»   » ಜೋಗಿ ಪ್ರೇಮ್ ಜೊತೆ ಕಿಚ್ಚ ಸುದೀಪ್ ಬಿಗ್ ಬಜೆಟ್ ಸಿನಿಮಾ

ಜೋಗಿ ಪ್ರೇಮ್ ಜೊತೆ ಕಿಚ್ಚ ಸುದೀಪ್ ಬಿಗ್ ಬಜೆಟ್ ಸಿನಿಮಾ

Posted By:
Subscribe to Filmibeat Kannada

ಹ್ಯಾಟ್ರಿಕ್ ನಿರ್ದೇಶಕ 'ಜೋಗಿ' ಪ್ರೇಮ್ ಅಂತಾನೇ ಗಾಂಧಿನಗರದಲ್ಲಿ ಫೇಮಸ್ ಆಗಿರುವ ನಿರ್ದೇಶಕ ಪ್ರೇಮ್ ಅವರು ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಇಂಡಸ್ಟ್ರಿಯಲ್ಲಿ ಒಳ್ಳೆ ಗೆಳೆಯರಾಗಿದ್ದು, ಈ ಮೊದಲು ಸುದೀಪ್ ಜೊತೆ ಚಿತ್ರ ಮಾಡಲು ತುಂಬಾ ಪ್ರಯತ್ನಪಟ್ಟಿದ್ದರಾದರೂ ಅದು ಕೈಗೂಡಿರಲಿಲ್ಲ.

Kiccha Sudeep and Director Prem team up for a new film

ಆದರೆ ಇದೀಗ ರಕ್ಷಿತಾ ಪ್ರೇಮ್ ಆಸೆ ನೆರವೇರುವ ಹಂತದಲ್ಲಿದೆ. ಅಂದ ಹಾಗೆ ಕನ್ನಡ ಚಿತ್ರಗಳ ಬಗ್ಗೆ ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಪ್ರೇಮ್ ವಿಭಿನ್ನ ಯೋಚನೆ ಹಾಗೂ ತಮ್ಮದೇ ಸ್ಟೈಲ್ ಹೊಂದಿದ್ದಾರೆ. ಆದುದರಿಂದ ಇವರಿಬ್ಬರ ಕಾಂಬಿನೇಶನ್ ನಲ್ಲಿ ಒಂದು ಚಿತ್ರ ಬಂದರೆ ಅದು ಖಂಡಿತ ಯಶಸ್ಸು ಸಾಧಿಸುತ್ತದೆ ಎನ್ನುವುದು ರಕ್ಷಿತಾ ಅಭಿಪ್ರಾಯ. [ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!]

ಇನ್ನೇನು ಸದ್ಯದಲ್ಲೇ ಇವರಿಬ್ಬರು ಸೇರಿ ಬರೋಬ್ಬರಿ 120 ಕೋಟಿ ಬಿಗ್ ಬಜೆಟ್ ನ ಒಂದು ಪ್ರಾಜೆಕ್ಟ್ ರೆಡಿ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಪ್ರೇಮ್ ಅವರ ಮೂಲಗಳಿಂದ ಕನ್ನಡ ಫಿಲ್ಮಿಬೀಟ್ ಗೆ ಮಾಹಿತಿ ದೊರೆತಿದೆ.

ಈಗಾಗಲೇ ಕೆ.ಎಸ್ ರವಿಕುಮಾರ್ ಜೊತೆಗೆ ದ್ವಿಭಾಷಾ ಚಿತ್ರದ ಶೂಟಿಂಗ್ ಜೊತೆಗೆ ಕಿರುತೆರೆಯ ಕೆಲವು ಪ್ರಾಜೆಕ್ಟ್ ನಲ್ಲಿ ಕಿಚ್ಚ ಸುದೀಪ್ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. [ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ]

ಅಲ್ಲದೇ ನಿರ್ದೇಶಕ ಪ್ರೇಮ್ ಕೂಡ ರಾಜ್ ಕುಡಿ, ವಿನಯ್ ರಾಜ್ ಕುಮಾರ್ ಅವರಿಗಾಗಿ 'ಆರ್ ದಿ ಕಿಂಗ್' ಚಿತ್ರ ಮಾಡುತ್ತಿದ್ದು, ಸದ್ಯಕ್ಕೆ ಶಿವಣ್ಣ ಅವರ ಮಗಳ ಮದುವೆಯ ನಂತರ ಚಿತ್ರೀಕರಣ ಮುಂದುವರಿಯಲಿದೆ.

ಮೂಲಗಳ ಪ್ರಕಾರ ನಿರ್ಮಾಪಕ ಸಿ ಮನೋಹರ್ ಅವರೊಂದಿಗೆ ಪ್ರೇಮ್ ಮೂರು ಭಾಷೆಗಳಲ್ಲಿ ಚಿತ್ರ ಮಾಡುತ್ತಿದ್ದು, ಅದರ ಕನ್ನಡ ಅವತರಣಿಕೆಯಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. [ಫ್ಯಾನ್ಸ್ ಒತ್ತಡಕ್ಕೆ ಮಣಿದು ಮತ್ತೆ ಬಣ್ಣ ಹಚ್ಚಿದ ಸುದೀಪ]

ಅದೇನೇ ಇರಲಿ ಅಂತೂ ಇಂತೂ ರಕ್ಷಿತಾ ಅವರ ಆಸೆ ಆದಷ್ಟು ಬೇಗನೇ ಕೈಗೂಡಲಿ ಜೊತೆಗೆ ಪ್ರೇಮ್ ಹಾಗೂ ಸುದೀಪ್ ಕಾಂಬಿನೇಷನ್ ನಲ್ಲಿ ಒಂದೊಳ್ಳೆ ಚಿತ್ರ ಮೂಡಿಬರಲಿ ಅಂತ ನಾವು ಶುಭ ಹಾರೈಸೋಣ ಏನಂತೀರಾ ನೀವು.

English summary
Kiccha Sudeep and Director Prem team up for a new film. Which would hit the floor on soon. According to reliable sources it will be a big budget movie. Sudeep is currently busy with couple of projects including KS Ravikumar's multilingual flick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada