For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮ ವರದಿಗಾರರೊಂದಿಗೆ ಕೆಜಿಎಫ್ 2 ಚಿತ್ರತಂಡದ ಕಿರಿಕ್

  |

  ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಮಲ್ಪೆಯ ಸುಂದರ ಕಡಲ ತೀರದಲ್ಲಿ ನಡೆಯುತ್ತಿದೆ. ಇಷ್ಟು ದಿನ ಬೆಂಗಳೂರಿನ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣ ಇಂದಿನಿಂದ ಮಂಗಳೂರ ಕಡಲ ಕಿನಾರೆಗೆ ವರ್ಗಾವಣೆ ಆಗಿದೆ.

  ಆದರೆ ಕೆಜಿಎಫ್ 2 ಚಿತ್ರೀಕರಣದ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚಿತ್ರತಂಡ ಕಿರಿಕ್ ಮಾಡಿಕೊಂಡಿದೆ ಎಂದು ವರದಿಯಾಗಿದೆ.

  ದೇಶದ ಗಮನ ಸೆಳೆದಿರುವ ಸಿನಿಮಾ ಕೆಜಿಎಫ್ 2 ಚಿತ್ರೀಕರಣ ಕುರಿತಾಗಿ ವರದಿ ಮಾಡಲು ಹಲವು ವರದಿಗಾರರು ಮಲ್ಪೆ ಕಡಲ ತೀರಕ್ಕೆ ತೆರಳಿದ್ದರು. ಆದರೆ ಅವರ್ಯಾರನ್ನೂ ಚಿತ್ರೀಕರಣದ ಹತ್ತಿರ ಬಿಡಲಾಗಿಲ್ಲ. ಅಲ್ಲಿದ್ದ ಬೌನ್ಸರ್‌ಗಳು ಮಾಧ್ಯಮದವರನ್ನು ತಡೆದಿದ್ದಾರೆ.

  ಎಷ್ಟೇ ಪ್ರಯತ್ನ ಪಟ್ರು KGF ತಂಡದಿಂದ ಇದನ್ನು ತಡೆಯೋಕೇ ಆಗ್ತಿಲ್ಲಾ | Filmibeat Kannada

  ಮಾಧ್ಯಮ ಪ್ರತಿನಿಧಿಗಳಿಗೆ ಅಡ್ಡಿಯಾಗಿದ್ದಕ್ಕೆ ವರದಿಗಾರರು ಹಾಗೂ ಚಿತ್ರತಂಡದ ನಡುವೆ ಮಾತಿನ ಚಕಮಕಿ ನಡೆದಿದೆ. ಆ ನಂತರ ಚಿತ್ರತಂಡ ಸ್ಪಷ್ಟನೆ ನೀಡಿದ್ದು, 'ಸಿನಿಮಾ ಬಗ್ಗೆ ನಾವುಗಳೇ ಸಮಯ ಬಂದಾಗ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ' ಎಂದು ಹೇಳಿದ್ದಾರೆ.

  English summary
  KGF 2 movie shooting going on in Mangaluru. KGF 2 movie had verble fight with media persons.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X