For Quick Alerts
  ALLOW NOTIFICATIONS  
  For Daily Alerts

  ರೈತರ ಕುರಿತು ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದ ಕೋಡಿಹಳ್ಳಿ ಚಂದ್ರಶೇಖರ್

  |
  ರೈತರ ಸಾಲದ ಬಗ್ಗೆ ಮಾತನಾಡಿದ್ದ ದರ್ಶನ್ | FILMIBEAT KANNADA

  ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ದರ್ಶನ್ ಚುನಾವಣೆ ಮುಗಿದ ಬಳಿಕ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರ ವೇಳೆ ವಿರೋದ ಪಕ್ಷದವರು ಏನೇ ಟಾಂಗ್ ಕೊಟ್ಟರು ಯಾವುದಕ್ಕು ಹೆಚ್ಚು ಪ್ರತಿಕ್ರಿಯೆ ನೀಡದೆ ಎಲ್ಲಾ ಹೇಳಿಕೆಗಳನ್ನು ಸಮಾದಾನವಾಗಿಯೆ ಕೇಳಿಸಿಕೊಂಡು ಪ್ರಚಾರದಲ್ಲಿ ತೊಡಗಿಕೊಂಡಿದ್ದರು ದಚ್ಚು. ಆದ್ರೆ ತನ್ನ ವಿರುದ್ಧ ಕೇಳಿ ಬಂದ ಅರೋಪಗಳಿಗೆ ಬಹಿರಂಗ ಸಭೆಯಲ್ಲಿ ವಿರೋದ ಪಕ್ಷದವರು ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದರು ಡಿ ಬಾಸ್.

  ಆನಂತರ ಎಲ್ಲೂ ಕಾಣಿಸಿಕೊಳ್ಳದ ದರ್ಶನ್ ಇತ್ತೀಚಿಗಷ್ಟೆ ಬೆಂಗಳೂರಿನ ಬಿಐಟಿ ಕಾಲೇಜು ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ನಂತರ ಅದೇ ವೇದಿಕೆಯಲ್ಲಿ ನಿಂತು ಸಿ ಎಂ ಕುಮಾರ ಸ್ವಾಮಿ ಅವರಿಗೂ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

  ರೈತರ ಸಾಲ ಬಗ್ಗೆ ಡಿ-ಬಾಸ್ ಮಾತು: ಇದು ಸಿಎಂಗೆ ಟಾಂಗ್?

  ''ರೈತರ ಸಾಲ ಮನ್ನಾ ಮಾಡೋದು ಬೇಡ, ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಟ್ರೆ ಸಾಕು ಅವರೆ ಸಾಲ ತೀರಿಸಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ. ದರ್ಶನ್ ಈ ಹೇಳಿಕೆ ಈಗ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೆರಳಿಸಿದೆ. ಮುಂದೆ ಓದಿ..

  ರೈತರ ಆತ್ಮಹತ್ಯೆ ಬಗ್ಗೆ ದರ್ಶನ್ ಗೆ ಗೊತ್ತಾ

  ರೈತರ ಆತ್ಮಹತ್ಯೆ ಬಗ್ಗೆ ದರ್ಶನ್ ಗೆ ಗೊತ್ತಾ

  ಸಾಲ ಮನ್ನಾ ಬದಲು ರೈತರಿಗೆ ಬೆಂಬಲ ಬೆಲೆ ಕೊಡಿ ಎಂದು ಹೇಳಿದ್ದ ದರ್ಶನ್ ವಿರುದ್ಧ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸಿಡಿದೆದ್ದಿದ್ದಾರೆ. "ಸಾಲ ತೀರಿಸಲು ಸಾಧ್ಯವಾಗದೆ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಜೀವದ ಬಗ್ಗೆ ಅವರಿಗೇನು ಗೊತ್ತು. ದರ್ಶನ್ ಅರಿವಿಲ್ಲದೆ ಮಾತನಾಡುತ್ತಿದ್ದಾರೆ" ಎಂದು ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ದರ್ಶನ್ ಗೆ ತಿಳುವಳಿಕೆ ಇಲ್ಲ

  ದರ್ಶನ್ ಗೆ ತಿಳುವಳಿಕೆ ಇಲ್ಲ

  "ರೈತರ ಬಗ್ಗೆ ಗೊತ್ತಿಲ ಅಂದರೆ ನಮ್ಮಂತವರ ಜೊತೆ ಚರ್ಚೆ ಮಾಡಿ ತಿಳಿದು ಕೊಂಡು ಹೇಳಿಕೆ ಕೊಡಬೇಕು. ರಾಜಕೀಯ ಭರಾಟೆಯಲ್ಲಿ ತನಗೆ ಏನು ಅನಿಸಿದೆಯೊ ಅದನ್ನ ಹೇಳುತ್ತಿದ್ದಾರೆ. ಆದ್ರೆ ಅದನ್ನು ತಿದ್ದಿಕೊಳ್ಳಬೇಕೆಂದು ದರ್ಶನ್ ಗೆ ಕಿವಿಮಾತು ಹೇಳುತ್ತೇನೆ" ಎಂದು ಕೋಡಿ ಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

  ರೈತರ ಪರವಾಗಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್

  ದರ್ಶನ್ ಅರ್ಧ ಸಂಭಾವನೆ ತೆಗೆದುಕೊಳ್ಳಲಿ ನೋಡೋಣ

  ದರ್ಶನ್ ಅರ್ಧ ಸಂಭಾವನೆ ತೆಗೆದುಕೊಳ್ಳಲಿ ನೋಡೋಣ

  "ಬೆಂಬಲ ಬೆಲೆ ಎನ್ನುವುದು ಮೊಸಗಾರರು, ಮೂರ್ಖರು ಹೇಳುವ ಮಾತು. ಸಿನಿಮಾದಲ್ಲಿ ಅರ್ಧ ಸಂಭಾವನೆ ತೆಗೆದುಕೊಳ್ಳುತ್ತೇನೆ ಅಂತ ಹೇಳಲಿ ದರ್ಶನ್. ಆಗ ಐಷಾರಾಮಿ ಕಾರುಗಳಲ್ಲಿ ಓಡಾಡಲು ಆಗುತ್ತಾ ಅವರಿಗೆ" ಅಂತ ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ್ದಾರೆ ಚಂದ್ರಶೇಖರ್. "ಯೋಗ್ಯತೆ ತಕ್ಕದಾಗಿ ಸಂಭಾವನೆ ಪಡೆಯುತ್ತಾರೆ. ಹಾಗೆ ರೈತರಿಗೂ ಸರಿಯಾದ ಬೆಲೆ ಸಿಗಬೇಕು. ತಿಳಿದು ದರ್ಶನ್ ಮಾತನಾಡ ಬೇಕು" ಎಂದು ಡಿ ಬಾಸ್ ಗೆ ತಿಳುವಳಿಕೆ ಹೇಳಿದ್ದಾರೆ ಕೋಡಿಹಳ್ಳಿ ಚಂದ್ರಶೇಖರ್.

  ಪಶ್ಚಾತ್ತಾಪ ಪಡುತ್ತೀರಾ: 'ಜೋಡೆತ್ತು'ಗಳಿಗೆ ಕುಮಾರಸ್ವಾಮಿ ವಾರ್ನಿಂಗ್

  ಸೈನಿಕರು ಮತ್ತು ರೈತರು ದೇಶದ ಆಸ್ತಿ

  ಸೈನಿಕರು ಮತ್ತು ರೈತರು ದೇಶದ ಆಸ್ತಿ

  ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುತ್ತಲೆ. "ಇಲ್ಲಿ ಎಲ್ಲರು ನೆಮ್ಮದಿಯಾಗಿ ಕೂತಿದ್ದೀರಿ ಅಂದ್ರೆ ದೇಶ ಕಾಯುವ ಸೈನಿಕರು ಕಾರಣ. ನಾನು ಒಬ್ಬ ರೈತ. ರೈತರ ಕಷ್ಟ ಬಗೆಹರಿಯ ಬೇಕೆಂದರೆ ಸಾಲ ಮನ್ನಾ ಮಾಡದಿದ್ದರು ಪರವಾಗಿಲ್ಲ ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಂಬಲ ಬೆಲೆ ಕೊಟ್ಟರೆ ಸಾಕು ಅವರೆ ಸಾಲ ತೀರಿಸಿಕೊಳ್ಳುತ್ತಾರೆ" ಎಂದು ದರ್ಶನ್ ಹೇಳಿದ್ದರು.

  English summary
  Raitha mukanda Kodihalli Chandrashekar is outrage about Challenging Star Darshan's Farmers Support Price statement. He said that Darshan doesn't know the Farmers problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X