For Quick Alerts
  ALLOW NOTIFICATIONS  
  For Daily Alerts

  ಶತಕದ ಸಂಭ್ರಮದಲ್ಲಿ ಜನಪ್ರಿಯ ಧಾರಾವಾಹಿ 'ಕೃಷ್ಣ ತುಳಸಿ'

  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕೃಷ್ಣ ತುಳಸಿ' ಧಾರವಾಹಿ 100 ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಜನವರಿ 10 ರಂದು 'ಕೃಷ್ಣ ತುಳಸಿ' 100 ಸಂಚಿಕೆಗಳನ್ನು ಪೂರೈಸಲಿದೆ.

  'ಕೃಷ್ಣ ತುಳಸಿ' ಕ್ಲಾಸ್ ಹುಡುಗಿ ಮತ್ತು ಮಾಸ್ ಹುಡುಗನ ನಡುವಿನ ಪ್ರೇಮ ಸಂಘರ್ಷದ ಕಥೆಯಾಗಿದೆ. ಪ್ರೀತಿ ಮತ್ತು ಅಣ್ಣ ತಂಗಿ ಬಾಂಧವ್ಯದ ನಡುವೆ ಗೆಲ್ಲೋದು, ಅಣ್ಣ ತಂಗಿ ಬಾಂಧವ್ಯನಾ ಅಥವ ಕೃಷ್ಣ-ತುಳಸಿಯ ಪ್ರೀತಿನಾ ಅನ್ನೋದೇ ಈ ಧಾರಾವಾಹಿಯ ಮುಖ್ಯ ಕಥಾಹಂದರವಾಗಿದೆ.

  ಕೃಷ್ಣ ತುಳಸಿ ಧಾರವಾಹಿಯನ್ನು ಶ್ರೀಧನ ಮೀಡಿಯಾ ಬ್ಯಾನರ್ ಅಡಿಯಲ್ಲಿ ಅಶೋಕ್ ನಲಜಲ ನಿರ್ಮಿಸುತ್ತಿದ್ದಾರೆ. ಕೃಷ್ಣ ತುಳಸಿಯ ನಿರ್ದೇಶನ ಕುಮಾರ್ ಅವರದ್ದು.

  ಸ್ವರಾಜ್, ಪ್ರಿಯಾಂಕ, ರೆಹಮಾನ್, ಹುಲಿವಾನ್ ಗಂಗಾಧರಯ್ಯ, ಉಷಾ ಭಂಡಾರಿ, ಅಂಬರೀಷ್ ಸಾರಂಗಿ, ಪದ್ಮಕಲಾ ಮುಖ್ಯ ಪಾತ್ರದಲ್ಲಿದ್ದಾರೆ.

  ಸೆಪ್ಟೆಂಬರ್ 17, 2018 ರಿಂದ ಪ್ರಸಾರವಾಗುತ್ತಿರುವ ಕೃಷ್ಣ ತುಳಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವುಗಳನ್ನು ಪಡೆಯಲಿದೆ. ತುಳಸಿ ತನ್ನ ಅತ್ತೆ ಯಶೋಧಾಳನ್ನು ಹುಡುಕುತ್ತಾಳಾ, ಕೃಷ್ಣನಿಗೆ ತನ್ನ ತಾಯಿ ಸಿಗುತ್ತಾಳಾ? ಅಣ್ಣ ತಂಗಿ ಬಾಂಧವ್ಯದ ಮಧ್ಯೆ ಚಿತ್ರ ಬಿರುಗಾಳಿ ಎಬ್ಬಿಸುತ್ತಾಳಾ, ಕೃಷ್ಣ ಮತ್ತು ತುಳಸಿಯ ಪ್ರೀತಿ ಏನಾಗಲಿದೆ ಎಂದು ತಿಳಿಯಬೇಕಾದರೆ ಪ್ರತಿ ಸೋಮವಾರದಿಂದ ಶನಿವಾರ 7 ಗಂಟೆಗೆ ಕೃಷ್ಣ ತುಳಸಿ ಧಾರವಾಹಿಯನ್ನು ನೋಡಬೇಕು.

  English summary
  Star suvarna popular serial krishna tulasi has completes 100 episode.
  Thursday, January 10, 2019, 18:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X