»   » ಬೆತ್ತಲೆ ವಿಡಿಯೋ ವಿವಾದ ಹಿನ್ನೆಲೆ ಶ್ರೀನಿವಾಸ್ ರಾಜು ವಿರುದ್ಧ ಕ್ರಮ: ಕೆಎಫ್‌ಸಿಸಿ

ಬೆತ್ತಲೆ ವಿಡಿಯೋ ವಿವಾದ ಹಿನ್ನೆಲೆ ಶ್ರೀನಿವಾಸ್ ರಾಜು ವಿರುದ್ಧ ಕ್ರಮ: ಕೆಎಫ್‌ಸಿಸಿ

Posted By:
Subscribe to Filmibeat Kannada

'ದಂಡುಪಾಳ್ಯ 2' ಚಿತ್ರಕ್ಕೆ ಸಂಬಂಧಿಸಿದ 'ಟಾಪ್‌ ಲೆಸ್' ವಿವಾದ ಮತ್ತು ಬೆತ್ತಲೆ ವಿಡಿಯೋ ಬಗ್ಗೆ ನಟಿ ಸಂಜನಾ ನಿನ್ನೆ(ಜು.19) ಸ್ಪಷ್ಟನೆ ನೀಡಿದ್ದಾರೆ. ಆದರೆ ಇನ್ನು ನಿಲ್ಲದ ಈ ವಿವಾದ ಹಿನ್ನೆಲೆಯಲ್ಲಿ ಕೆಫ್‌ಸಿಸಿಯೂ ನಿರ್ದೇಶಕ ಶ್ರೀನಿವಾಸ್ ರಾಜು ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ದಂಡುಪಾಳ್ಯ ವಿವಾದದ ರಹಸ್ಯವನ್ನು 'ಬೆತ್ತಲು' ಮಾಡಿದ ಸಂಜನಾ

ಸೆನ್ಸಾರ್ ಬೋರ್ಡ್ ಡಿಲೀಟ್ ಮಾಡಿದ್ದ 'ದಂಡುಪಾಳ್ಯ 2' ಚಿತ್ರದಲ್ಲಿನ ನಟಿ ಸಂಜನಾ ರವರ ಬೆತ್ತಲೆ ವಿಡಿಯೋ ಲೀಕ್ ಆದ ಹಿನ್ನೆಲೆಯಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ಇದರಿಂದ ಚಿತ್ರರಂಗ ಮತ್ತು ಕೆಫ್‌ಸಿಸಿ ಅಧ್ಯಕ್ಷ ಸಾ.ರಾ.ಗೋವಿಂದು ರವರು ಸಹ ಬೇಸರಗೊಂಡಿದ್ದಾರೆ. ಈಗ ಈ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ರವರು ನಿರ್ದೇಶಕರ ಸಂಘದ ಸಭೆ ಕರೆದು ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

KFCC to take action on director Srinivasa Raju

'ನಿರ್ದೇಶಕ ಶ್ರೀನಿವಾಸ್ ರಾಜು ವಿವಾದಕ್ಕೀಡಾಗುವ ಬೆತ್ತಲೆ ದೃಶ್ಯಗಳನ್ನು ತೆಗೆದಿದ್ದು ಮಾತ್ರವಲ್ಲದೇ, ಪೊಲೀಸ್ ಇಲಾಖೆಗೆ ಅವಮಾನ ಆಗುವ ರೀತಿ ಚಿತ್ರದಲ್ಲಿ ತೋರಿಸಲಾಗಿದೆ. ಆದ್ದರಿಂದ ಈ ಬಗ್ಗೆ ನಿರ್ದೇಶಕರ ಸಭೆಯಲ್ಲಿ ಚರ್ಚಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂಬುದಾಗಿ ಹೇಳಿದ್ದಾರೆ.

ವಿಡಿಯೋ ಲೀಕ್ ಮಾಡಿದ ಚಿತ್ರತಂಡದ ವಿರುದ್ಧ ಸಂಜನಾ ಕೆಂಡಾಮಂಡಲ

ಅಲ್ಲದೇ 'ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿರುವ ರವಿಶಂಕರ್ ಮತ್ತು ಸಂಜನಾ ಅವರನ್ನು ಕರೆದು ಆ ದೃಶ್ಯಕ್ಕೆ ಸಂಬಂಧಪಟ್ಟಂತೆ ನಡೆದದ್ದು ಏನು, ಅಂತಹ ದೃಶ್ಯಗಳಿಗೆ ಅವರು ಹೇಗೆ ಒಪ್ಪಿಕೊಂಡರು ಎಂಬುದನ್ನು ಕೇಳುತ್ತೇವೆ' ಎಂದು ಸಾ.ರಾ.ಗೋವಿಂದು ರವರು ಹೇಳಿದ್ದಾರೆ. ನಿರ್ದೇಶಕರ ಸಂಘದ ಮೀಟಿಂಗ್ ನಂತರ ಶ್ರೀನಿವಾಸ್ ರಾಜು ಅವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಂಜನಾ ಬೆತ್ತಲೆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟ 'ದಂಡುಪಾಳ್ಯ' ನಿರ್ದೇಶಕ

English summary
The Karnataka Film Chamber of Commerce has said that it will take action on director Srinivasa Raju for his objectionable scene in the movie 'Dandupalya 2'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada