For Quick Alerts
  ALLOW NOTIFICATIONS  
  For Daily Alerts

  ಓದುಗರ ವಿಮರ್ಶೆ: ಕೆಜಿಎಫ್ ಅಷ್ಟು ಇಷ್ಟವಾಗದಿರುವುದಕ್ಕೆ ಕಾರಣ ಇಲ್ಲಿದೆ

  By ವಿಶ್ವನಾಥ್ ಬಿಎಂ
  |

  ಎಲ್ಲ ಚಿತ್ರಗಳನ್ನ ಎಲ್ಲರೂ ಮೆಚ್ಚಿಕೊಳ್ಳಬೇಕು ಎಂದಿಲ್ಲ. ಕೆಲವರಿಗೆ ಇಷ್ಟ ಆಗುವ ಸಿನಿಮಾ ಮತ್ತೆ ಕೆಲವರಿಗೆ ಇಷ್ಟವಾಗಲ್ಲ. ಅನೇಕರಿಗೆ ಇಷ್ಟವಾಗದ ಚಿತ್ರ ಕೆಲವರಿಗೆ ಇಷ್ಟವಾಗುತ್ತೆ. ಏನೂ ಮಾಡೋಕೆ ಆಗಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ.

  ಈಗ ಕೆಜಿಎಫ್ ಚಿತ್ರವನ್ನ ಬಹುತೇಕರು ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಹಲವು ವಿಷ್ಯಗಳನ್ನ ಇಷ್ಟಪಟ್ಟಿದ್ದಾರೆ. ಇದರಲ್ಲಿ ಕೆಲವರಿಗೆ ನಿರಾಸೆಯಾಗಿರಬಹುದು. ಚಿತ್ರದಲ್ಲಿನ ಕೆಲವು ಅಂಶಗಳು ಇಷ್ಟವಾಗದೇ ಇರಬಹುದು. ಅಂತವರ ಪೈಕಿ, ವಿಶ್ವನಾಥ್ ಬಿಎಂ ಎಂಬುವರು ಒಬ್ಬರು.

  ಕಲಾವಿದೆಯ ಕೈಯಲ್ಲಿ ಅರಳಿದ 'ರಾಕಿ ಭಾಯ್' ಯಶ್

  ಕೆಜಿಎಫ್ ಚಿತ್ರ ನಿರೀಕ್ಷೆಯ ಮಟ್ಟ ತಲುಪಲಿಲ್ಲ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ವಿಶ್ವನಾಥ್ ಅವರು, ಕೆಜಿಎಫ್ ಸಿನಿಮಾ ನನಗೆ ಅಷ್ಟು ಇಷ್ಟವಾಗಿಲ್ಲ ಎಂದಿದ್ದಾರೆ. ಹಾಗಿದ್ರೆ, ಅವರ ಪ್ರಕಾರ ಕೆಜಿಎಫ್ ಹೇಗಿದೆ? (ವಿಶ್ವನಾಥ್ ಅವರ ಅಭಿಪ್ರಾಯ)

  ನಿರಾಸೆಯಾಗಲು ಕಾರಣ ಇದೆ

  ನಿರಾಸೆಯಾಗಲು ಕಾರಣ ಇದೆ

  ನಾನು ತೀವ್ರ ಕುತೂಹಲ ಇಟ್ಕೊಂಡು ಹೋಗಿದ್ದ ಸಿನಿಮಾ ಅಂದ್ರೆ ಅದು ಕೆಜಿಎಫ್. ಯೂಟ್ಯೂಬ್, ಫೇಸ್ಬುಕ್, ವಾಟ್ಸಾಪ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಟ್ರೈಲರ್ ಧೂಳೇಬ್ಬಿಸಿದ್ದೇನೋ ನಿಜ. ಆದ್ರೆ ತೆರೆ ಮೇಲೆ ನೋಡಿದ ಅಸಲಿ ಚಿತ್ರ ನಿಜಕ್ಕೂ ನಿರಾಸೆ ಮೂಡಿಸಿತು. ಅಷ್ಟಕ್ಕೂ ನಿರಾಸೆಗೆ ಕಾರಣವಾದ್ರೂ ಏನು ಅಂತ ನೀವು ಯೋಚನೆ ಮಾಡ್ತಾ ಇರಬಹುದು. ಹೌದು, ಕಾರಣಗಳು ಇವೆ.

  ಕೆಜಿಎಫ್ ಹಿಂದಿ ಕಲೆಕ್ಷನ್ ಬಹಿರಂಗ: ಗಳಿಕೆಯ ಅಂಕಿ ಅಂಶ ಅಚ್ಚರಿಯಾಗಿದೆ.!

  ಕಥೆಯ ನಿರೂಪಣೆಯ ಶೈಲಿ ಚೆನ್ನಾಗಿದೆ

  ಕಥೆಯ ನಿರೂಪಣೆಯ ಶೈಲಿ ಚೆನ್ನಾಗಿದೆ

  ಕಥೆಯ ನಿರೂಪಣೆಯ ಶೈಲಿ ಚೆನ್ನಾಗಿದೆ ಅನಿಸಿದ್ದು ಸತ್ಯ. ಹಾಗೆಯೇ ಚಿತ್ರ ನೋಡುವಾಗ ಬೋರ್ ಹೊಡೆಸಿದ್ದೂ ನಿಜ. ನೀವೊಮ್ಮೆ ಈ ಸಿನಿಮಾ ನೋಡಿ ಮನೆಗೆ ಬಂದು ಯಾವ ಹಾಡು ನೆನಪಿನಲ್ಲಿ ಉಳಿದಿವೆ ಅಂತ ಒಮ್ಮೆ ಪರೀಕ್ಷೆ ಮಾಡಿಕೊಂಡರೆ ನಿಮ್ಮ ನೆನಪಿನಲ್ಲಿ ಕನಿಷ್ಠ ಒಂದು ಹಾಡಿನ ಐದಾರು ಸಾಲುಗಳು ನೆನಪಿನಲ್ಲಿ ಇದ್ರೆ ನೀವು ಗ್ರೇಟ್!

  ಕೆಜಿಎಫ್ ರೆಸ್ಪಾನ್ಸ್ ನೋಡಿ ಚಿತ್ರಮಂದಿರ ಹೆಚ್ಚಿಸಿದ ತಮಿಳುನಾಡು.!

  ಕ್ರೌರ್ಯವಿಲ್ಲದೇ ಸಿನಿಮಾ ಮಾಡಲ್ಲ ಯಾಕೆ?

  ಕ್ರೌರ್ಯವಿಲ್ಲದೇ ಸಿನಿಮಾ ಮಾಡಲ್ಲ ಯಾಕೆ?

  ಕ್ರೌರ್ಯ ಚಿತ್ರದ ಪ್ರಧಾನ ವಸ್ತು. ಹೌದು, ಇವತ್ತಿಗೂ ರಕ್ತಪಾತ ಮತ್ತು ಕ್ರೌರ್ಯವಿಲ್ಲದ ಒಂದು ಒಳ್ಳೆಯ ಚಿತ್ರ ಮಾಡಲಿಕ್ಕೆ ನಮ್ಮ ಸಿನಿಮಾ ನಿರ್ದೇಶಕರಿಗೆ ಯಾಕೆ ಬರುವುದಿಲ್ಲ ಅನ್ನೋದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಈ ಚಿತ್ರದಲ್ಲೂ ದೊಡ್ಡ ರೌಡಿಯನ್ನ ಸೆದೆ ಬಡಿಯುವುದೇ ನಾಯಕನ ಪ್ರಥಮ ಆದ್ಯತೆ ಆಗಿರುತ್ತದೆ.

  'ಕೆ.ಜಿ.ಎಫ್' ಚಿತ್ರ ನೋಡಿದ ವಿಮರ್ಶಕರು ಮಾಡಿರುವ ಕಾಮೆಂಟ್ಸ್ ಏನು.?

  ಹೀರೋಯಿಸಂ ಹೆಚ್ಚು ಇದೆ

  ಹೀರೋಯಿಸಂ ಹೆಚ್ಚು ಇದೆ

  ನಾಯಕ ನಟನ ಬಗ್ಗೆ ಅತೀಯಾಗಿ ಹೊಗಳುವ ಡೈಲಾಗ್ ಗಳು ನಮ್ಮ ಸಿನಿಮಾ ಪ್ರಪಂಚದಲ್ಲಿ ಸಹಜ, ಈ ಟ್ರೆಂಡ್ ಮತ್ತಷ್ಟು ಹೆಚ್ಚುತ್ತ ಹೋಗುತ್ತಿದೆ. ಈ ಚಿತ್ರದಲ್ಲಿಯೂ ಇಂತಹ ಡೈಲಾಗ್ ಗಳಿಗೆ ಕೊರತೆ ಇಲ್ಲ. ಇದು ಸಿನಿಮಾದ ಫ್ಲೋ ಮೇಲೆ ಪರಿಣಾಮ ಬೀರಿದೆ.. ಚಿತ್ರದೊಳಿಗಿನ ಒಂದು ಸಣ್ಣ ಪ್ರೇಮಕಥೆಯನೂ ಸರಿಯಾಗಿ ಹೆಣೆಯೋಕೆ ಆಗಿಲ್ಲ ಅನ್ನೋದು ಮತ್ತೊಂದು ಮೈನಸ್ ಪಾಯಿಂಟ್. ನೀವು ಮಗದೀರ, ಬಾಹುಬಲಿ ನೋಡಿ ಅಲ್ಲಿ ಪ್ರೇಮವನ್ನ ತೋರಿಸುವ ರೀತಿ ನೋಡಿ. ಅದು ನಿಮ್ಮ ಹೃದಯದಲ್ಲಿ ಸದಾ ನೆಲೆಸುತ್ತದೆ ಅಲ್ವ?

  ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.!

  ಅತಿಯಾದ ನಿರೀಕ್ಷೆಗೆ ಕಾರಣವೇನು?

  ಅತಿಯಾದ ನಿರೀಕ್ಷೆಗೆ ಕಾರಣವೇನು?

  ಇನ್ನೂ ಹೇಳುತ್ತ ಹೋದರೆ ಅನೇಕ ಕಾರಣಗಳಿವೆ. ಆದ್ರೆ ಅದೆಲ್ಲವೂ ಬೇಡ. ವೈಯಕ್ತಿಕವಾಗಿ ನನಗೆ ಸಿನಿಮಾ ಇಷ್ಟವಾಗಲಿಲ್ಲ. ಹೀಗಂದ ಮಾತ್ರಕ್ಕೆ ನಾನು ಯಶ್ ವಿರೋಧಿ, ಕನ್ನಡ ವಿರೋಧಿ ಅನ್ನೋ ಬಾಲಿಶ ನಿರ್ಧಾರಕ್ಕೆ ಬರಬೇಡಿ. ಇನ್ನೂ ಸಿನಿಮಾ ಸರಿಯಾಗಿ ಇಲ್ಲದೇ ಇದ್ರೆ ಯಾಕೆ ಇಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಇದೆ ಅನ್ನೋ ಪ್ರಶ್ನೆಗೆ ಉತ್ತರ ಬಹುಶಃ ಇದು ಇರಬಹುದು. ಅದೇನೆಂದರೆ; ಸಾಮಾಜಿಕ ಜಾಲತಾಣಗಳು ಮತ್ತು ಮೀಡಿಯಾಗಳು (ಟಿವಿ, ಪೇಪರ್, ವೆಬ್ಸೈಟ್ ಇತ್ಯಾದಿ) ಈ ಚಿತ್ರಕ್ಕೆ 'ಹವಾ' ತುಂಬಿರೋದನ್ನ ಅಲ್ಲಗಳೆಯೋ ಹಾಗಿಲ್ಲ.

  ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!

  'ವಿಮರ್ಶೆ' ಬರಿ ಹೊಗಳಿಕೆಯಾಗಿದೆ

  'ವಿಮರ್ಶೆ' ಬರಿ ಹೊಗಳಿಕೆಯಾಗಿದೆ

  ಅನೇಕ ಮಾಧ್ಯಮಗಳಲ್ಲಿ 'ವಿಮರ್ಶೆ' ಅನ್ನೋ ಹೆಸರಿನಲ್ಲಿ ಈ ಚಿತ್ರದ ಬಗ್ಗೆ ಬರೀ 'ಹೊಗಳಿಕೆ' ನಡೆದಿದೆ. ಇದು ಸಿನಿಮಾಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗೋದು ಗ್ಯಾರಂಟಿ. ಇರಲಿ, ಆದ್ರೆ ಇದರ ಆಯಸ್ಸು ಕಡಿಮೆ. ಪ್ರೇಕ್ಷಕರ ಸ್ಮೃತಿಪಟಲದಿಂದ ಈ ಚಿತ್ರ ಬೇಗನೇ ತೆರೆಮರೆಗೆ ಸರಿಯುತ್ತದೆ. ಒಂದು ವೇಳೆ, ಸಿನಿಮಾ ನಿಮಗೆ ಇಷ್ಟವಾಗಿದ್ರೆ, ಹೇಗೆ ಮತ್ತು ಯಾಕೆ ಇಷ್ಟವಾಗಿದೆ ಅಂತ ತಿಳಿಸಿ...

  English summary
  Kannada actor Yash starrer Kgf movie has released all over world yesterday (december 21). the movie get some mixed response from audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X