Don't Miss!
- News
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಗುಜರಾತ್ನಲ್ಲಿ ಜೂನಿಯರ್ ಕ್ಲರ್ಕ್ ನೇಮಕಾತಿ ಪರೀಕ್ಷೆ ರದ್ದು, ಓರ್ವನ ಬಂಧನ
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'KGF-2' ಅಧೀರ ಪಾತ್ರಕ್ಕೆ ಅವಕಾಶ ಸಿಕ್ಕಾಗ ಸಂಜಯ್ ದತ್ ಮೊದಲ ಪ್ರತಿಕ್ರಿಯೆ ಹೀಗಿತ್ತು
ಭಾರತೀಯ ಸಿನಿಮಾರಂಗವೇ ಕಾರತದಿಂದ ಎದುರು ನೋಡುತ್ತಿರುವ ಸಿನಿಮಾಗಳಲ್ಲ ಕನ್ನಡದ ಕೆಜಿಎಫ್-2 ಕೂಡ ಒಂದು. ಸಿನಿಮಾ ಹೇಗಿರಲಿದೆ ಎನ್ನುವ ಒಂದು ಝಲಕ್ ಅನ್ನು ಇತ್ತಿಚೀಗಷ್ಟೆ ಟೀಸರ್ ರಿಲೀಸ್ ಮಾಡುವ ಮೂಲಕ ತೋರಿಸಿದ್ದಾರೆ.
Recommended Video
ಟೀಸರ್ ರಿಲೀಸ್ ಆದ ಬಳಿಕ ಸಿನಿಮಾದ ಮೇಲಿನ ಕುತೂಹಲ, ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕೆಜಿಎಫ್-2 ಟೀಸರ್ ಈಗಾಗಲೇ 125 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದೆ. ಚಿತ್ರದಲ್ಲಿ ಯಶ್ ಪಾತ್ರದ ಜೊತೆಗೆ ನಟಿ ರವೀನಾ ಟಂಡನ್ ಮತ್ತು ಸಂಜಯ್ ದತ್ ಪಾತ್ರ ಕೂಡ ಅಷ್ಟೆ ಕುತೂಹಲ ಮೂಡಿಸಿದೆ. ಸಂಜಯ್ ದತ್ ಪಾತ್ರ ಹೇಗಿರಲಿದೆ ಎಂದು ನೋಡಲು ಕಾತರದಿಂದ ಕಾದಿದ್ದ ಅಭಿಮಾನಿಗಳಿಗೆ ಟೀಸರ್ ನಲ್ಲಿ ಅಧೀರನ ಮುಖ ತೋರಿಸದೆ ಇರುವುದು ನಿರಾಸೆ ಮೂಡಿಸಿದೆ. ಆದರೆ ಪಾತ್ರ ಭಯಾನಕವಾಗಿದೆ ಎನ್ನುವ ಸುಳಿವನ್ನು ಟೀಸರ್ ಬಿಟ್ಟುಕೊಟ್ಟಿದೆ. ಮುಂದೆ ಓದಿ...
ಕೆಜಿಎಫ್
2
ಟೀಸರ್‌ನಲ್ಲಿ
ಬಯಲಾದ
ಈ
ಹೊಸ
ಪಾತ್ರ
ಯಾವುದು,
ಯಾರು
ಈ
ನಟಿ?

ಭಯಾನಕ ಅಧೀರ ಪಾತ್ರದಲ್ಲಿ ಸಂಜಯ್ ದತ್
ರಾಕಿ ಭಾಯ್ ಮತ್ತು ಅಧೀರನ ನಡುವಿನ ಕಾಳಗ ನೋಡಲು ಭಾರತೀಯ ಸಿನಿಮಾ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಭಯಾನಕ ಅಧೀರ ಪಾತ್ರದಲ್ಲಿ ಮಿಂಚಿದ್ದಾರೆ. ಅತ್ಯಂತ ಕ್ರೂರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್, ಅಧೀರ ಪಾತ್ರಕ್ಕೆ ಅವಕಾಶ ಸಿಕ್ಕಾಗ ಮೊದಲ ಪ್ರತಿಕ್ರಿಯೆ ಹೇಗಿತ್ತು ಎನ್ನುವ ಬಗ್ಗೆ ಸಂಜಯ್ ದತ್ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

ತಕ್ಷಣ 'ಎಸ್' ಎಂದು ಹೇಳಿದೆ
'ಬಹಳ ಸಮಯದ ಬಳಿಕ ನನಗೆ ಇಂತಹ ಪಾತ್ರವನ್ನು ನೀಡಲಾಯಿತು. ನಾನು ತುಂಬ ಉತ್ಸುಕನಾಗಿದ್ದೆ. ತುಂಬಾ ಪ್ರಬಲವಾದ ಪಾತ್ರ ಇದೀಗಾಗಿದೆ. ನನ್ನಿಂದ ತಕ್ಷಣ ಎಸ್ ಅಂತ ಹೇಳುವಂತೆ ಮಾಡಿತು' ಎಂದು ಹೇಳಿದ್ದಾರೆ.
ಕೆಜಿಎಫ್
ಸರ್ವಶ್ರೇಷ್ಠ
ದಾಖಲೆ:
100
ಮಿಲಿಯನ್
ವೀಕ್ಷಣೆ
ಕಂಡ
ಚಾಪ್ಟರ್
2
ಟೀಸರ್

ಶ್ರಮಕ್ಕೆ ಸಿಕ್ಕ ಫಲವಿದು
ಟೀಸರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜಯ್ ದತ್ ಮೂಕವಿಸ್ಮಿತರಾಗಿದ್ದಾರೆ. 'ಇಡೀ ತಂಡ ತುಂಬಾ ಶ್ರಮಿಸಿದೆ. ಟೀಸರ್ ಗೆ ಸಿಕ್ಕ ಪ್ರತಿಕ್ರಿಯೆ ಫಲ ನೀಡಿದೆ ಎಂದು ಸಂಜಯ್ ದತ್ ಹೇಳಿದ್ದಾರೆ. ಇದಿನ್ನು ಟೀಸರ್, ಪಿಕ್ಟರ್ ಬಾಕಿ ಇದೆ. ನಾನು ಕೂಡ ತುಂಬಾ ಉತ್ಸುಕನಾಗಿದ್ದೇನೆ ಈ ಸಿನಿಮಾ ಬಗ್ಗೆ' ಎಂದು ಹೇಳಿದ್ದಾರೆ.

ರವೀನಾ ಟಂಡನ್ ಹೇಳಿದ್ದೇನು?
ಇನ್ನು ನಟಿ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ರವೀನಾ ಟಂಡನ್ ಮಾತನಾಡಿ, ನಾನು ಪಾತ್ರದ ಬಗ್ಗೆ ಹೆಚ್ಚು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಸಾಕಷ್ಟು ಆಸಕ್ತಿದಾಯಕವಾದ ಮತ್ತು ವಿಭಿನ್ನ ಪಾತ್ರವಾಗಿದೆ. ರಮಿಕಾ ಸೇನ್ ಶಕ್ತಿಶಾಲಿಯಾದ ಪಾತ್ರವಾಗಿದೆ. ನನ್ನ ಪಾತ್ರದ ಚಲನೆಯನ್ನು ಊಹಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.