For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿತ್ರದುರ್ಗದಲ್ಲಿ ಕೋಟಿಗೊಬ್ಬನ ಹಬ್ಬ

  |

  ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಭಿನಯ ಚಕ್ರವರ್ತಿಯನ್ನು ಸ್ವಾಗತಿಸಲು ಅಭಿಮಾನಿಗಳು ತಯಾರಾಗುತ್ತಿದ್ದಾರೆ. ಏಪ್ರಿಲ್ 23 ರಂದು ಕೋಟಿಗೊಬ್ಬ 3 ಸಿನಿಮಾ ಎಲ್ಲೆಡೆ ತೆರೆಕಾಣಲಿದೆ ಎಂದು ಹೇಳಲಾಗಿದೆ.

  ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ಸುದೀಪ್ 25 ವರ್ಷದ ಪೂರೈಸಿದ ಹಿನ್ನೆಲೆ 'ಬೆಳ್ಳಿ ಸಂಭ್ರಮ' ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇದಿಕೆಗೆ ಸಿಎಂ ಯಡಿಯೂರಪ್ಪ, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್ ಆಗಮಿಸಿದ್ದರು. ಇಲ್ಲಿಂದ ಅಧಿಕೃತವಾಗಿ ಕೋಟಿಗೊಬ್ಬ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿತು.

  ನನ್ನನ್ನು ತಲೆ ತಗ್ಗಿಸಲು ಬಿಟ್ಟಿಲ್ಲ ಆ ವ್ಯಕ್ತಿ: ಕೊನೆಯುಸಿರೋ ತನಕ ಆ ಸಹಾಯ ಮರೆಯಲ್ಲ- ಸುದೀಪ್

  ಇದೀಗ, ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆ ಕುರಿತು ಮಾಹಿತಿ ಹೊರಬಿದ್ದಿದೆ. ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಹಿನ್ನೆಲೆ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಕೋಟೆನಾಡು ಚಿತ್ರದುರ್ಗದಲ್ಲಿ ಕೋಟಿಗೊಬ್ಬನ ಹಬ್ಬ ಮಾಡಲು ನಿರ್ಧರಿಸಲಾಗಿದೆ.

  ಏಪ್ರಿಲ್ 20 ರಂದು ಚಿತ್ರದುರ್ಗದಲ್ಲಿ ಕೋಟಿಗೊಬ್ಬ 3 ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಫಿಲ್ಮಿಬೀಟ್‌ಗೆ ಸಿಕ್ಕಿದೆ.

  ಚಿತ್ರದುರ್ಗದಲ್ಲಿ ಸುದೀಪ್ ಅವರ ಚಿತ್ರಗಳಿಗೆ ಒಳ್ಳೆಯ ಓಪನಿಂಗ್ ಸಿಕ್ಕಿರುವ ಸಾಕಷ್ಟು ಉದಾಹರಣೆಗಳಿವೆ. ಸುದೀಪ್ ಪಾಲಿಗೆ ಅದೃಷ್ಟದ ಸ್ಥಳ ಎಂಬ ನಂಬಿಕೆಯೂ ಇದೆ. ಹಾಗಾಗಿ, ಕೋಟಿಗೊಬ್ಬ ಚಿತ್ರತಂಡ ಚಿತ್ರದುರ್ಗ ಆಯ್ಕೆ ಮಾಡಿಕೊಂಡಿದೆ.

  ಸುದೀಪ್ 'ಬೆಳ್ಳಿಹಬ್ಬ': 25 ವರ್ಷದ ಪಯಣದ ಬಗ್ಗೆ ಕಿಚ್ಚನ ಭಾವುಕ ಮಾತು

  ಅಂದ್ಹಾಗೆ, ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಿಸಿದ್ದಾರೆ. ಮಡೋನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ.

  ಕೋಟಿಗೊಬ್ಬ ಚಿತ್ರಕ್ಕೂ ಮೊದಲು ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ (ಏಪ್ರಿಲ್ 1) ಹಾಗೂ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ (ಏಪ್ರಿಲ್ 15) ಸಿನಿಮಾಗಳು ಥಿಯೇಟರ್‌ಗೆ ಬರಲಿದೆ. ಈ ಎರಡು ಸಿನಿಮಾದ ನಂತರ ಕೋಟಿಗೊಬ್ಬ 3 ಎಂಟ್ರಿಯಾಗಲಿದೆ.

  ಅಹೋರಾತ್ರ ವಿರುದ್ಧ ಕಿಚ್ಚನ ಫ್ಯಾನ್ಸ್ ಕೊಟ್ಟಿರೋ ಕಂಪ್ಲೇಂಟ್ ಏನು? | Filmibeat Kannada
  English summary
  Kiccha sudeep starrer Kotigobba 3 pre-release event likely on April 20 in Chitradurga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X