For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್‌ನಿಂದ ಪ್ರೀತಿ ಪಾತ್ರರ ಹುಟ್ಟುಹಬ್ಬಕ್ಕೆ ಕೇಕ್ ಕಳುಹಿಸಿದ ಸುದೀಪ್

  |

  ಕಿಚ್ಚ ಸುದೀಪ್ ಹೈದರಾಬಾದ್‌ನಲ್ಲಿ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕಾಗಿ ಭಾರಿ ವೆಚ್ಚದಲ್ಲಿ ಅದ್ಧೂರಿ ಸೆಟ್‌ ಹಾಕಲಾಗಿದ್ದು, ಕೊರೊನಾ ಭೀತಿಯ ನಡುವೆಯೂ ಕಿಚ್ಚ ಮತ್ತು ತಂಡ ಶೂಟಿಂಗ್ ಮಾಡುತ್ತಿದೆ.

  Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

  ಹೈದರಾಬಾದ್‌ ಶೂಟಿಂಗ್‌ನಲ್ಲಿದ್ದರೂ ಪ್ರೀತಿ ಪಾತ್ರರ ಕುರಿತು ಸುದೀಪ್ ಮರೆತಿಲ್ಲ ಹಾಗೂ ಮರೆಯಲ್ಲ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ. ಕಿಚ್ಚನ ಬಳಗದಲ್ಲಿ ಗುರುತಿಸಿಕೊಂಡಿರುವ ಯುನನಟನೊಬ್ಬನ ಹುಟ್ಟುಹಬ್ಬಕ್ಕಾಗಿ ಹೈದರಾಬಾದ್‌ನಿಂದ ವಿಶೇಷವಾದ ಕೇಕ್ ಕಳುಹಿಸಿಕೊಟ್ಟಿದ್ದಾರೆ ಸುದೀಪ್. ಮುಂದೆ ಓದಿ....

  ನಿನ್ನ ಮುದ್ದಾಡಲು ಯಾವಾಗಲೂ ಸಿದ್ಧ: ಕಿಚ್ಚ ಸುದೀಪ್‌ಗೆ ಹೀಗೆಂದವರು ಯಾರು?

  ಪ್ರದೀಪ್ ಹುಟ್ಟುಹಬ್ಬ

  ಪ್ರದೀಪ್ ಹುಟ್ಟುಹಬ್ಬ

  ಜಾಲೀಡೇಸ್, ಚಿಂಗಾರಿ, ರಂಗನ್‌ಸ್ಟೈಲ್, ಟೈಗರ್ ಅಂತಹ ಚಿತ್ರಗಳಲ್ಲಿ ನಟಿಸಿರುವ ಯುವ ನಟ ಹಾಗೂ ಕಿಚ್ಚ ಸುದೀಪ್ ಅವರ ಆಪ್ತ ಪ್ರದೀಪ್ ಅವರು ಹುಟ್ಟುಹಬ್ಬಕ್ಕೆ ಹೈದರಾಬಾದ್‌ನಿಂದ ವಿಶೇಷವಾದ ಕೇಕ್ ಕಳುಹಿಸಿಕೊಂಡಿದ್ದಾರೆ. ಈ ವಿಚಾರವನ್ನು ಖುದ್ದು ಪ್ರದೀಪ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ನಿಮ್ಮ ಹುಡ್ಗ ಎನ್ನುವುದಕ್ಕೆ ಹೆಮ್ಮೆ ಇದೆ

  ನಿಮ್ಮ ಹುಡ್ಗ ಎನ್ನುವುದಕ್ಕೆ ಹೆಮ್ಮೆ ಇದೆ

  ಫ್ಯಾಂಟಮ್ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದರೂ ಬರ್ತಡೇಗೆ ಕೇಕ್ ಕಳುಹಿಸಿರುವ ಸುದೀಪ್ ಅವರಿಗೆ ಪ್ರದೀಪ್ ಥ್ಯಾಂಕ್ಸ್ ಹೇಳಿದ್ದಾರೆ. ''ಎಲ್ಲದಕ್ಕೂ ತುಂಬಾ ಧನ್ಯವಾದಗಳು ಅಣ್ಣಾ, ಯಾವಾಗಲೂ ಜೊತೆಯಾಗಿರುವುದಕ್ಕೆ ತುಂಬಾ ಧನ್ಯವಾದಗಳು ಮತ್ತು ನಿಮ್ಮ ದೊಡ್ಡ ಕುಟುಂಬದಲ್ಲಿ ನನಗೆ ಒಂದು ಸಣ್ಣ ಸ್ಥಾನವನ್ನು ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಹೈದರಾಬಾದ್‌ನಿಂದ ನನಗೆ ಕೇಕ್ ಕಳುಹಿಸಿರುವುದು ಸಿಹಿ ನೆನಪು. ನಿಮ್ಮ ಹುಡ್ಗ ಎನ್ನುವುದಕ್ಕೆ ಹೆಮ್ಮೆ ಪಡುತ್ತೇನೆ'' ಎಂದು ಪ್ರದೀಪ್ ಟ್ವೀಟ್ ಮಾಡಿದ್ದಾರೆ.

  ಕಿಚ್ಚ ಸುದೀಪ್-ರಚಿತಾ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸುವ ಸುದ್ದಿ, ನಿಜವೇ?

  'ಎಲ್ಲೋ ಬೋರ್ಡ್‌' ಚಿತ್ರಕ್ಕೆ ಶುಭಾಶಯ

  'ಎಲ್ಲೋ ಬೋರ್ಡ್‌' ಚಿತ್ರಕ್ಕೆ ಶುಭಾಶಯ

  ಪ್ರದೀಪ್ ನಟಿಸಿರುವ ಎಲ್ಲೋ ಬೋರ್ಡ್ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಸುದೀಪ್, ಪ್ರದೀಪ್ ಅವರ ಸಾಮರ್ಥ್ಯ, ಶಕ್ತಿ, ಸಮಗ್ರತೆಯ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಸಿಸಿಎಲ್ ಪ್ರಮುಖ ಆಟಗಾರ

  ಸಿಸಿಎಲ್ ಪ್ರಮುಖ ಆಟಗಾರ

  ಸಿಸಿಎಲ್ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಪ್ರದೀಪ್ ಆಡುತ್ತಿದ್ದಾರೆ. ಕಿಚ್ಚನ ಬಳಗದಲ್ಲಿರುವ ಪ್ರಮುಖ ಆಟಗಾರ ಪ್ರದೀಪ್. ಸಿನಿಮಾಗಿಂತ ಕ್ರಿಕೆಟ್ ಮೂಲಕವೇ ಪ್ರದೀಪ್ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

  English summary
  Kannada actor Kichcha Sudeep sent special cake to Actor Pradeep birthday from Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X