For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಅಪ್‌ಡೇಟ್: ರಿಲೀಸ್ ಬಗೆಗಿನ ಈ ಸುದ್ದಿ ನಿಜ ಆಗುತ್ತಾ?

  |

  ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಯಾವಾಗ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ಭೀತಿ ಕಡಿಮೆಯಾಗುತ್ತಿದೆ. ಜನರು ನಿರಾಂತಕವಾಗಿ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರಮಂದಿರಗಳು ಕಾರ್ಯಾರಂಭ ಮಾಡಿದೆ. ರಿಲೀಸ್ ದಿನಾಂಕ ಬೇಗ ಘೋಷಣೆ ಮಾಡಿ ಎಂದು ಚಿತ್ರಪ್ರೇಮಿಗಳು ಕೇಳುತ್ತಿದ್ದಾರೆ. ಇದುವರೆಗೂ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ.

  ಇದೀಗ, ಕೆಜಿಎಫ್ ಸೀಕ್ವೆಲ್ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಸಿನಿಮಾ ರಿಲೀಸ್ ಬಗ್ಗೆ ಥ್ರಿಲ್ಲಿಂಗ್ ವಿಷಯವೊಂದು ಚರ್ಚೆಯಾಗುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಅಷ್ಟಕ್ಕೂ, ಕೆಜಿಎಫ್ ಚಾಪ್ಟರ್ 2 ಅಪ್‌ಡೇಟ್ ಏನು? ಮುಂದೆ ಓದಿ....

  ಐಎಂಡಿಬಿ ರೇಟಿಂಗ್: ವಿಕ್ರಾಂತ್ ರೋಣ ಟಾಪ್, RRR ಪಟ್ಟಿಯಲ್ಲೇ ಇಲ್ಲಐಎಂಡಿಬಿ ರೇಟಿಂಗ್: ವಿಕ್ರಾಂತ್ ರೋಣ ಟಾಪ್, RRR ಪಟ್ಟಿಯಲ್ಲೇ ಇಲ್ಲ

  ಡಿಸೆಂಬರ್‌ಗೆ ಕೆಜಿಎಫ್ ದರ್ಶನ

  ಡಿಸೆಂಬರ್‌ಗೆ ಕೆಜಿಎಫ್ ದರ್ಶನ

  ಕೆಜಿಎಫ್ ಚಾಪ್ಟರ್ 2 ಯಾವಾಗ ಬಿಡುಗಡೆ ಎಂದು ಕಾಯುತ್ತಿರುವ ಅಭಿಮಾನಿಗಳು ಮತ್ತಷ್ಟು ದಿನ ಕಾಯಬೇಕಿದೆ. ಏಕಂದ್ರೆ ವರ್ಷದ ಅಂತ್ಯದಲ್ಲಿ ಕೆಜಿಎಫ್ ತೋರಿಸಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯದ ವರದಿ ಪ್ರಕಾರ, ಡಿಸೆಂಬರ್ ತಿಂಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಮಾಡುವ ಸಾಧ್ಯತೆ ಇದೆ.

  ಕೆಜಿಎಫ್ ಚಾಪ್ಟರ್ 2 ವಿಳಂಬವಾಗಲು ಕಾರಣ ಇದೇನಾ?ಕೆಜಿಎಫ್ ಚಾಪ್ಟರ್ 2 ವಿಳಂಬವಾಗಲು ಕಾರಣ ಇದೇನಾ?

  ಚಿತ್ರ ವಿಮರ್ಶಕರು ಟ್ವೀಟ್

  ಚಿತ್ರ ವಿಮರ್ಶಕರು ಟ್ವೀಟ್

  ಕೆಜಿಎಫ್ ಬಿಡುಗಡೆ ಕುರಿತು 'ಲೆಟ್ಸ್ ಒಟಿಟಿ ಗ್ಲೋಬಲ್' ಟ್ವಿಟ್ಟರ್ ಖಾತೆ ಪೋಸ್ಟ್ ಹಾಕಿದೆ. ಅದರ ಜೊತೆಗೆ ತಮಿಳಿನ ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಸಹ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಮತ್ತೊಬ್ಬ ವಿಶ್ಲೇಷಕ ನಾಗನಾಥನ್ ಸಹ ಡಿಸೆಂಬರ್‌ನಲ್ಲಿ ಕೆಜಿಎಫ್ ಎಂಟ್ರಿ ಎಂದು ಬರೆದುಕೊಂಡಿದ್ದಾರೆ.

  ರವೀನಾ ಟಂಡನ್ ಮೇಕಿಂಗ್ ಝಲಕ್

  ರವೀನಾ ಟಂಡನ್ ಮೇಕಿಂಗ್ ಝಲಕ್

  ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರಧಾನಿ ರಮಿಕಾ ಸೇನ್ ಆಗಿ ರವೀನಾ ಅಭಿನಯಿಸಿದ್ದು, ರವೀನಾ ಅವರ ಮೇಕಿಂಗ್ ಫೋಟೋವೊಂದು ವೈರಲ್ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರವೀನಾ ಕಾಣಿಸಿಕೊಂಡಿರುವ ಮೇಕಿಂಗ್ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  ಸಂಜಯ್ ದತ್ ಡಬ್ಬಿಂಗ್?

  ಸಂಜಯ್ ದತ್ ಡಬ್ಬಿಂಗ್?

  ಸದ್ಯ ಕೆಜಿಎಫ್ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಂಜಯ್ ದತ್ ಪಾತ್ರ ಬಿಟ್ಟು ಉಳಿದ ಎಲ್ಲರೂ ಡಬ್ ಮಾಡಿದ್ದಾರೆ. ಹಿಂದಿಯಲ್ಲಿ ಸಂಜಯ್ ದತ್ ಡಬ್ ಮಾಡಲಿದ್ದು, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬೇರೆ ಡಬ್ಬಿಂಗ್ ಕಲಾವಿದರು ಧ್ವನಿ ನೀಡಲಿದ್ದಾರೆ. ಕನ್ನಡದಲ್ಲಿ ಅಧೀರನ ಪಾತ್ರಕ್ಕೆ ಸೂಕ್ತ ಧ್ವನಿ ಸಿಕ್ಕಿಲ್ಲ. ಹಾಗಾಗಿ, ಹುಡುಕಾಟ ಮುಂದುವರಿದಿದೆ. ಇದರಿಂದಲೇ ರಿಲೀಸ್ ದಿನಾಂಕ ಪ್ರಕಟಿಸಲು ತಡವಾಗ್ತಿದೆ. ಇನ್ನು ಜುಲೈ 29 ರಂದು ಸಂಜಯ್ ದತ್ ಹುಟ್ಟುಹಬ್ಬವಿದ್ದು, ಆ ದಿನದ ವಿಶೇಷವಾಗಿ ಅಧೀರನ ಟೀಸರ್ ಬರುವ ಸಾಧ್ಯತೆ ಇದೆ.

  100 ಪರ್ಸೆಂಟ್ ಅವಕಾಶಕ್ಕಾಗಿ ಕಾಯುತ್ತಿದ್ದೇವೆ

  100 ಪರ್ಸೆಂಟ್ ಅವಕಾಶಕ್ಕಾಗಿ ಕಾಯುತ್ತಿದ್ದೇವೆ

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಈ ಚಿತ್ರವನ್ನು ಹಿಂದಿಯಲ್ಲಿ ಎಕ್ಸೆಲ್ ಎಂಟರ್‌ಟೈನ್ ಸಂಸ್ಥೆಯಡಿ ರಿತೇಶ್ ಸಿದ್ವಾನಿ ಮತ್ತು ಫರಾನ್ ಅಖ್ತರ್ ರಿಲೀಸ್ ಮಾಡಲಿದ್ದಾರೆ. ಇತ್ತೀಚಿಗಷ್ಟೆ ಕೆಜಿಎಫ್ ಬಿಡುಗಡೆ ಬಗ್ಗೆ ಮಾತನಾಡಿದ್ದ ರಿತೇಶ್, '' ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅವಕಾಶ ಕೊಡ್ತಿದ್ದಂತೆ ರಿಲೀಸ್ ದಿನಾಂಕ ಪ್ರಕಟಿಸುವ ಯೋಜನೆ ಇದೆ'' ಎಂದಿದ್ದಾರೆ.

  English summary
  KGF 2 theatrical release postponed to December 2021. kgf2 update expected tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X