»   » ರಿಲೀಸ್ ಆಗಿದ್ದು 'KGF' ಟೀಸರ್, ಟ್ರೆಂಡ್ ಆಗಿದ್ದು 'ಕೋಟಿಗೊಬ್ಬ 3' !

ರಿಲೀಸ್ ಆಗಿದ್ದು 'KGF' ಟೀಸರ್, ಟ್ರೆಂಡ್ ಆಗಿದ್ದು 'ಕೋಟಿಗೊಬ್ಬ 3' !

Posted By:
Subscribe to Filmibeat Kannada
ಈ ಕಡೆ ಕೆಜಿಎಫ್ ಟೀಸರ್ ರಿಲೀಸ್ ಆದ್ರೂ ಟ್ರೆಂಡ್ ಆಗ್ಲಿಲ್ಲ ಆ ಕಡೆ ಕೋಟಿಗೊಬ್ಬ 3 ಟ್ರೆಂಡಿಂಗ್ | Filmibeat Kannada

ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಈ ವಿಶೇಷವಾಗಿ 'ಕೆ.ಜಿ.ಎಫ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಯಶ್ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಪ್ರೇಮಿಗಳು ಈ ಬಹುನಿರೀಕ್ಷಿತ ಸಿನಿಮಾದ ಟೀಸರ್ ನೋಡಿ ಖುಷಿ ಆಗಿದ್ದಾರೆ.

ಕನ್ನಡ ಸಿನಿಮಾದ ಹಾಡುಗಳು, ಟೀಸರ್ ಗಳು ಹಾಗೂ ಟ್ರೇಲರ್ ಗಳು ಯೂಟ್ಯೂಬ್ ನಲ್ಲಿ ಇಂದಿನ ದಿನಗಳಲ್ಲಿ ದೊಡ್ಡ ಜನಪ್ರಿಯತೆ ಗಳಿಸುತ್ತಿದೆ. ಸಾಧಾರಣ ಮಟ್ಟದ ನಟರ ಚಿತ್ರಗಳು ಕೂಡ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುವುದು ಕಮಾನ್ ಆಗಿಬಿಟ್ಟಿದೆ. ಆದರೆ ಅದೆಕೋ ಯಶ್ ಅವರ 'ಕೆ.ಜಿ.ಎಫ್' ಮಾತ್ರ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಲಿಲ್ಲ. ಜೊತೆಗೆ ಟ್ವಿಟ್ಟರ್ ನಲ್ಲಿಯೂ 'ಕೆ.ಜಿ.ಎಫ್' ಟ್ರೆಂಡಿಂಗ್ ನಲ್ಲಿ ಇಲ್ಲ. ಆದರೆ ಆಶ್ಚರ್ಯ ಎಂಬಂತೆ ಇದೇ ದಿನ ಟ್ವಿಟ್ಟರ್ ನಲ್ಲಿ ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾ ಇದ್ದಕ್ಕಿದಂತೆ ಟ್ರೆಂಡಿಂಗ್ ಆಗಿದೆ. ಮುಂದೆ ಓದಿ...

ಟೀಸರ್ ರಿಲೀಸ್

ಯಶ್ ಹುಟ್ಟುಹಬ್ಬದ ವಿಶೇಷವಾಗಿ 'ಕೆ.ಜಿ.ಎಫ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಆದರೂ ಸಹ 'ಕೆ.ಜಿ.ಎಫ್' ಯೂ ಟ್ಯೂಬ್ ಮತ್ತು ಟ್ವಿಟ್ಟರ್ ನಲ್ಲಿ ಟ್ರೆಂಟ್ ಆಗಿಲ್ಲ.

'ಕೋಟಿಗೊಬ್ಬ 3'

'ಕೆ.ಜಿ.ಎಫ್' ಬದಲು ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾ ಟ್ವಿಟ್ಟರ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿ ಇತ್ತು. ಆದರೆ ಇಂದು ರಿಲೀಸ್ ಆಗಿರುವ ಯಶ್ 'ಕೆ.ಜಿ.ಎಫ್' ಯಾಕೋ ಟ್ರೆಂಡಿಂಗ್ ಆಗಲೇ ಇಲ್ಲ.

ಸುದೀಪ್ ಟ್ವೀಟ್

ಜನವರಿ 5 ರಂದು 'ಕೋಟಿಗೊಬ್ಬ 3' ಸಿನಿಮಾದ ಬಗ್ಗೆ ಸುದೀಪ್ ಒಂದು ಟ್ವೀಟ್ ಮಾಡಿದ್ದರು. ಆ ನಂತರ ಅವರ ಅನೇಕ ಅಭಿಮಾನಿಗಳು 'ಕೋಟಿಗೊಬ್ಬ 3' ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದು, ಇಂದು ಅದು ನಂಬರ್ 1 ಟ್ರೆಂಡಿಂಗ್ ನಲ್ಲಿ ಇತ್ತು.

ಯಶ್ ಹುಟ್ಟುಹಬ್ಬದ ವಿಶೇಷವಾಗಿ ಅನೌನ್ಸ್ ಆದ ಚಿತ್ರಗಳಿವು

ಅತಿ ಹೆಚ್ಚು ಫಾಲೋವರ್ಸ್

ನಟ ಸುದೀಪ್ ಕನ್ನಡದ ನಟರಲ್ಲಿ ಅತಿ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ನಟನಾಗಿದ್ದಾರೆ. ಸದ್ಯ ಅವರನ್ನು 1.50 ಮಿಲಿಯನ್ ಜನರು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಇದೇ ವರ್ಷ ಶುರು ಆಗಲಿದೆ ಸುದೀಪ್ 'ಕೋಟಿಗೊಬ್ಬ-3'

'ಕೋಟಿಗೊಬ್ಬ 3' ಯಾವಾಗ ಶುರು

ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾವನ್ನು ಕಾರ್ತಿಕ್ ಎಂಬ ಹೊಸ ನಿರ್ದೇಶಕ ಡೈರೆಕ್ಟ್ ಮಾಡಲಿದ್ದಾರೆ. ಈ ಸಿನಿಮಾ ಈ ವರ್ಷದ ಮಧ್ಯಭಾಗದಲ್ಲಿ ಶುರುವಾಗಲಿದ್ದು, ಸೂರಪ್ಪ ಬಾಬು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಯಶ್ ಹುಟ್ಟುಹಬ್ಬದ ಕಾಣಿಕೆಯಾಗಿ ಬಂತು 'KGF' ಟೀಸರ್

'ಕೆ.ಜಿ.ಎಫ್' ಚಿತ್ರದ ಬಗ್ಗೆ

'ಕೆ.ಜಿ.ಎಫ್' ಚಿತ್ರ 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಎರಡನೇ ಸಿನಿಮಾವಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ರವಿ ಬಸೂರ್ ಸಂಗೀತ ನೀಡಿದ್ದು, ಶ್ರೀ ನಿಧಿ ಶೆಟ್ಟಿ ಚಿತ್ರದ ನಾಯಕಿ ಆಗಿದ್ದಾರೆ. ಸಿನಿಮಾದ ಟ್ರೇಲರ್ ಮುಂದಿನ ತಿಂಗಳು ಬರಲಿದೆ.

English summary
Kannada actor Kiccha Sudeep 'Kotigobba 3' movie no 1 trending topic in twitter. 'Kotigobba 3' movie will producing by Soorappa Babu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X