For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಹಾಡುಗಳ‌ ತಯಾರಿ ಆರಂಭ

  |
  KGF Movie: ಅಬ್ಬರಿಸಲು ರೆಡಿಯಾಗ್ತಿದೆ ಕೆಜಿಎಫ್ 2 | FILMIBEAT KANNADA

  ಸ್ಯಾಂಡಲ್ ವುಡ್ ನಲ್ಲಿ ದಾಖಲೆ ನಿರ್ಮಿಸಿದ 'ಕೆಜಿಎಫ್' ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಮೊದಲ ಭಾಗ ರಿಲೀಸ್ ಆಗುತ್ತಿದ್ದಂತೆ 'ಕೆಜಿಎಫ್' ಎರಡನೇ ಚಾಪ್ಟರ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ರಾಕಿಂಗ್ ಸ್ಟಾರ್ ಅಬ್ಬರಕ್ಕೆ ದಂಗ್ ಆಗಿದ್ದ ಅಭಿಮಾನಿಗಳೀಗ 'ಕೆಜಿಎಫ್-2' ಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

  ಈಗಾಗಲೆ ಚಿತ್ರೀಕರಣ ಪ್ರಾರಂಭಿಸಿರುವ 'ಕೆಜಿಎಫ್' ಚಿತ್ರತಂಡ ಇಂದಿನಿಂದ ಸಂಗೀತ ಸಂಯೋಜನೆ ಕೆಲಸ ಶುರು ಮಾಡಿಕೊಂಡಿದೆ. ರವಿ ಬಸ್ರೂರು ಸಾರಥ್ಯದಲ್ಲಿ ಮೂಡಿಬಂದ ಮೊದಲ ಭಾಗದ ಹಾಡುಗಳು ಸೂಪರ್ ಹಿಟ್ ಆಗಿವೆ. ಈಗ ಎರಡನೇ ಚಾಪ್ಚರ್ ನ ಹಾಡಿನ ಕೆಲಸಗಳು ಪ್ರಾರಂಭವಾಗಿದ್ದು ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

  'ಕೆಜಿಎಫ್ 2' ನಲ್ಲಿ ಮದುವೆ ಆಗ್ತಾರಾ ರಾಕಿ - ರೀನಾ?

  ವಿಶೇಷ ಅಂದ್ರೆ ರವಿ ಬಸ್ರೂರು ಅವರ ಹೊಸ ಸ್ಟುಡಿಯೋದಲ್ಲಿ 'ಕೆಜಿಎಫ್-2' ಚಿತ್ರದ ಸಂಗೀತ ಕೆಲಸಗಳು ಶುರು ಆಗಿದೆ. ಈ ಸಂತಸದ ಸುದ್ದಿಯನ್ನು 'ಕೆಜಿಎಫ್' ಟೀಂ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದೆ. ಸ್ಟುಡಿಯೋದಲ್ಲಿ ಕುಳಿತು ಸಂಗೀತ ಸಂಯೋಜನೆಯಲ್ಲಿ ನಿರತರಾಗಿರುವ ರವಿ ಬಸ್ರೂರು ಮತ್ತು ಪ್ರಶಾಂತ್ ನೀಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮೊದಲ ಭಾಗದ ಯಶಸ್ಸಿನ ನಂತರ ಎರಡನೇ ಭಾಗದ ಚಿತ್ರೀಕರಣದಲ್ಲಿ 'ಕೆಜಿಎಫ್' ತಂಡ ಬ್ಯುಸಿಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಸದ್ಯ ಮಂಡ್ಯ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಸಧ್ಯದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಈಗ ಚಿತ್ರದ ಬೇರೆ ಬೇರೆ ಪ್ರಮುಖ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಕೆಜಿಎಫ್' ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.

  English summary
  kannada's super hit KGF movie Chapter 2 Music Composing Started Today At RaviBasrur's New Re-Designed Studio. Rocking star Yash starrer KGF movie is directed by Prashanth Neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X