»   » ಪುಂಗಿದಾಸ ಏನೆಲ್ಲಾ ಪುಂಗಿ ಊದುತ್ತಾನೆ ಗೊತ್ತಾ?

ಪುಂಗಿದಾಸ ಏನೆಲ್ಲಾ ಪುಂಗಿ ಊದುತ್ತಾನೆ ಗೊತ್ತಾ?

Posted By:
Subscribe to Filmibeat Kannada

ಕೋಮಲ್ ಅಭಿನಯದ 'ಪುಂಗಿ ದಾಸ' ಎಂಬ ಕನ್ನಡ ಸಿನಿಮಾ ಸದ್ದಿಲ್ಲದೇ 30 ದಿವಸಗಳ ಚಿತ್ರೀಕರಣ ಮುಗಿಸಿಕೊಂಡಿದೆ. ಕೋಮಲ್ ಕುಮಾರ್ ಇದ್ದ ಕಡೆ ಅತೀವ ಆಸಕ್ತಿ, ಶಿಸ್ತು, ನಗೆಯ ಹೊನಲು ಗ್ಯಾರಂಟಿ? ಹಾಗೆಯೇ ಈ ಚಿತ್ರದಲ್ಲೂ ಸಹ ರ್‍ಯಾಂಬೊ ಶ್ರೀನಾಥ್ ಅವರ ನಿರ್ದೇಶನದಲ್ಲಿ ಜರಗುತ್ತಿದೆ.

ಶ್ರೀನಾಥ್ 'ರ್‍ಯಾಂಬೋ' ನಿರ್ದೇಶಕರೂ ಹಾಗೂ 'ವಿಕ್ಟರಿ' ಚಿತ್ರಕ್ಕೆ ಕಥೆ ಒದಗಿಸಿರುವವರು. ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿದ್ದಾರೆ.


ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ. ಅದನ್ನು ಪಡೆಯಲು ಯಾವ ರೀತಿ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು. ಕೋಮಲ್ ಕುಮಾರ್ ಅವರಿಗೆ ಆಸ್ಮಾ ಎಂಬುವರು ನಾಯಕಿ. ಎಸ್ ಎಸ್ ವಿ ಪ್ರೊಡಕ್ಷನ್ ಸದಾಶಿವ ಚಿತ್ರದ ನಿರ್ಮಾಪಕರು.

ತಾತನಾಗಿ ಆರ್ ಎನ್ ಸುದರ್ಶನ್ ಹಾಗೂ ಸಾಹುಕಾರ್ ಜಾನಕಿ ಅವರು ಅಜ್ಜಿ ಪಾತ್ರಧಾರಿ. ಬಿ ಸಿ ಪಾಟೀಲ್ ಅವರು '9 to 12' ಬಳಿಕ ಬಣ್ಣ ಹಚ್ಚುತ್ತಿದ್ದಾರೆ. ಆಶಿಷ್, ತಬಲಾ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಶ್, ಪದ್ಮಜಾ ರಾವ್, ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.

'ಪುಂಗಿ ದಾಸ' ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ನಂದ ಲವ್ಸ್ ನಂದಿತಾ ಚಿತ್ರಕ್ಕೆ ಸಂಗೀತ ನೀಡಿದ್ದ ಏಮಿಲ್ ಎಂದು ಪರಿಚಯವಾದವರು). ಅರುಳ್ ಅವರ ಛಾಯಾಗ್ರಹಣವಿದೆ.

ಕೇವಲ ಎರಡು ಹಾಡು, ಎರಡು ಸಾಹಸ ಹಾಗೂ ಕೆಲವು ದಿನಗಳ ಚಿತ್ರೀಕರಣ ಮಾಡಬೇಕಾಗಿದೆ. ಬೆಂಗಳೂರಿನ ಸುತ್ತ ಮುತ್ತ, ರಾಜರಾಜೇಶ್ವರಿನಗರ, ತಾವರೆಕೇರೆ, ನೈಸ್ ರಸ್ತೆ, ಗಿರಿನಗರ ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. (ಒನ್ಇಂಡಿಯಾ ಕನ್ನಡ)

English summary
Kannada comedy star Komal Kumar lead film 'Pungidasa' completes 30 days shooting. Rajendra Karanth as Komal father, Sudha Belawadi as mother, Sharat Saxena as villain are in the cast. Rambo fame director Srinath says action cut to the film. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada