Just In
Don't Miss!
- News
ಡಿನೋಟಿಫಿಕೇಷನ್ ಪ್ರಕರಣ: ಸುಪ್ರೀಂಕೋರ್ಟ್ಗೆ ಬಿಎಸ್ವೈ ಮೇಲ್ಮನವಿ, ಇಂದು ವಿಚಾರಣೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದೀಪ್ ಫಾಲೋ ಮಾಡುತ್ತಿರುವ 4 ಬಾಲಿವುಡ್ ಸ್ಟಾರ್ ಗಳು ಇವರೇ

ನಟ ಸುದೀಪ್ ಈಗ ಕನ್ನಡದ ನಟನಾಗಿ ಮಾತ್ರ ಸೀಮಿತವಾಗಿಲ್ಲ. ಸ್ಯಾಂಡಲ್ ವುಡ್ ಬಳಿಕ ಟಾಲಿವುಡ್ ಸೂಪರ್ ಹಿಟ್ ಸಿನಿಮಾದಲ್ಲಿ ಸುದೀಪ್ ನಟಿಸಿದ್ದರು. ರಾಮ್ ಗೋಪಾಲ್ ವರ್ಮ ಡೈರೆಕ್ಷನ್ ನಲ್ಲಿ ಬಾಲಿವುಡ್ ಸಿನಿಮಾ ಮಾಡಿದ್ದರು. ಇವುಗಳ ಜೊತೆಗೆ ಇದೀಗ ಸುದೀಪ್ ಅವರ ಹಾಲಿವುಡ್ ಸಿನಿಮಾ ಕೂಡ ಶುರುವಾಗಿದೆ.
ಸುದೀಪ್ ಜನಪ್ರಿಯತೆ ಹೆಚ್ಚಾಗುತ್ತಿರುವ ಹಾಗೆ ಅವರ ಟ್ಟಿಟ್ಟರ್ ಖಾತೆಯ ಫಾಲೋವರ್ಸ್ ಸಂಖ್ಯೆ ಕೂಡ ಅದೇ ವೇಗದಲ್ಲಿ ಹೆಚ್ಚಾಗುತ್ತಿದೆ. ಇತ್ತೀಚಿಗಷ್ಟೆ ಸುದೀಪ್ ಟ್ವಿಟ್ಟರ್ ನಲ್ಲಿ 2 ಮಿಲಿಯನ್ ಫಾಲೋವರ್ಸ್ ಅನ್ನು ಪಡೆದಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರನ್ನು ಅವರ ಅಭಿಮಾನಿಗಳು ಫಾಲೋ ಮಾಡುವುದು ಕಾಮನ್ ಆಗಿರುತ್ತದೆ. ಆದರೆ ಆ ದೊಡ್ಡ ನಟ ತನ್ನ ಖಾತೆಯಲ್ಲಿ ಯಾರ್ ಯಾರನ್ನು ಫಾಲೋ ಮಾಡುತ್ತಾರೆ ಎನ್ನುವುದು ಕೊಂಚ ಕುತೂಹಲದಿಂದ ಕೂಡಿರುತ್ತದೆ. ಹಾಗೆಯೇ ಸುದೀಪ್ ಟ್ವಿಟ್ಟರ್ ಖಾತೆಯ ಒಳಗೆ ನೋಡಿದರೆ ಅವರು ಬಾಲಿವುಡ್ ಚಿತ್ರರಂಗ ನಾಲ್ಕು ಸ್ಟಾರ್ ರನ್ನು ಫಾಲೋ ಮಾಡುತ್ತಿದ್ದಾರೆ. ಮುಂದೆ ಓದಿ...

ಬಾಲಿವುಡ್ 4 ಸ್ಟಾರ್ ಗಳು
ಎರಡು ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ನಟ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದ್ಯ ಕೇವಲ 52 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಈ ಪೈಕಿ ಬಾಲಿವುಡ್ ಚಿತ್ರರಂಗದ ನಾಲ್ಕು ಜನ ಹೀರೋಗಳು ಸಹ ಇದ್ದಾರೆ. ಹಿಂದಿ ಚಿತ್ರರಂಗದ ನಟರ ಪೈಕಿ ಸುದೀಪ್ ಫಾಲೋ ಮಾಡುತ್ತಿರುವುದು ಈ ನಾಲ್ಕು ನಟರನ್ನು ಮಾತ್ರ ಎನ್ನುವುದು ವಿಶೇಷ.

ಸಲ್ಮಾನ್ ಖಾನ್
ಬಾಲಿವುಡ್ ಸ್ಟಾರ್ ನಟ ಬಾಯಿಜಾನ್ ಸಲ್ಮಾನ್ ಖಾನ್ ಅವರನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫಾಲೋ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ಸುದೀಪ್ ಸದ್ಯದ ವರಗೆ ಒಟ್ಟಿಗೆ ಯಾವುದೇ ಸಿನಿಮಾ ಮಾಡಿಲ್ಲ. ಆದರೆ ಸಲ್ಮಾನ್ ಅವರ ಹಿಂದಿನ ಸಿನಿಮಾ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಅದು ನಿಜ ಆಗಲಿಲ್ಲ.
ಕನ್ನಡದ ಈ ನಟನನ್ನು ನಿರ್ದೇಶಕ ರಾಜಮೌಳಿ ಫಾಲೋ ಮಾಡ್ತಿದ್ದಾರೆ..!

ರಿತೇಶ್ ದೇಶಮುಖ್
ಮತ್ತೊಬ್ಬ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರನ್ನು ಸಹ ಸುದೀಪ್ ಟ್ವಿಟ್ಟರ್ ನಲ್ಲಿ ಹಿಂಬಾಲಿಸುತ್ತಿದ್ದಾರೆ. ವಿಶೇಷ ಅಂದರೆ ಸುದೀಪ್ ಅವರಿಗೆ ಟ್ವಿಟ್ಟರ್ ಖಾತೆಯ ಬಗ್ಗೆ ಮೊದಲು ಹೇಳಿದ್ದು ರಿತೇಶ್ ದೇಶಮುಖ್ ಅಂತೆ. ಕಾರ್ಯಕ್ರಮವೊಂದರಲ್ಲಿ ಸುದೀಪ್ ಭೇಟಿ ಮಾಡಿದ್ದ ಅವರು ಟ್ವಿಟ್ಟರ್ ನಲ್ಲಿ ಖಾತೆ ತೆರೆಯುವಂತೆ ಸುದೀಪ್ ಗೆ ಮೊದಲು ಹೇಳಿದರಂತೆ.

ವಿವೇಕ್ ಓಬೆರಾಯ್
ಸುದೀಪ್ ಫಾಲೋ ಮಾಡುತ್ತಿರುವ ಇನ್ನೊಬ್ಬ ನಟರಲ್ಲಿ ವಿವೇಕ್ ಓಬೆರಾಯ್ ಕೂಡ ಒಬ್ಬರು. ಸುದೀಪ್ ಮತ್ತು ವಿವೇಕ್ ಓಬೆರಾಯ್ ನಡುವೆ ಒಂದು ಸಾಮ್ಯತೆ ಅಂದರೆ ಈ ಇಬ್ಬರು ನಟರನ್ನು ಬಾಲಿವುಡ್ ಚಿತ್ರರಂಗಕ್ಕೆ ಪರಿಚಯ ಮಾಡಿದ್ದು ನಿರ್ದೇಶಕ ರಾಮ್ ಗೋಪಾಲ್ ವರ್ಮ. ಇನ್ನು ವಿವೇಕ್ ಓಬೆರಾಯ್ ಕೂಡ 'ರೈ' ಸಿನಿಮಾ ಮೂಲಕ ಕನ್ನಡ ಸಿನಿಮಾ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಈ ಚಿತ್ರ ಮುಂದಕ್ಕೆ ಹೋಗಿದೆ.
ಟ್ವಿಟ್ಟರ್ ನಲ್ಲಿ 2 ಮಿಲಿಯನ್ ಫಾಲೋವರ್ಸ್ ಪಡೆದ ಕಿಚ್ಚ ಸುದೀಪ್

ಶಾರೂಖ್ ಖಾನ್
ಈ ನಟರ ಜೊತೆಗೆ ಹಿಂದಿ ಚಿತ್ರರಂಗದ ಮೂರು ಖಾನ್ ಗಳ ಪೈಕಿ ಒಬ್ಬರಾದ ಶಾರೂಖ್ ಖಾನ್ ಅವರನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫಾಲೋ ಮಾಡುತ್ತಿದ್ದಾರೆ. ಅಂದಹಾಗೆ, ಶಾರೂಖ್ ಖಾನ್ ಸದ್ಯ ತಮ್ಮ 'ಜಿರೋ' ಚಿತ್ರದಲ್ಲಿ ಬಿಜಿ ಇದ್ದಾರೆ.