ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಸದ್ಯ, ಟ್ರೈಲರ್ ಮೂಲಕ ಅಬ್ಬರಿಸುತ್ತಿರುವ ಯಶ್ ಸಿನಿಮಾ ಹಾಡುಗಳನ್ನ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ.

ಹಾಗ್ನೋಡಿದ್ರೆ, ಕೆಜಿಎಫ್ ಚಿತ್ರ ಪ್ರತಿಯೊಂದು ಹಂತದಲ್ಲೂ ಕೋಟಿ ಕೋಟಿ ಹಣ ಮಾಡಲಿದೆ ಎಂಬ ಲೆಕ್ಕಚಾರ ನಡಿತಿದೆ. ಹೀಗಿರುವಾಗ, ಕೆಜಿಎಫ್ ಆಡಿಯೋ ಹಕ್ಕು ಮಾರಾಟವಾಗಿದ್ದು, ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಅತಿ ದೊಡ್ಡ ಹೆಮ್ಮೆ ಮತ್ತು ದಾಖಲೆ.

ಐದು ಭಾಷೆಯಲ್ಲಿ ಮೂಡಿ ಬರುತ್ತಿರುವ ಕೆಜಿಎಫ್ ಸಿನಿಮಾದ ನಾಲ್ಕು ಭಾಷೆಯ ಆಡಿಯೋ ಹಕ್ಕು ಮಾರಾಟವಾಗಿದೆ. ಇದರ ಬೆನ್ನಲ್ಲೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೂ ದಿನಾಂಕ ನಿಗದಿಯಾಗಿದೆ. ಹಾಗಿದ್ರೆ, ಕೆಜಿಎಫ್ ಚಿತ್ರದ ಆಡಿಯೋದಿಂದ ಬಂದ ಹಣವೆಷ್ಟು.? ಕೆಜಿಎಫ್ ಆಡಿಯೋ ರಿಲೀಸ್ ಯಾವಾಗ.? ಮುಂದೆ ಓದಿ....

ಲಹರಿ ಮ್ಯೂಸಿಕ್ ಪಾಲಿಗೆ ಕೆಜಿಎಫ್

ಲಹರಿ ಮ್ಯೂಸಿಕ್ ಪಾಲಿಗೆ ಕೆಜಿಎಫ್

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆಗೆ ಬರಲಿ ಸಜ್ಜಾಗಿರುವ ಕೆಜಿಎಫ್ ಸಿನಿಮಾದ ಆಡಿಯೋ ಹಕ್ಕು ನಾಲ್ಕು ಭಾಷೆಯಲ್ಲಿ ಸೇಲ್ ಆಗಿದೆ. ಹಿಂದಿ ಹೊರತುಪಡಿಸಿ ಉಳಿದ ನಾಲ್ಕು ಭಾಷೆಯ ಆಡಿಯೋ ಹಕ್ಕು ಮಾರಾಟವಾಗಿದ್ದು, ಖ್ಯಾತ ಆಡಿಯೋ ಕಂಪನಿ ಲಹರಿ ಮ್ಯೂಸಿಕ್ ಕೊಂಡುಕೊಂಡಿದೆ.

ನಾಲ್ಕು ಭಾಷೆಗೆ ಎಷ್ಟು ಕೋಟಿ ಸಿಕ್ತು.?

ನಾಲ್ಕು ಭಾಷೆಗೆ ಎಷ್ಟು ಕೋಟಿ ಸಿಕ್ತು.?

ಹಿಂದಿ ಬಿಟ್ಟು ನಾಲ್ಕು ಭಾಷೆಯ ಕೆಜಿಎಫ್ ಆಡಿಯೋ ಹಕ್ಕು ಬರೋಬ್ಬರಿ 3.6 ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಈ ಮೂಲಕ ಯಶ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಹಿಂದಿ ಕಥೆ ಏನು.?

ಹಿಂದಿ ಕಥೆ ಏನು.?

ದಕ್ಷಿಣ ಭಾರತಕ್ಕೆ ಹೋಲಿಸಿಕೊಂಡರೇ, ಬಾಲಿವುಡ್ ನಲ್ಲಿ ಕೆಜಿಎಫ್ ಸಿನಿಮಾವನ್ನ ದೊಡ್ಡದಾಗಿ ಬರಮಾಡಿಕೊಳ್ಳಲು ತಯಾರಿ ನಡೆಯುತ್ತಿದೆ. ಹೀಗಾಗಿ, ಆಡಿಯೋ ಹಕ್ಕು ಮಾರಾಟ ವಿಷ್ಯವೂ ಇನ್ನು ಮಾತುಕತೆಯ ಹಂತದಲ್ಲಿದೆ. ಸೌತ್ ಭಾಷೆಗಳಿಗಿಂತ ಹಿಂದಿಯಲ್ಲಿ ಹೆಚ್ಚು ಬೇಡಿಕೆ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಹಾಗಾಗಿ, ಬಾಲಿವುಡ್ ನಿಂದ ದೊಡ್ಡ ಮೊತ್ತದ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಅದು ಕೂಡ ಬಹಿರಂಗವಾಗಲಿದೆ.

ಆಡಿಯೋ ರಿಲೀಸ್ ಯಾವಾಗ.?

ಆಡಿಯೋ ರಿಲೀಸ್ ಯಾವಾಗ.?

ಟ್ರೈಲರ್ ದೊಡ್ಡ ಹಿಟ್ ಆಗಿದೆ. ಸಿನಿಮಾ ರಿಲೀಸ್ ದಿನಾಂಕ ಕೂಡ ಘೋಷಣೆಯಾಗಿದೆ. ಈಗ ಕೆಜಿಎಫ್ ಹಾಡುಗಳಿಗಾಗಿ ಕಾಯ್ತಿದ್ದಾರೆ. ತಮನ್ನಾ ಬೇರೆ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ್ದಾರೆ. ಇದು ಸಹಜವಾಗಿ ಭಾರಿ ಕುತೂಹಲ ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ, ಕೆಜಿಎಫ್ ಚಿತ್ರದ ಹಾಡುಗಳು, ನವೆಂಬರ್ 29 ಅಥವಾ 30 ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ನೂರು ಕೋಟಿ ಕ್ಲಬ್ ಗೆ ಕೆಜಿಎಫ್.!

ನೂರು ಕೋಟಿ ಕ್ಲಬ್ ಗೆ ಕೆಜಿಎಫ್.!

ಐದು ಭಾಷೆಯಲ್ಲಿ, ಜಗತ್ತಿನಾದ್ಯಂತ ಅತಿ ಹೆಚ್ಚು ಸ್ಕ್ರೀನ್ ನಲ್ಲಿ ಕೆಜಿಎಫ್ ಸಿನಿಮಾ ಬರ್ತಿರುವುದರಿಂದ ಇದು ನೂರು ಕೋಟಿ ಕ್ಲಬ್ ಸೇರಲಿದೆ. ಈ ಮೂಲಕ ಕನ್ನಡದಲ್ಲಿ ನೂರು ಕೋಟಿ ಗಳಿಸಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ ಗಾಂಧಿನಗರ ಮಂದಿ.

More from Filmibeat

English summary
Kannada actor yash starrer KGF movie audio Kannada, Tamil, Telugu and Malayalam bought by Lahari Music for huge amount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X