂಪಿಗೆ ನಟ ವಿಕ್ಕಿ ಕಾಂಬಿನೇಷನ್ ನ ಚಿತ್ರದ ಕಥೆ ಏನು? ಟೈಟಲ್ ಏನೂ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸದ್ಯ, ಮಾತುಕತೆ ಮುಗಿಸಿರುವ ಚಿತ್ರತಂಡ ಆದಷ್ಟೂ ಬೇಗ ಅಧೀಕೃತವಾಗಿ ಘೋಷಣೆ ಮಾಡಲಿದೆ.

English summary
Kendasampige Fame Hero Vicky Has Doing his new Film With Kannada Director Santhu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada