For Quick Alerts
  ALLOW NOTIFICATIONS  
  For Daily Alerts

  KGF Collection: 200 ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಕನ್ನಡ ಚಿತ್ರ.!

  |
  KGF Movie ; 200 ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಕನ್ನಡ ಚಿತ್ರ.! | FILMIBEAT KANNADA

  ''ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಅಂತ ಮೂಗು ಮುರಿಯುತ್ತಿದ್ದವರು, ಇಂದು 'ಕೆ.ಜಿ.ಎಫ್' ಚಿತ್ರದ ಕಲೆಕ್ಷನ್ ಲೆಕ್ಕಾಚಾರ ಕೇಳಿದ್ರೆ ಕಣ್ಣು-ಬಾಯಿ ಬಿಡುವುದು ಗ್ಯಾರೆಂಟಿ.

  ಒಂದೊಳ್ಳೆ ಸಿನಿಮಾ ಮಾಡಿದ್ರೆ, ಪ್ರೇಕ್ಷಕ ಮಹಾಪ್ರಭು ಖಂಡಿತ ಕೈಬಿಡಲ್ಲ ಅನ್ನೋದಕ್ಕೆ 'ಕೆ.ಜಿ.ಎಫ್' ಚಿತ್ರವೇ ಅತ್ಯುತ್ತಮ ಉದಾಹರಣೆ. ಮೇಕಿಂಗ್ ನಲ್ಲಿ ಗಮನ ಸೆಳೆದಿರುವ 'ಕೆ.ಜಿ.ಎಫ್' ಇಡೀ ಭಾರತದಾದ್ಯಂತ ಸಂಚಲನ ಸೃಷ್ಟಿಸಿತು.

  ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ.. ಹೀಗೆ ಐದು ಭಾಷೆಗಳಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರ ಇದೀಗ ಹಿಸ್ಟ್ರಿ ಕ್ರಿಯೇಟ್ ಮಾಡಿದೆ. ಬರೋಬ್ಬರಿ 200 ಕೋಟಿ ಕ್ಲಬ್ ಸೇರುವ ಮೂಲಕ 'ಕೆ.ಜಿ.ಎಫ್' ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಮೈಲಿಗಲ್ಲು ನಿರ್ಮಿಸಿದೆ. ಮುಂದೆ ಓದಿರಿ...

  ಪ್ರಪ್ರಥಮ ಕನ್ನಡ ಚಿತ್ರ

  ಪ್ರಪ್ರಥಮ ಕನ್ನಡ ಚಿತ್ರ

  100, 200 ಕೋಟಿ ಕ್ಲಬ್ ಗಳೆಲ್ಲವೂ ಬಾಲಿವುಡ್ ನಲ್ಲಿ ಕಾಮನ್. ಆದ್ರೆ, ಸ್ಯಾಂಡಲ್ ವುಡ್ ನಲ್ಲಿ ಹಾಗಿಲ್ಲ. ಇಲ್ಲಿ ಹಾಕಿದ ಬಂಡವಾಳ ವಾಪಸ್ ಬಂದ್ರೆ, ಯಶಸ್ಸು ಸಿಕ್ಕ ಹಾಗೆ. ಹೀಗಿರುವಾಗ, 'ಕೆ.ಜಿ.ಎಫ್' ಚಿತ್ರ 200 ಕೋಟಿ ಕ್ಲಬ್ ಸೇರಿದೆ ಅಂದ್ರೆ ಸುಮ್ನೆನಾ.? ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 200 ಕೋಟಿ ಬಾಚಿರುವ ಪ್ರಪ್ರಥಮ ಚಿತ್ರ 'ಕೆ.ಜಿ.ಎಫ್'.

  ಡಿಜಿಟಲ್ ಮತ್ತು ಸ್ಯಾಟೆಲೈಟ್ ಹಕ್ಕು ಮಾರಾಟದಲ್ಲಿ 'ಕೆ.ಜಿ.ಎಫ್' ಹೊಸ ಮೈಲಿಗಲ್ಲು.!

  18 ದಿನಗಳಲ್ಲಿ 200 ಕೋಟಿ

  18 ದಿನಗಳಲ್ಲಿ 200 ಕೋಟಿ

  ಸ್ಯಾಂಡಲ್ ವುಡ್ ಪಾಲಿಗೆ 'ಕೆ.ಜಿ.ಎಫ್' ಅಕ್ಷರಶಃ ಚಿನ್ನದ ಗಣಿಯೇ.! ಬಿಡುಗಡೆ ಆದ 18 ದಿನಗಳಲ್ಲಿ 200 ಕೋಟಿ ಕಲೆಕ್ಷನ್ ಮಾಡುವ ಮೂಲಕ 'ಕೆ.ಜಿ.ಎಫ್' ಹೊಸ ದಾಖಲೆ ಬರೆದಿದೆ.

  ನೂರು ಕೋಟಿ ಕ್ಲಬ್ ಗೆ 'ಕೆಜಿಎಫ್': ಎಲ್ಲಿಂದ ಎಷ್ಟು ಹಣ ಬಂತು.?

  ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು.?

  ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು.?

  ವರದಿಗಳ ಪ್ರಕಾರ, ಕರ್ನಾಟಕ ಒಂದರಲ್ಲೇ 'ಕೆ.ಜಿ.ಎಫ್' 120 ಕೋಟಿ ಕಲೆಕ್ಷನ್ ಮಾಡಿದೆ. ಇದು ಮತ್ತೊಂದು ರೆಕಾರ್ಡ್ ಅನ್ನೋದು ನಿಮ್ಮ ಗಮನದಲ್ಲಿ ಇರಲಿ. ಯಾಕಂದ್ರೆ, ಇಲ್ಲಿಯವರೆಗೂ ಕರ್ನಾಟಕದಲ್ಲಿ ಈ ಪಾಟಿ ಕಲೆಕ್ಷನ್ ಮಾಡಿರುವುದು 'ಕೆ.ಜಿ.ಎಫ್' ಮಾತ್ರ.

  'ಕೆಜಿಎಫ್'ಗೆ ಸಲಾಂ : 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ

  ಹಿಂದಿಯಲ್ಲಿ ಕಲೆಕ್ಷನ್ ಎಷ್ಟು.?

  ಹಿಂದಿಯಲ್ಲಿ ಕಲೆಕ್ಷನ್ ಎಷ್ಟು.?

  'ಝೀರೋ', 'ಸಿಂಬಾ' ದಂತಹ ಚಿತ್ರಗಳ ನಡುವೆ 'ಕೆ.ಜಿ.ಎಫ್' ಹಿಂದಿ ವರ್ಷನ್ 40 ಕೋಟಿ ಬಾಚಿಕೊಂಡಿದೆ. ಇನ್ನೂ ತೆಲುಗು ಮತ್ತು ತಮಿಳಿನಲ್ಲಿ 20 ಕೋಟಿ ಗಳಿಸಿರುವ 'ಕೆ.ಜಿ.ಎಫ್' ನಾಗಾಲೋಟ ಎಲ್ಲೆಡೆ ಮುಂದುವರೆದಿದೆ. 'ಕೆ.ಜಿ.ಎಫ್' ಕಲೆಕ್ಷನ್ ಹೀಗೇ ಮುಂದುವರೆದರೆ, ಮತ್ತೊಂದು ರೆಕಾರ್ಡ್ ಬ್ರೇಕ್ ಆಗುವುದರಲ್ಲಿ ಡೌಟ್ ಬೇಡ.

  English summary
  Rocking Star Yash starrer KGF creates history, becomes first Kannada Film to cross Rs 200 crore mark.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X