»   » ಇದನ್ನ ಸುದೀಪ್ ರವರಿಂದ ಯಾರೂ ನಿರೀಕ್ಷಿಸಿರಲಿಲ್ಲ.! ಅದು ದರ್ಶನ್ ಕುರಿತಾಗಿ.!

ಇದನ್ನ ಸುದೀಪ್ ರವರಿಂದ ಯಾರೂ ನಿರೀಕ್ಷಿಸಿರಲಿಲ್ಲ.! ಅದು ದರ್ಶನ್ ಕುರಿತಾಗಿ.!

By: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ಮಾತು ಆಡಿದರೆ ಹೋಯ್ತು... ಮುತ್ತು ಒಡೆದರೆ ಹೋಯ್ತು... ಎನ್ನುವ ಹಾಗೆ, ಏನೇ ಮಾತನಾಡಿದ್ರೂ, ಅಳೆದು ತೂಗಿ ಮಾತನಾಡುವ ಜಾಯಮಾನ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ರವರದ್ದು.

ಸುದೀಪ್ ಯಾರ ತಂಟೆಗೂ ಹೋಗುವವರಲ್ಲ. ತಮ್ಮ ತಂಟೆಗೆ ಬಂದ್ರೆ... ತಮ್ಮದೇ ಸ್ಟೈಲ್ ನಲ್ಲಿ 'ಸಿಮೆಂಟ್ ಕೋಟಿಂಗ್' ಕೊಡದೆ ಸುಮ್ಮನೆ ಕೂರುವವರೂ ಅಲ್ಲ. ಯಾವುದೇ ವಿವಾದ ಆದರೂ, ಅದನ್ನ ಜಾಗರೂಕತೆಯಿಂದ ಹ್ಯಾಂಡಲ್ ಮಾಡುವ ಜಾಣ ಸುದೀಪ್.[ದರ್ಶನ್ ಒಡಲೊಳಗಿಂದ ದಿಢೀರ್ ಅಂತ ಸಿಡಿದ ಐದು ಸಿಡಿಗುಂಡುಗಳಿವು.!]

ಇಂತಿಪ್ಪ ಸುದೀಪ್ ಬಾಯಿಂದ ಯಾರೂ ನಿರೀಕ್ಷೆ ಮಾಡದ ಮಾತೊಂದು ಬಂದಿದೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು ಅನ್ನೋದು ಎಲ್ಲರಿಗೂ ಶಾಕಿಂಗ್ ವಿಷಯ..! ಅದೇನು ಅಂತ ತಿಳಿದುಕೊಳ್ಳುವ ಕುತೂಹಲ ಇದ್ರೆ, ಕಂಪ್ಲೀಟ್ ಸ್ಟೋರಿ ಓದಿರಿ....

ದರ್ಶನ್ ಜೊತೆ ಸುದೀಪ್ ನಟಿಸುವುದಿಲ್ಲ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕಿಚ್ಚ ಸುದೀಪ್ ನಟಿಸುವುದಿಲ್ಲವಂತೆ. ಹಾಗಂತ ಸ್ವತಃ ಸುದೀಪ್ ರವರೇ ಸುತ್ತಿ ಬಳಸಿ ಹೇಳಿದ್ದಾರೆ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಸುದೀಪ್ ಹೀಗೆ ಯಾವಾಗ ಹೇಳಿದ್ರು.?

ಕೆಲ ದಿನಗಳ ಹಿಂದೆಯಷ್ಟೇ ಕಾಲೇಜ್ ಒಂದರ ಫೆಸ್ಟ್ ನಲ್ಲಿ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ವೇಳೆ ಕಾಲೇಜ್ ನ ವಿದ್ಯಾರ್ಥಿಯೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು ಸುದೀಪ್ ಬಳಿ ಸ್ಟ್ರೇಟ್ ಆಗಿ ಒಂದು ಬಾಣ ಬಿಟ್ಟರು.[ಸುದೀಪ್-ದರ್ಶನ್ ನಡುವಿನ ವಿರಸದ ಬೆಂಕಿಗೆ ಇಂದು ಬಿಸಿ ಬಿಸಿ ತುಪ್ಪ!]

ವಿದ್ಯಾರ್ಥಿ ಕೇಳಿದ ಪ್ರಶ್ನೆ ಏನು.?

''ಬಾಸ್... ಸ್ಟ್ರೇಟ್ ಆಗಿ ಒಂದು ಪ್ರಶ್ನೆ ಕೇಳ್ತೀನಿ. ದರ್ಶನ್ ಹಾಗೂ ನಿಮ್ಮನ್ನ ಒಂದೇ ಸಿನಿಮಾದಲ್ಲಿ ನೋಡಲು ನಮಗೆ ಇಷ್ಟ. ಇದು ನೆರವೇರುತ್ತಾ.?'' ಅಂತ ಸುದೀಪ್ ಗೆ ಓರ್ವ ವಿದ್ಯಾರ್ಥಿ ಪ್ರಶ್ನೆ ಕೇಳಿದರು. ಅದಕ್ಕೆ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ.?

ಸುದೀಪ್ ಕೊಟ್ಟ ಉತ್ತರವೇನು.?

''ನಾನು ಚಿಕ್ಕವನಾಗಿ ಇರುವಾಗ, ನನಗೆ ನನ್ನ ಅಮ್ಮ ಏನೂ ಇಲ್ಲ ಅಂತ ಹೇಳೇ ಇಲ್ಲ. ನಾನು ಏನೇ ಕೇಳಿದ್ರೂ ನನ್ನ ತಾಯಿ ನನಗೆ ಕೊಡಿಸುತ್ತಿದ್ದರು. ನನ್ನ ತಾಯಿಗೆ ನಾನು ಒಮ್ಮೆ ಕೇಳಿದೆ, ''ಅಮ್ಮ... ಸೂರ್ಯ, ಚಂದ್ರ ಯಾಕೆ ಒಟ್ಟಾಗಿ ಕಾಣಿಸಿಕೊಳ್ಳುವುದಿಲ್ಲ'' ಅಂತ. ಆಗ ನನ್ನ ತಾಯಿ ಹೇಳಿದ್ರು, ''ಏನ್ ಮಾಡ್ಲಿ ಕಂದ.. ಸೂರ್ಯ ಬಂದಾಗ ಬೆಳಕಾಗುತ್ತೆ. ಚಂದ್ರ ಬಂದಾಗ ಕತ್ತಲಾಗುತ್ತೆ. ಅದಲ್ಲೇ ಸರಿ, ಇದಿಲ್ಲೇ ಸರಿ. ಹಾಗೇ ಬಿಟ್ಟು ಬಿಡೋಣ'' ಅಂತ ಸುದೀಪ್ ಉತ್ತರ ಕೊಟ್ಟರು.

ಅಲ್ಲಿಗೆ ಏನು ಅರ್ಥ.?

''ಸೂರ್ಯ-ಚಂದ್ರ ಹೇಗೆ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲವೋ... ಹಾಗೇ ಸುದೀಪ್-ದರ್ಶನ್ ಕೂಡ ಒಂದೇ ಸಿನಿಮಾದಲ್ಲಿ ನಟಿಸುವುದಿಲ್ಲ.'' ಇದೇ ತಾನೇ ಸುದೀಪ್ ಮಾತಿನ ಅರ್ಥ.???

ಅದಲ್ಲೇ ಸರಿ... ಇದಿಲ್ಲೇ ಸರಿ...

''ಅದಲ್ಲೇ ಸರಿ... ಇದಿಲ್ಲೇ ಸರಿ... ಹಾಗೇ ಬಿಟ್ಟು ಬಿಡೋಣ'' ಅಂತ ಸುದೀಪ್ ಹೇಳಿರುವುದನ್ನ ನೋಡಿದ್ರೆ, ಸುದೀಪ್ ಹಾಗೂ ದರ್ಶನ್ ಒಂದಾಗುವುದಕ್ಕೆ ಸಾಧ್ಯವೇ ಇಲ್ಲವೇ.???

ಯಾರೂ ನಿರೀಕ್ಷೆ ಮಾಡದ ಉತ್ತರ.!

ಕುಚ್ಚಿಕ್ಕು ಗೆಳೆಯರ ಮಧ್ಯೆ ಮನಸ್ತಾಪ ಏನೇ ಇರಬಹುದು. ಕೋಪದಲ್ಲಿ ದರ್ಶನ್ ಏನೇ ಹೇಳಿರಬಹುದು. ಆದರೆ, ಅದನ್ನೇ ಸಾಧಿಸಿಕೊಂಡು ಹೋಗುವುದು ಸರಿಯೇ.? ಸುದೀಪ್ ಎಲ್ಲವನ್ನ ಕೂಲ್ ಮಾಡಬಹುದು ಎಂದು ಅನೇಕರು ಊಹಿಸಿದ್ದರು. ಆದ್ರೀಗ, ಸುದೀಪ್ ಆಡಿರುವ ಮಾತುಗಳು ಮಾತ್ರ ಯಾರೂ ನಿರೀಕ್ಷೆ ಮಾಡದೇ ಇರುವುದು.! ಹೀಗಾಗಿ ಎಲ್ಲರೂ ಶಾಕ್ ಆಗಿದ್ದಾರೆ.[ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?]

ದರ್ಶನ್ ನ ಸುದೀಪ್ ಫಾಲೋ ಮಾಡ್ತಿದ್ದಾರೆ.!

ಟ್ವಿಟ್ಟರ್ ನಲ್ಲಿ ಸುದೀಪ್ ಜೊತೆಗಿನ ಗೆಳೆತನದ ಬಗ್ಗೆ ದರ್ಶನ್ ಟ್ವೀಟ್ ಮಾಡಿರಬಹುದು. ಆದ್ರೆ ಇಂದಿಗೂ ದರ್ಶನ್ ರವರನ್ನ ಸುದೀಪ್ ಟ್ವಿಟ್ಟರ್ ನಲ್ಲಿ ಫಾಲೋ ಮಾಡುವುದನ್ನು ಬಿಟ್ಟಿಲ್ಲ.

ದರ್ಶನ್ ಅನ್ ಫಾಲೋ ಮಾಡಿದ್ರು.!

ಟ್ವಿಟ್ಟರ್ ನಲ್ಲಿ ವರ್ಷದ ಹಿಂದೆಯೇ ಸುದೀಪ್ ರವರನ್ನ ದರ್ಶನ್ ಅನ್ ಫಾಲೋ ಮಾಡಿದ್ರು. ಆದರೂ, ದರ್ಶನ್ ವಿರುದ್ಧ ಸುದೀಪ್ ಎಲ್ಲೂ ಕೆಂಡಕಾರಲಿಲ್ಲ. ದರ್ಶನ್ ರವರನ್ನ ಸುದೀಪ್ ಇನ್ನೂ ಫಾಲೋ ಮಾಡುತ್ತಿದ್ದಾರೆ.[ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು?]

ಸುದೀಪ್ ಅಭಿಮಾನಿಗಳು ಕೂಡ.!

ಸುದೀಪ್ ಮಾತ್ರ ಅಲ್ಲ, ಕಿಚ್ಚನ ಭಕ್ತರು ಕೂಡ ದರ್ಶನ್ ರವರನ್ನ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ.

ದರ್ಶನ್ ಬಗ್ಗೆ ಎಲ್ಲೂ ಏನೂ ಹೇಳಲಿಲ್ಲ.!

ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಬಾಂಬ್ ಸಿಡಿಸಿದ್ಮೇಲೆ, ಅದರ ಕುರಿತು ಸುದೀಪ್ ಪ್ರತಿಕ್ರಿಯೆ ಕೂಡ ನೀಡಿಲ್ಲ.

ಆಸೆ ಇತ್ತು.!

ಇದೆಲ್ಲ ನೋಡಿದ್ಮೇಲೆಯೇ... ದರ್ಶನ್ ಹಾಗೂ ಸುದೀಪ್ ನಡುವಿನ ಕೋಪ ತಣ್ಣಗೆ ಆಗಬಹುದು ಎಂಬ ಆಸೆ ಹಲವರಲ್ಲಿ ಇದ್ದದ್ದು ನಿಜ. ಆದ್ರೀಗ ಸುದೀಪ್ 'ಸೂರ್ಯ-ಚಂದ್ರ' ಕಥೆ ಹೇಳಿದ್ಮೇಲೆ ಅಭಿಮಾನಿಗಳ ಆಸೆಗೆ ಬಕೆಟ್ ಗಟ್ಟಲೆ ತಣ್ಣೀರು ಎರಚಿದ ಹಾಗೆ ಆಗಿದೆ.

ಅಷ್ಟಕ್ಕೂ ದರ್ಶನ್ ಮಾಡಿದ್ದ ಟ್ವೀಟ್ ಏನು.?

''ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ಕನ್ನಡ ಚಿತ್ರರಂಗಕ್ಕಾಗಿ ದುಡಿಯುವ ಸಹ ಕಲಾವಿದರಷ್ಟೇ.. ದಯವಿಟ್ಟು ಯಾವುದೇ ಗಾಳಿಸುದ್ದಿ ಹಬ್ಬಿಸಬೇಡಿ. ಇದು ಇಲ್ಲಿಗೆ ಅಂತ್ಯ'' ಎಂದು ದರ್ಶನ್ ಕಳೆದ ತಿಂಗಳು ಟ್ವೀಟ್ ಮಾಡಿದ್ರು. ಆಗಲೇ, ದರ್ಶನ್ ಮತ್ತು ಸುದೀಪ್ ಗೆಳೆತನದಲ್ಲಿ ಎಲ್ಲವೂ ಸರಿಯಿಲ್ಲ ಅಂತ ಜಗಜ್ಜಾಹೀರಾಗಿದ್ದು.

ವಿಡಿಯೋ ನೋಡಿ...

ಕಾಲೇಜ್ ಫೆಸ್ಟ್ ಒಂದರಲ್ಲಿ ದರ್ಶನ್ ಜೊತೆ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಸುದೀಪ್ ಹೇಳಿದ್ದ ವಿಡಿಯೋ ಇಲ್ಲಿದೆ ನೋಡಿ... ಲಿಂಕ್ ಕ್ಲಿಕ್ ಮಾಡಿ....

English summary
When quizzed about 'Acting with Challenging Star Darshan', Kiccha Sudeep gave an example of Sun and Moon. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada