»   » 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ....

'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ....

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೆನ್ಸೇಷನಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಕಿಲ್ಲಿಂಗ್ ವೀರಪ್ಪನ್' ಇಂದು ಬಿಡುಗಡೆ ಆಗಿದೆ.

ಎಲ್ಲೆಡೆ ಅದ್ಭುತ ಓಪನಿಂಗ್ ಪಡೆದಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೊದಲ ಶೋ ಈಗಷ್ಟೇ ಮುಗಿದಿದೆ. ಅಷ್ಟು ಬೇಗ ಚಿತ್ರದ ವಿಮರ್ಶೆ ನೀಡಿದ್ದಾರೆ ಪತ್ರಕರ್ತರೂ ಆಗಿರುವ ಕನ್ನಡ ನಿರ್ದೇಶಕ ದಯಾನಂದ್.ಟಿ.ಕೆ. [ರಾಮ್ ಗೋಪಾಲ್ ವರ್ಮಾ ನ ಕಿಲ್ ಮಾಡ್ತಾರಂತೆ ಮುತ್ತುಲಕ್ಷ್ಮಿ!]


killing-veerappan

''ರಾಮ್ ಗೋಪಾಲ್ ವರ್ಮ.. ನೀನು ನಿಜಕ್ಕು ಮನುಷ್ಯ ಅಲ್ಲ ಮಾರಾಯ. ಥ್ರಿಲ್ಲರ್ ಸಿನಿಮಾ ಜಗತ್ತಿನ ದೇವ್ರು. ಫೆಂಟಾಸ್ಟಿಕ್ ಮೂವಿ. ಡೋಂಟ್ ಮಿಸ್ ದಿಸ್ ಮೂವಿ. ವೀರಪ್ಪನ್ ಹಂಟ್ ಕಾರ್ಯಾಚರಣೆಯ ಅಷ್ಟೂ ಕ್ಲಾಸಿಫೈಡ್ ಆಪರೇಷನ್ಸ್ ರಹಸ್ಯಗಳಿಗೆ ವರ್ಮ ಕೈಯಿಟ್ಟಿದ್ದಾರೆ. ವೀರಪ್ಪನ್ ಹತ್ಯೆಯ ಹಿಂದಿನ ಜನಪ್ರಿಯ ಸತ್ಯವನ್ನು ವರ್ಮ ಅಲ್ಲಗಳೆದು, ಇನ್ನೊಂದು ವರ್ಷನ್ ಕೊಡ್ತಾರೆ. ಮುಸ್ಲಿಂ ಭೂಗತಜಗತ್ತು, ಎಲ್.ಟಿ.ಟಿ.ಇ, ಕಂಚಿಸ್ವಾಮಿ, ರಜನೀಕಾಂತ್ , ಪೊಲೀಸ್ ಸಿಸ್ಟಂ ಒಳಗೇ ನಡೆದ ಪೊಲೀಸರು, ಇನ್ಫಾರ್ಮರ್ ಗಳ ರಹಸ್ಯಕೊಲೆಗಳು, ಹೀಗೆ ಯಾರನ್ನೂ ವರ್ಮ ಟಚ್ ಮಾಡದೆ ಬಿಟ್ಟಿಲ್ಲ. ಆಪ್ಟೋಕಾಪ್ಟರ್ ಬಳಸಿ ಚಿತ್ರೀಕರಿಸಿರುವ "ಕಧಾನಿ ಟ್ರಾಪ್ ಸೀನ್ "ನೋಡೋಕೆ ಎರಡು ಕಣ್ಣು ಸಾಲದು. ಚಿತ್ರದ ತಳಪಾಯವೇ ಬ್ಯಾಕ್ ಗ್ರೌಂಡ್ ಸ್ಕೋರ್. ದೃಶ್ಯಗಳನ್ನ ಇನ್ನೊಂದು ಎತ್ತರಕ್ಕೆ ಒಯ್ಯುವ ಹಿನ್ನೆಲೆ ಸಂಗೀತ ಕೊಟ್ಟ ಮನುಷ್ಯ, ಅವನು ಇನ್ನೊಬ್ಬ ದೇವ್ರು.. ಬ್ರಿಲಿಯಂಟ್ ಓಪೆನ್ ಟು 2016. ಡಕ್ಕಂ ಡಿಕ್ಕಂ ಡಕ್ಕಂ ಡಿಕ್ಕಂ ಡಕ್ಕಂ ಡಿಕ್ಕಂ ಡಕ್ಕಂ.. ಉಫ್.. ಕಳ್ದೋದೆ...''


ಹೀಗಂತ 'ಬೆಂಕಿಪಟ್ಣ' ಚಿತ್ರದ ನಿರ್ದೇಶಕ ದಯಾನಂದ್.ಟಿ.ಕೆ ಫೇಸ್ ಬುಕ್ ನಲ್ಲಿ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ವಿಮರ್ಶೆ ನೀಡಿದ್ದಾರೆ. [ಟ್ವಿಟ್ಟರ್-ಫೇಸ್ ಬುಕ್ಕಿನಲ್ಲಿ ವೀರಪ್ಪನ್ ಹವಾ ಶುರು ಗುರು]


ರಾಮ್ ಗೋಪಾಲ್ ವರ್ಮ.. ನೀನು ನಿಜಕ್ಕು ಮನುಷ್ಯ ಅಲ್ಲ ಮಾರಾಯ. ಥ್ರಿಲ್ಲರ್ ಸಿನಿಮಾ ಜಗತ್ತಿನ ದೇವ್ರು. ಫೆಂಟಾಸ್ಟಿಕ್ ಮೂವಿ. ಡೋಂಟ್ ಮಿಸ್ ದಿಸ್ ...


Posted by Dayanand TK on Thursday, December 31, 2015

ಹೊಸ ವರ್ಷದ ಪ್ರಯುಕ್ತ ಇಂದು ಬಿಡುಗಡೆ ಆಗಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಗ್ಗೆ ಗುಣಗಾನ ಕೂಡ ಕೇಳಿದ್ರಿ....ಹಾಗಾದ್ರೆ, ಇನ್ಯಾಕೆ ತಡ...ವರ್ಷಾರಂಭವನ್ನ ಕನ್ನಡ ಚಿತ್ರದ ಮೂಲಕ ಸಂಭ್ರಮಿಸಿ...

English summary
Kannada Director Dayanand TK of 'Benkipatna' fame has taken his facebook account to appreciate Shiva Rajkumar starrer, Ram Gopal Varma Directorial 'Killing Veerappan' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada