Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ವಿಜಯಲಕ್ಷ್ಮಿಗೆ ಸಹಾಯ ಮಾಡಲು ಮುಂದಾದ ಫಿಲ್ಮ್ ಚೇಂಬರ್
ಕನ್ನಡ ಚಿತ್ರರಂಗದಲ್ಲಿ ಒಂದ್ಕಾಲದಲ್ಲಿ ರಾಣಿಯಂತೆ ಮೆರೆದ ನಟಿ ವಿಜಯಲಕ್ಷ್ಮಿ ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ನಟಿ ವಿಜಯಲಕ್ಷ್ಮಿ ಕಳೆದ ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆದರು.
ಮೊದಲೇ ಅವಕಾಶಗಳು ಇಲ್ಲದೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿಜಯಲಕ್ಷ್ಮಿ ಕುಟುಂಬ ಚಿತ್ರರಂಗದ ನೆರವು ಕೋರಿತ್ತು. ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಕೋರಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಂದಿಸಿದೆ.
ಆಸ್ಪತ್ರೆ
ಸೇರಿದ
ನಟಿ
ವಿಜಯಲಕ್ಷ್ಮಿ:
ಚಿತ್ರರಂಗದ
ಸಹಾಯ
ಕೇಳಿದ
ಸಹೋದರಿ
ಫಿಲ್ಮ್ ಚೇಂಬರ್ ಕಡೆಯಿಂದ ನಟಿ ವಿಜಯಲಕ್ಷ್ಮಿ ರವರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಗೌರವ ಕಾರ್ಯದರ್ಶಿ ಭಾ.ಮಾ.ಹರೀಶ್ ಭರವಸೆ ನೀಡಿದ್ದಾರೆ. ಇದಲ್ಲದೇ ವೈಯಕ್ತಿಕವಾಗಿಯೂ ಹಣಕಾಸು ಸಹಾಯ ಮಾಡಲು ಸಹೋದರರಾದ ಭಾ.ಮಾ.ಹರೀಶ್ ಮತ್ತು ಗಿರೀಶ್ ಮುಂದಾಗಿದ್ದಾರೆ.
ವಿಜಯಲಕ್ಷ್ಮಿ
ಕುಟುಂಬಕ್ಕೆ
ನಟಿ
ಜಯಪ್ರದ
ಸಹೋದರ
ಕೊಟ್ಟ
ಯಮಯಾತನೆ
ಅಷ್ಟಿಷ್ಟಲ್ಲ.!
ಹೈ ಬಿಪಿ ಮತ್ತು ತೀವ್ರ ಸುಸ್ತಾದ ಕಾರಣ ವಿಜಯಲಕ್ಷ್ಮಿ ರವರನ್ನು ಕಳೆದ ಗುರುವಾರ ಮಲ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ''ಇಷ್ಟು ದಿನ ತಾಯಿಗೆ ಹುಷಾರಿರಲಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸುತ್ತಿದ್ವಿ. ಈಗ ವಿಜಯಲಕ್ಷ್ಮಿ ಕೂಡ ಆಸ್ಪತ್ರೆ ಸೇರಿದ್ದಾಳೆ. ಚಿಕಿತ್ಸೆ ಕೊಡಿಸಲು ದುಡ್ಡು ಇಲ್ಲ. ಚಿತ್ರರಂಗದವರ ಸಹಾಯ ಬೇಕಿದೆ'' ಎಂದು ಸಹೋದರಿ ಉಷಾ ಕಣ್ಣೀರಿಟ್ಟಿದ್ದರು.
ನಟಿ
ವಿಜಯಲಕ್ಷ್ಮಿ
ಆತ್ಮಹತ್ಯೆಗೆ
ಪ್ರಯತ್ನ
ಪಟ್ಟಿದ್ದು
ನಿಜ.!
ಕಹಿ
ಅಧ್ಯಾಯ
ಇಲ್ಲಿದೆ...
ಇದನ್ನ ನೋಡಿ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಭಾ.ಮಾ.ಹರೀಶ್, ಗಿರೀಶ್ ಸೇರಿದಂತೆ ಹಲವರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಜಯಲಕ್ಷ್ಮಿ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ನೆರವು ನೀಡುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದಾರೆ.