For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ತಂಡದ ಪಾರ್ಟಿ : 'ದುನಿಯಾ' ಗೆದ್ದ ಯಶ್

  |
  ಏನ್ ಬೇಕೊ ನಿಂಗೆ..? ದುನಿಯಾ..! | FILMIBEAT KANNADA

  'ಕೆಜಿಎಫ್' ಸಿನಿಮಾ ಗೆದ್ದಿದೆ. ಇಷ್ಟು ವರ್ಷದ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕನ್ನಡ ಈ ಹೆಮ್ಮೆಯ ಸಿನಿಮಾದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಈ ಸಿನಿಮಾ ಮೂರನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

  ಒಬ್ಬ ನಟ, ನಿರ್ದೇಶಕ ಅಥವಾ ಯಾವುದೇ ಕಲಾವಿದನಿಗೆ ತನ್ನ ಕೆಲಸವನ್ನ ಮೆಚ್ಚಿಕೊಂಡರೆ ಸಾಕು. ಅದಕ್ಕಿಂತ ದೊಡ್ಡದು ಪ್ರಶಸ್ತಿ ಮತ್ತೊಂದಿಲ್ಲ. ಈಗ ಆ ಖುಷಿಯಲ್ಲಿ ಇಡೀ ಚಿತ್ರತಂಡ ಇದೆ. ಸಿನಿಮಾ ಗೆದ್ದ ಸಂತಸದಲ್ಲಿ ಪಾರ್ಟಿ ಮಾಡಿದೆ.

  'ಕೆಜಿಎಫ್'ನ ಕಣ್ಣು ಭುವನ್ ಗೌಡಗೆ ಹುಟ್ಟುಹಬ್ಬದ ಶುಭಾಶಯಗಳು

  ಎರಡು ವರ್ಷಗಳ ನಿರಂತರ ಕೆಲಸ, ಸಿನಿಮಾದ ಬಿಡುಗಡೆಯ ತಯಾರಿ, ಪ್ರಚಾರ ಹೀಗೆ ಎಲ್ಲ ಕೆಲಸಗಳ ನಂತರ ಈಗ ಚಿತ್ರತಂಡ ಬಿಡುವಾಗಿದೆ. ಸಿನಿಮಾ ಯಶಸ್ಸು ಕಂಡಿದ್ದು, ಆ ಗೆಲುವಿನ ಕಾರಣವಾದ ಎಲ್ಲರೂ ಒಂದೆಡೆ ಸೇರಿ ಖುಷಿಯ ಕ್ಷಣಗಳನ್ನ ಕಳೆದಿದೆ. ಮುಂದಿದೆ ಓದಿ...

  ಗೆಲುವಿನ ಸಿಹಿ ಮುತ್ತು

  ಗೆಲುವಿನ ಸಿಹಿ ಮುತ್ತು

  'ಕೆಜಿಎಫ್' ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿ ಇಡೀ ಚಿತ್ರತಂಡ ಒಟ್ಟಿಗೆ ಸೇರಿದೆ. ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಂಗಂದೂರ್ ಸೇರಿದಂತೆ ಅನೇಕರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಯಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಪಾರ್ಟಿ ಫೋಟೋವನ್ನ ಹಂಚಿಕೊಂಡರು.

  ಇದು ನನ್ನ ದುನಿಯಾ

  ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಯಶ್ ಸಿನಿಮಾದ ಡೈಲಾಗ್ ಅನ್ನು ಬರೆದುಕೊಂಡಿದ್ದಾರೆ. 'ಕ್ಯಾ ಚಾಯಿಯೇ ತುಂಕೋ...ದುನಿಯಾ'. 'ಇದು ನನ್ನ ದುನಿಯಾ' ಎಂದು ಯಶ್ ಹೇಳಿದ್ದಾರೆ. ಯಶ್ ಗೆ ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಂಗಂದೂರ್ ಗೆಲುವಿನ ಮುತ್ತು ನೀಡಿದ್ದಾರೆ.

  ಪ್ರಶಾಂತ್ ನೀಲ್ ಬಗ್ಗೆ ಹೀಗಂತಾರೆ ಶ್ರೀಮುರಳಿ ಪತ್ನಿ

  ಸಕ್ಸಸ್ ಪಾರ್ಟಿ

  ಸಕ್ಸಸ್ ಪಾರ್ಟಿ

  'ಕೆಜಿಎಫ್' ಸಿನಿಮಾದ ಇಡೀ ತಂಡ ಈ ಪಾರ್ಟಿಯಲ್ಲಿ ಭಾಗಿಯಾಗಿತ್ತು. ಸಿನಿಮಾಟೋಗ್ರಾಫರ್ ಭುವನ್ ಗೌಡ, ಖಳ ನಟ ಅಯ್ಯಪ್ಪ, ಯಶ್ ಸ್ನೇಹಿತ ಹಾಗೂ 'ಲಕ್ಕಿ' ಚಿತ್ರದ ನಿರ್ದೇಶಕ ಸೂರಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಕೆಲ ಕ್ಷಣ ಎಲ್ಲ ಒಟ್ಟಿಗೆ ಸೇರಿ ಯಶಸ್ಸನ್ನು ಆಚರಣೆ ಮಾಡಿದರು.

  'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ

  ಮೊದಲ ದಿನ 24 ಕೋಟಿ

  ಮೊದಲ ದಿನ 24 ಕೋಟಿ

  'ಕೆಜಿಎಫ್' ಸಿನಿಮಾ ಮೊದಲ ದಿನ ಬರೋಬ್ಬರಿ 24 ಕೋಟಿ ಗಳಿಕೆ ಮಾಡಿದೆ. ಕನ್ನಡದಲ್ಲಿ 12.5 ಕೋಟಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಭಾರತದಾದ್ಯಂತ 2000 ಸಾವಿರ ಸ್ಕ್ರೀನ್ ಗಳಲ್ಲಿ ಚಿತ್ರ ರಿಲೀಸ್ ಆಗಿದ್ದು, ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ದೊಡ್ಡ ದಾಖಲೆ ಮಾಡಲು ಮುನ್ನುಗುತ್ತಿದೆ.

  English summary
  Actor Yash's 'KGF' kannada movie success party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X