Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿಚ್ಚನ ದಾಂಪತ್ಯಕ್ಕೆ 20 ವರ್ಷ: ಪ್ರೀತಿಯ ಉಡುಗೊರೆ ನೀಡಿದ ಸುದೀಪ್
ಸುದೀಪ್-ಪ್ರಿಯಾ ದಾಂಪತ್ಯಕ್ಕೆ ಇಂದಿಗೆ 20 ವರ್ಷ. ವಿವಾಹ ವಾರ್ಷಿಕೋತ್ಸವದ ದಿನ ಕಿಚ್ಚ ಸುದೀಪ್ ಪ್ರೀತಿಯ ಉಡುಗೊರೆಯನ್ನು ನೀಡಿದ್ದಾರೆ.
ಮಡದಿಗೆ ಪ್ರೀತಿಯ ಹಾಡೊಂದನ್ನು ರಚಿಸಿ ಹಾಡಿದ್ದಾರೆ ಸುದೀಪ್. ಕಿಚ್ಚ ರಚಿಸಿ ಹಾಡಿರುವ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವರ್ಷವೂ ಕಿಚ್ಚ ಸುದೀಪ್ ಪತ್ನಿಗಾಗಿ ಹಾಡು ಹಾಡಿದ್ದರು.
ನಿನ್ನೆ ರಾತ್ರಿಯೇ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳೊಟ್ಟಿಗೆ ಕೇಕ್ ಕತ್ತರಿಸಿ ವಾರ್ಷಿಕೋತ್ಸವ ಆಚರಿಸಿದ್ದಾರೆ. ಕೇಕ್ ಕತ್ತರಿಸುತ್ತಿರುವ ಚಿತ್ರಗಳನ್ನು ಸುದೀಪ್ ಮಗಳು ಹಾಗೂ ಪತ್ನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸುದೀಪ್ ಪತ್ನಿ ಪ್ರಿಯಾ ಸಹ ಟ್ವಿಟ್ಟರ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸುದೀಪ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಸುದೀಪ್ ಹಾಗೂ ತಮ್ಮ ನಡುವಿನ ಬಾಂಧವ್ಯ ವರ್ಷಗಳು ಕಳೆದಂತೆ ಗಟ್ಟಿಯಾಗುತ್ತಿದೆ ಎಂದಿದ್ದಾರೆ ಪ್ರಿಯಾ.
ಪ್ರಿಯಾ ಹಾಗೂ ಸುದೀಪ್ 2001 ರ ಅಕ್ಟೋಬರ್ 18 ರಂದು ವಿವಾಹವಾಗಿದ್ದರು. ಇಬ್ಬರಿಗೂ ಸಾನ್ವಿ ಹೆಸರಿನ ಮಗಳಿದ್ದಾಳೆ. ಕೌಟುಂಬಿಕ ವ್ಯಕ್ತಿಯಾಗಿರುವ ಸುದೀಪ್ ತಮ್ಮ ಕುಟುಂಬದ ಬಗ್ಗೆ ಬಹಳ ಪ್ರೊಟೆಕ್ಟಿವ್ ಮತ್ತು ಕೇರಿಂಗ್. ಹೀಗೆಂದು ಅವರ ಪತ್ನಿ ಪ್ರಿಯಾ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಹಲವು ಅಡೆ-ತಡೆಗಳನ್ನು ದಾಟಿ ಬಿಡುಗಡೆ ಆಗಿ ಯಶಸ್ಸು ಗಳಿಸುತ್ತಿರುವ ಖುಷಿಯಲ್ಲಿರುವ ಸುದೀಪ್‌ಗೆ ಇದೀಗ ವಿವಾಹ ವಾರ್ಷಿಕೋತ್ಸವದ ಸವಿಯೂ ಸೇರಿಕೊಂಡಿದೆ.