»   » ಪ್ರೇಮಿಗಳನ್ನ ಪರಿಚಯಿಸಲು ಬರ್ತಿದ್ದಾರೆ ಎ ಪಿ ಅರ್ಜುನ್

ಪ್ರೇಮಿಗಳನ್ನ ಪರಿಚಯಿಸಲು ಬರ್ತಿದ್ದಾರೆ ಎ ಪಿ ಅರ್ಜುನ್

Posted By:
Subscribe to Filmibeat Kannada

ಅಂಬಾರಿ, ಅದ್ದೂರಿ, ರಾಟೆ ಈ ರೀತಿಯ ವಿಭಿನ್ನ ಪ್ರೇಮ ಕಥೆಗಳನ್ನ ತೆರೆಗೆ ತಂದಿದ್ದ ನಿರ್ದೇಶಕ ಎ ಪಿ ಅರ್ಜುನ್ ಈ ಬಾರಿ ಪ್ರೇಮಿಗಳನ್ನ ಪರಿಚಯಿಸಲು ಬರುತ್ತಿದ್ದಾರೆ. ಇದೇ ತಿಂಗಳಲ್ಲಿ 14 ರಂದು ಆಚರಣೆ ಮಾಡುವ ವ್ಯಾಲೆಂಟೈನ್ ಡೇ ವಿಶೇಷವಾಗಿ ತೆರೆ ಮೇಲಿನ ಲವ್ವರ್ಸ್ ನ ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಬಾರಿ ಕುತೂಹಲ ಮೂಡಿಸಿರುವ ಕಿಸ್ ಸಿನಿಮಾದ ನಾಯಕ ಮತ್ತು ನಾಯಕಿ ಇಬ್ಬರು ಸಿನಿಮಾರಂಗಕ್ಕೆ ಹೊಸಬರು. ನಿರೀಕ್ಷೆಗೂ ಮೀರಿದ ಅಭಿನಯ ಮಾಡಿರುವ ಶ್ರೀಲೀಲಾ ಹಾಗೂ ವಿರಾಟ್ ಚಿತ್ರರಂಗದಲ್ಲಿ ಭರವಸೆ ಕಲಾವಿದರಾಗಿ ಉಳಿದುಕೊಳ್ಳುತ್ತಾರೆ ಎನ್ನುತ್ತೆ ಸಿನಿಮಾತಂಡ.

ಎ ಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾದ ನಾಯಕ ಹಾಗೂ ನಾಯಕಿಯನ್ನ ಪರಿಚಯಿಸುವ ಟೀಸರ್ ಫೆಬ್ರವರಿ 14ರಂದು ಬಿಡುಗಡೆ ಆಗುತ್ತಿದೆ. ಶ್ರೀ ಲೀಲಾ ಹಾಗೂ ವಿರಾಟ್ ಪಾತ್ರ ಟೀಸರ್ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದ್ದಾರೆ ಸಿನಿಮಾ ನಿರ್ದೇಶಕರು.

 kiss movie teaser is being released on Valentine's Day,

ಕಿಸ್ ಸಿನಿಮಾದ ಮಾತಿನ ಭಾಗ ಹಾಗೂ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿಸಿದ್ದು ಹಾಡುಗಳ ಶೂಟಿಂಗ್ ಅನ್ನು ಬಾಕಿ ಉಳಿಸಿಕೊಂಡಿದೆ . ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿರುವ ನಿರ್ದೇಶಕರು ಪ್ರೇಮಿಗಳ ದಿನದ ವಿಶೇಷವಾಗಿ ಡೈಲಾಗ್ ಇಲ್ಲದ ಟೀಸರ್ ರಿಲೀಸ್ ಮಾಡುವ ಪ್ಲಾನ್ ನಲ್ಲಿದ್ದಾರೆ.

 kiss movie teaser is being released on Valentine's Day,

ವಿ ಹರಿಕೃಷ್ಣ ಕಿಸ್ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಆರು ಹಾಡುಗಳಿವೆ. ಮಾರ್ಚ್ ನಲ್ಲಿ ಆಡಿಯೋ ರಿಲೀಸ್ ಪ್ಲಾನ್ ಮಾಡಿಕೊಂಡಿದ್ದು ಆದಷ್ಟು ಬೇಗ ಸಿನಿಮಾವನ್ನ ಪ್ರೇಕ್ಷಕರಿಗೆ ತೋರಿಸುವ ಪ್ಲಾನ್ ಮಾಡಿಕೊಂಡಿದ್ದಾರೆ ಎ ಪಿ ಅರ್ಜುನ್.

English summary
Kannada kiss movie teaser is being released on Valentine's Day, Shree Leela and Virat are heroine-heroines in Kiss cinema, A P Arjun directed the film.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X