twitter
    For Quick Alerts
    ALLOW NOTIFICATIONS  
    For Daily Alerts

    KGF 2 Pre-Release Business: 500 ಕೋಟಿ ದೋಚಿದ 'ಕೆಜಿಎಫ್ 2', ಬ್ಲಾಕ್ ಬಸ್ಟರ್ ಲಿಸ್ಟ್ ಸೇರಲು ಎಷ್ಟು ಕಲೆಕ್ಷನ್ ಮಾಡ್ಬೇಕು?

    |

    ಯಶ್ ಅಭಿನಯದ 'ಕೆಜಿಎಫ್- 2' ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆಗಳನ್ನು ಮಾಡಿದೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಸದ್ದು ಮಾಡುತ್ತಿರುವ 'RRR' ಸಿನಿಮಾದ ಪ್ರಿ- ರಿಲೀಸ್ ಬ್ಯುಸಿನೆಸ್ ದಾಖಲೆಗಳನ್ನು 'ಕೆಜಿಎಫ್- 2' ಇತ್ತೀಚೆಗಷ್ಟೇ ಮುರಿದಿದೆ ಎಂದು ಟ್ರೇಡಿಂಗ್ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಯಶ್ ನಾಯಕನಾಗಿ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. 'ಕೆಜಿಎಫ್ ಚಾಪ್ಟರ್ 1' ನಾಲ್ಕು ವರ್ಷಗಳ ಹಿಂದೆ, ಡಿಸೆಂಬರ್ 21, 2018 ರಂದು ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಂಡ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತು. 'ಬಾಹುಬಲಿ' ಬಳಿಕ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಅತ್ಯಂತ ಯಶಸ್ವಿ ಕಂಡ ಎರಡನೇ ಚಿತ್ರ ಎನಿಸಿಕೊಂಡಿದೆ. ಇದರೊಂದಿಗೆ 'ಕೆಜಿಎಫ್ 2' ಚಿತ್ರಕ್ಕಾಗಿ ಅಭಿಮಾನಿಗಳು, ಸಿನಿ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

    ಅಭಿಮಾನಿಗಳ ಅಭಿಮಾನವನ್ನು ದೇಶದೆಲ್ಲೆಡೆ ಪಸರಿಸಿದ 'ಕೆಜಿಎಫ್ 2' ತಂಡಅಭಿಮಾನಿಗಳ ಅಭಿಮಾನವನ್ನು ದೇಶದೆಲ್ಲೆಡೆ ಪಸರಿಸಿದ 'ಕೆಜಿಎಫ್ 2' ತಂಡ

    'ಕೆಜಿಎಫ್ 2' ಪ್ರಿ ರಿಲೀಸ್ ಬ್ಯುಸಿನೆಸ್ ಎಷ್ಟು?

    'ಕೆಜಿಎಫ್ 2' ಪ್ರಿ ರಿಲೀಸ್ ಬ್ಯುಸಿನೆಸ್ ಎಷ್ಟು?

    ಕೋವಿಡ್ ಎರಡನೇ ಅಲೆಯ ಕಾರಣದಿಂದ 'ಕೆಜಿಎಫ್- 2' ಚಿತ್ರದ ಬಿಡುಗಡೆ ತಡವಾಯಿತು. ಆದರೆ, ನಿರೀಕ್ಷೆಗಳು ಮಾತ್ರ ಕಡಿಮೆಯಾಗಿಲ್ಲ. ಈಗಿರುವ ಭಾರತೀಯ ಸಿನಿಮಾ ದಾಖಲೆಗಳನ್ನು ಪರಿಶೀಲಿಸಿದರೆ 'ಕೆಜಿಎಫ್ -2' ಚಿತ್ರದ ಪ್ರಿ- ರಿಲೀಸ್ ಬ್ಯುಸಿನೆಸ್ ನಂಬರ್ ಒನ್ ಸ್ಥಾನದಲ್ಲಿದೆ. 'ಕೆಜಿಎಫ್ ಚಾಪ್ಟರ್ 2' ಟೀಸರ್ ಮತ್ತು ಟ್ರೈಲರ್ ವೀವ್ಸ್‌ನಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಸಾಧಿಸಿದೆ. ಇದೀಗ ಪ್ರಿ- ರಿಲೀಸ್ ಬ್ಯುಸಿನೆಸ್‌ನಲ್ಲೂ 'ಕೆಜಿಎಫ್- 2' ಸಂಚಲನ ಮೂಡಿಸಿದೆ ಎನ್ನುತ್ತಾರೆ ಸಿನಿ ಪಂಡಿತರು. ನಿರ್ದೇಶಕ ರಾಜಮೌಳಿ, ಎನ್ ಟಿಆರ್ ಹಾಗೂ ರಾಮ್ ಚರಣ್ ಕಾಂಬಿನೇಷಸ್‌ನಲ್ಲಿ ಮೂಡಿಬಂದಿದ್ದ 'RRR' ಸಿನಿಮಾದ ಬಾಕ್ಸಾಫೀಸ್ ದಾಖಲೆಯನ್ನು ಮುರಿಯಲು 'ಕೆಜಿಎಫ್ 2' ಹೆಜ್ಜೆ ಹಾಕುತ್ತಿದೆ.

    KGF 2 Booking: ಯಶ್ 'ಕೆಜಿಎಫ್ 2' ಸಿನಿಮಾಗೆ ಬುಕ್ಕಿಂಗ್ ಆರಂಭ: ಮೊದಲ ಹಂತದಲ್ಲೇ ದಾಖಲೆ ಬರೆದಿದ್ದೆಲ್ಲಿ?KGF 2 Booking: ಯಶ್ 'ಕೆಜಿಎಫ್ 2' ಸಿನಿಮಾಗೆ ಬುಕ್ಕಿಂಗ್ ಆರಂಭ: ಮೊದಲ ಹಂತದಲ್ಲೇ ದಾಖಲೆ ಬರೆದಿದ್ದೆಲ್ಲಿ?

    Recommended Video

    Rocky bhai Yash Superb Answers to Mumbai Media | Watch with Kannada Subtitles | KGF 2 | Sanjay dutt
    ಕರ್ನಾಟಕದಲ್ಲಿ ನಡೆದಿದ್ದು ಎಷ್ಟು ಕೋಟಿ ವ್ಯವಹಾರ?

    ಕರ್ನಾಟಕದಲ್ಲಿ ನಡೆದಿದ್ದು ಎಷ್ಟು ಕೋಟಿ ವ್ಯವಹಾರ?

    'ಕೆಜಿಎಫ್- 2'ಚಿತ್ರಕ್ಕೆ ಸಂಬಂಧಿಸಿದಂತೆ ಕನ್ನಡಿಗರ ನಿರೀಕ್ಷೆ ಬಹಳ ದೊಡ್ಡದು. ಕರ್ನಾಟಕ ಏಪ್ರಿಲ್ 14ಕ್ಕಾಗಿ ಬಹಳ ಕಾತರದಿಂದ ಎದುರು ನೋಡುತ್ತಿದೆ. 'KGF-2' ಸಿನಿಮಾ ಕರ್ನಾಟಕ ರಾಜ್ಯದಲ್ಲಿ 180 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ರಿ-ರಿಲೀಸ್ ವ್ಯವಹಾರವನ್ನು ಮಾಡಿದೆ ಅಂತ ಹೇಳಲಾಗುತ್ತಿದೆ. ಇದು ಕನ್ನಡ ಸಿನಿಮಾ ರಂಗದ ಅತಿದೊಡ್ಡ ಪ್ರಿ- ರಿಲೀಸ್ ಬಿಸಿನೆಸ್ ಆಗಿದೆ. ನಿಜಕ್ಕೂ ಇಷ್ಟು ದೊಡ್ಡ ಮಟ್ಟದ ಪ್ರಿ- ರಿಲೀಸ್ ಬಿಸಿನೆಸ್ ಕರ್ನಾಟಕದಲ್ಲಿ ನಡೆದಿದೆ ಎಂಬುದಕ್ಕೆ ಹೊಂಬಾಳೆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಒಂದು ವೇಳೆ ಇಷ್ಟು ದೊಡ್ಡ ಮಟ್ಟದ ಬ್ಯುಸಿನೆಸ್ ಆಗಿದ್ದರೆ, ಕರ್ನಾಟಕದಲ್ಲಿ ದಾಖಲೆ ಮುರಿಯಲು 220 ಕೋಟಿ ಬ್ಯುಸಿನೆಸ್ ಮಾಡಬೇಕು. ಈ ಸಿನಿಮಾ ಸೂಪರ್ ಹಿಟ್ ಆಗಲು 250-260 ಕೋಟಿ ವ್ಯವಹಾರ ಮಾಡಬೇಕಾಗುತ್ತದೆ.

    ಆಂಧ್ರ-ತಮಿಳುನಾಡು ಬ್ಯುಸಿನೆಸ್ ಎಷ್ಟು?

    ಆಂಧ್ರ-ತಮಿಳುನಾಡು ಬ್ಯುಸಿನೆಸ್ ಎಷ್ಟು?

    ಇನ್ನು ತೆಲುಗು ರಾಜ್ಯಗಳ ವಿಚಾರದಲ್ಲಿ ನಿಜಾಮ್, ಸೀಡೆಡ್, ಆಂಧ್ರ ಪ್ರದೇಶದಲ್ಲಿ 100 ಕೋಟಿ ಬ್ಯುಸಿನೆಸ್ ನಡೆದಿದೆ. ಈ ಚಿತ್ರ 130 ಕೋಟಿ ಬಿಜಿನೆಸ್ ಮಾಡಿದರೆ ಸೇಫ್ ಅಂತ ಹೇಳಬಹುದು. 160 ಕೋಟಿ ಮಾಡಿದರೆ ಸೂಪರ್ ಹಿಟ್ ಆಗುತ್ತದೆ. ಪಕ್ಕದ ತಮಿಳುನಾಡಿನಲ್ಲಿ 40 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಅಲ್ಲಿಗೆ 60 ಕೋಟಿ ವ್ಯವಹಾರ ಮಾಡಿದರೆ ಚಿತ್ರ ಸೇಫ್ ಜೋನ್‌ಗೆ ತಲುಪುತ್ತದೆ. 80 ಕೋಟಿ ಬಿಸಿನೆಸ್ ಮಾಡಿದ್ರೆ ಸೂಪರ್ ಹಿಟ್ ಲಿಸ್ಟ್ ಸೇರಿದಂತೆ.

    'ಕೆಜಿಎಫ್ 2' ಪ್ರಚಾರ ಬದಿಗಿಟ್ಟು ಕುಟುಂಬದೊಂದಿಗೆ ಯುಗಾದಿ ಆಚರಿಸಿದ ಯಶ್'ಕೆಜಿಎಫ್ 2' ಪ್ರಚಾರ ಬದಿಗಿಟ್ಟು ಕುಟುಂಬದೊಂದಿಗೆ ಯುಗಾದಿ ಆಚರಿಸಿದ ಯಶ್

    ಬಾಲಿವುಡ್‌ನಲ್ಲಿ ಕೆಜಿಎಫ್ 2 ಕಥೆಯೇನು?

    ಬಾಲಿವುಡ್‌ನಲ್ಲಿ ಕೆಜಿಎಫ್ 2 ಕಥೆಯೇನು?

    ಬಾಲಿವುಡ್‌ನಲ್ಲೂ ಪ್ರಿ- ರಿಲೀಸ್ ಬ್ಯುಸಿನೆಸ್ 100 ಕೋಟಿ ದಾಟಿದೆ. ಅಂದರೆ ಅಲ್ಲಿ 130 ಕೋಟಿ ಬ್ಯುಸಿನೆಸ್ ಮಾಡಿದರೆ ಸೇಫ್ ಜೋನ್‌ಗೆ ಚಿತ್ರ ಹೋದಂತೆ. ಇನ್ನು 160 ಕೋಟಿ ದಾಟಿದರೆ ಚಿತ್ರ ಸೂಪರ್ ಹಿಟ್ ಆಗುತ್ತದೆ. ಸಾಗರೋತ್ತರ ವ್ಯವಹಾರದಲ್ಲೂ ಸುಮಾರು ಎಪ್ಪತ್ತರಿಂದ ತೊಂಬತ್ತು ಕೋಟಿ ರೂಪಾಯಿಗಳ ವ್ಯವಹಾರವಾಗಿದೆ ಅಂತ ಹೇಳಲಾಗುತ್ತಿದೆ. ಅಂದರೆ ಅಲ್ಲಿ ಕೂಡ ಬರೋಬ್ಬರಿ 170 ಕೋಟಿ ಗಳಿಕೆ ಮಾಡಿದರೆ ಮಾತ್ರ ಚಿತ್ರ ಸೂಪರ್ ಹಿಟ್ ಎನಿಸಿಕೊಳ್ಳುತ್ತದೆ.

    ಬ್ಲಾಕ್ ಬಸ್ಟರ್ ಲಿಸ್ಟ್ ಸೇರಲು ಎಷ್ಟು ಕಲೆಕ್ಷನ್ ಆಗ್ಬೇಕು?

    ಬ್ಲಾಕ್ ಬಸ್ಟರ್ ಲಿಸ್ಟ್ ಸೇರಲು ಎಷ್ಟು ಕಲೆಕ್ಷನ್ ಆಗ್ಬೇಕು?

    ಚಿತ್ರದ ಒಟ್ಟು ಪ್ರಿ- ರಿಲೀಸ್ ಬ್ಯುಸಿನೆಸ್ 500 ಕೋಟಿ ದಾಟಿದೆ ಅಂತ ಹೇಳಲಾಗುತ್ತದೆ. ಟ್ರೇಡ್ ಮೂಲಗಳ ಪ್ರಕಾರ 'ಕೆಜಿಎಫ್- 2' ಚಿತ್ರ ಬಿಡುಗಡೆಗೂ ಮುನ್ನವೇ RRR ಚಿತ್ರದ 470 ಕೋಟಿಯ ಪ್ರಿ- ರಿಲೀಸ್ ಬ್ಯುಸಿನೆಸ್ ಅನ್ನು ಮುರಿದೆ. 500 ಕೋಟಿ ರೂ.ಗಳ ಪ್ರಿ-ರಿಲೀಸ್ ಬಿಸಿನೆಸ್ ಮಾಡಿ ದಾಖಲೆ ನಿರ್ಮಿಸಿದೆ. 'RRR' ಚಿತ್ರ ಸಾವಿರ ಕೋಟಿಯ ಗಳಿಕೆಯತ್ತ ಮುನ್ನುಗ್ಗಿದ್ದು, ಎಲ್ಲಾ ಭಾಷೆಯ ಡಿಸ್ಟ್ರಿಬ್ಯೂಟರ್ ಗಳು ಕೂಡ ಗಳಿಕೆಯಲ್ಲಿ ಲಾಭವನ್ನು ಕಾಣುತ್ತಿದ್ದಾರೆ. ಇನ್ನು 'ಕೆಜಿಎಫ್-2' ಚಿತ್ರ 500 ಕೋಟಿ ಬಿಸಿನೆಸ್ ನಡೆದಿರುವುದರಿಂದ ಚಿತ್ರ ಕನಿಷ್ಟ 650 ರಿಂದ 700 ಕೋಟಿ ಹಣ ಗಳಿಕೆ ಮಾಡಿದರೆ ಡಿಸ್ಟ್ರಿಬ್ಯೂಟರ್ ಗಳು ಸೇಫ್ ಜೋನ್‌ಗೆ ಪ್ರವೇಶ ಮಾಡುತ್ತಾರೆ. ಕನಿಷ್ಠ 800 ಕೋಟಿ ಹಣ ಗಳಿಕೆ ಮಾಡಿದರೆ ಡಿಸ್ಟ್ರಿಬ್ಯೂಟರ್‌ಗಳು ಲಾಭ ಗಳಿಸಲು ಸಾಧ್ಯವಾಗುತ್ತದೆ. ಈಗ ಎಲ್ಲರ ಮುಂದೆ ಇರುವ ಪ್ರಶ್ನೆ 'ಕೆಜಿಎಫ್ -2' ಬಿಡುಗಡೆಯ ನಂತರ ಎಷ್ಟು ಹಣ ಗಳಿಕೆ ಮಾಡಬಹುದು? ಎಂಬುದೇ ಕುತೂಹಲಕಾರಿ ಪ್ರಶ್ನೆಯಾಗಿದೆ.

    English summary
    Record Breaking 500 Cores Pre Release Bussines For KGF-2. But how much collection KGF 2 has to do at box office to declare superhit?
    Tuesday, April 5, 2022, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X