'ಕ್ರಿಸ್ ಮಸ್' ಹಬ್ಬಕ್ಕೆ 'ಕೆಜಿಎಫ್' ದಾಖಲೆ: ಹಿಂದಿ ಬಾಕ್ಸ್ ಆಫೀಸ್ ಉಡೀಸ್.!
ಕೆಜಿಎಫ್ ಒಟ್ಟು ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಗುತ್ತಿಲ್ಲ. ಸದ್ಯ, ನಿರ್ಮಾಪಕರು ಹೇಳಿರುವ ಪ್ರಕಾರ, ಮೊದಲ ಮೂರು ದಿನಕ್ಕೆ 50 ಕೋಟಿ ಗಳಿಕೆ ಕಂಡಿತ್ತು. ಆದ್ರೀಗ, ಕೆಜಿಎಫ್ ತೆರೆಕಂಡು ಐದು ದಿನ ಆಗಿದೆ. ಐದು ದಿನದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ.
ಬಟ್, ನಿರ್ಮಾಪಕರಿಂದ ಈ ಘೋಷಣೆ ಬರಲಿ ಎಂದು ಚಿತ್ರವಲಯ ಕಾಯುತ್ತಿದೆ. ಅದನ್ನ ಬಿಟ್ಟರೇ ಹಿಂದಿಯಲ್ಲಿ ಕೆಜಿಎಫ್ ಸಿನಿಮಾದ ನಾಗಲೋಟ ಮುಂದುವರಿದಿದೆ. ಮೊದಲ ನಾಲ್ಕು ದಿನಕ್ಕೆ ಹೋಲಿಸಿಕೊಂಡರೇ ಕ್ರಿಸ್ ಮಸ್ ಹಬ್ಬದಂದು ಅತಿ ಹೆಚ್ಚು ಗಳಿಕೆ ಕಂಡಿದೆ.
ಮೊದಲ ನಾಲ್ಕು ದಿನಕ್ಕೆ 12 ಕೋಟಿ ಗಳಿಸಿದ್ದ ಕೆಜಿಎಫ್ ಈಗ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತಾ ಹೆಜ್ಜೆ ಹಾಕಿದೆ. ಹಾಗಿದ್ರೆ, ಕೆಜಿಎಫ್ ಹಿಂದಿ ಭಾಷೆಯ ಐದನೇ ದಿನ ಗಳಿಕೆ ಎಷ್ಟು? ಮುಂದೆ ಓದಿ....

ಕ್ರಿಸ್ ಮಸ್ ಗೆ ಕೆಜಿಎಫ್ ಗಳಿಸಿದ್ದೆಷ್ಟು?
ಮೊದಲ ನಾಲ್ಕು ದಿನದಲ್ಲಿ ಕೆಜಿಎಫ್ ಹಿಂದಿ ಸಿನಿಮಾ 12 ಕೋಟಿ ಗಳಿಸಿತ್ತು. ಐದನೇ ದಿನ ಕೆಜಿಎಫ್ ಸಿನಿಮಾ 4.35 ಕೋಟಿ ಕಲೆಕ್ಷನ್ ಮಾಡಿದೆ ಎಂದು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಹಿಂದಿಯಲ್ಲಿ ಒಟ್ಟು ಗಳಿಕೆ ಎಷ್ಟು?
ಅಂದ್ಹಾಗೆ, ಮೊದಲ ದಿನ ಕೆಜಿಎಫ್ ಹಿಂದಿ ವರ್ಷನ್ 2.10 ಕೋಟಿ, ಎರಡನೇ ದಿನ 3 ಕೋಟಿ, ಮೂರನೇ ದಿನ 4.10 ಕಲೆಕ್ಷನ್ ಮಾಡಿತ್ತು. ನಾಲ್ಕನೇ ದಿನ ಸೋಮವಾರ 2.90 ಕೋಟಿ ಬಾಚಿಕೊಂಡಿತ್ತು. ಇದೀಗ ಐದನೇ ದಿನ 4.35 ಕೋಟಿ ಸೇರಿ ಒಟ್ಟು ಐದು ದಿನಕ್ಕೆ 16.45 ಕೋಟಿ ಖಾತೆಗೆ ಹಾಕಿಕೊಂಡಿದೆ.

ಆರನೇ ಸ್ಥಾನದಲ್ಲಿ ಕೆಜಿಎಫ್
ಹಿಂದಿಯಲ್ಲಿ ಡಬ್ ಆಗಿರುವ ಬೇರೆ ಭಾಷೆಯ ಚಿತ್ರಗಳ ಕಲೆಕ್ಷನ್ ಪಟ್ಟಿಯಲ್ಲಿ ಕೆಜಿಎಫ್ ಸಿನಿಮಾ ಆರನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 (511ಕೋಟಿ), ಎರಡನೇ ಸ್ಥಾನದಲ್ಲಿ 2.0 (188 ಕೋಟಿ ನಾಟ್ ಔಟ್), ಮೂರನೇ ಸ್ಥಾನದಲ್ಲಿ ಬಾಹುಬಲಿ 1 (112 ಕೋಟಿ) ಗಳಿಸಿ ಟಾಪ್ ಮೂರರಲ್ಲಿದೆ. 16.45 ಕೋಟಿ ಗಳಿಸಿರುವ ಕೆಜಿಎಫ್ ಆರನೇ ಸ್ಥಾನದಲ್ಲಿದೆ. ರಜನಿಕಾಂತ್ ಅಭಿನಯದ ಕಬಾಲಿ (24 ಕೋಟಿ) ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ರಜನಿಯ ಇನ್ನೊಂದು ಸಿನಿಮಾ ಎಂಥಿರನ್ (22 ಕೋಟಿ) ಗಳಿಸಿ ಐದನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಸ್ಕ್ರೀನ್ ನಲ್ಲಿ ಸಿನಿಮಾ ಬಂದಿತ್ತು
ಕೆಜಿಎಫ್ ಹಿಂದಿ ವರ್ಷನ್ ಸಿನಿಮಾ 1500 ಸ್ಕ್ರೀನ್ ನಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಸಿನಿಮಾವೊಂದು ಬಾಲಿವುಡ್ ನಲ್ಲಿ ಇಷ್ಟು ದೊಡ್ಡ ಮಟ್ಟದ ರಿಲೀಸ್ ಕಂಡಿದ್ದು ಇದೇ ಮೊದಲು. ಅದರಲ್ಲೂ ಶಾರೂಖ್ ಸಿನಿಮಾ ಎದುರು ಕೆಜಿಎಫ್ ದಿಟ್ಟೆದೆಯಿಂದ ನಿಂತಿರುವುದು ನಿಜಕ್ಕೂ ಅಚ್ಚರಿ ಮತ್ತು ಒಳ್ಳೆಯ ಬೆಳವಣಿಗೆ.


Click it and Unblock the Notifications











