»   » ಪವರ್ ಸ್ಟಾರ್ ಪುನೀತ್ ಜೊತೆ ಕುಡ್ಲ ಹುಡುಗಿ ಎರಿಕ್

ಪವರ್ ಸ್ಟಾರ್ ಪುನೀತ್ ಜೊತೆ ಕುಡ್ಲ ಹುಡುಗಿ ಎರಿಕ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಕುಡ್ಲದ ಬೆಡಗಿ ಎರಿಕ್ ಫರ್ನಾಂಡೀಸ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪುನೀತ್ ಅಭಿನಯಿಸುತ್ತಿರುವ ಈ ಚಿತ್ರಕ್ಕೆ 'ನಿನ್ನಿಂದಲೇ' ಎಂದು ಹೆಸರಿಡಲಾಗಿತ್ತು. ಈಗ ಹೊಸ ಟೈಟಲ್ ಇಡಲು ಚಿತ್ರತಂಡ ಮುಂದಾಗಿದೆ.

ಸದ್ಯಕ್ಕೆ 'ಪ್ರೊಡಕ್ಷನ್ ನಂ.1' ಎಂದು ಹೆಸರಿಡಲಾಗಿದೆ. ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರದ ನಿರ್ದೇಶಕ ಜಯಂತ್ ಸಿ ಪರಾಂಜೆ. ಸದ್ಯಕ್ಕೆ ಅವರು 'ಮೈತ್ರಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಶೀಘ್ರದಲ್ಲೇ ಚಿತ್ರೀಕರಣ ಮುಗಿಯಲಿದೆ. ಮೈತ್ರಿ ಚಿತ್ರದಲ್ಲಿ ಪುನೀತ್ ಜೊತೆ ಮಲಯಾಳಂ ನಟ ಮೋಹನ್ ಲಾಲ್ ಅಭಿನಯಿಸುತ್ತಿರುವುದು ಗೊತ್ತೇ ಇದೆ.


ಇನ್ನು ಎರಿಕಾ ಫರ್ನಾಂಡೀಸ್ ವಿಚಾರಕ್ಕೆ ಬಂದರೆ. ಈಕೆ ಓದಿದ್ದು ಮುಂಬೈನಲ್ಲಿ, ಬಳಿಕ ಪಾಂಟಾಲೂನ್ ಫೆಮೀನಾ ಮಿಸ್ ಮಹಾರಾಷ್ಟ್ರ 2011ರಲ್ಲಿ ಆಯ್ಕೆಯಾಗಿದ್ದರು. ಸದ್ಯಕ್ಕೆ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಐದು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೂ ಎಲ್ಲವೂ ನಿರ್ಮಾಣ ಹಂತದಲ್ಲಿರುವುದು ವಿಶೇಷ.

ಆಗಸ್ಟ್ 12ರಂದು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಜೊತೆಗಿನ ಚಿತ್ರ ಸೆಟ್ಟೇರಲಿದೆ. ಚಿತ್ರದ ನಿರ್ಮಾಪಕರು ವಿಜಯಕುಮಾರ್. ಚಿತ್ರಕ್ಕೆ ಮಣಿಶರ್ಮ ಅವರ ಸಂಗೀತವಿದೆ. ಪುನೀತ್ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಮಣಿಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actress Erica Fernandez, from Kudla of Dakshin Kannada district has signed her fifth film with Power Star Puneeth Rajkumar. The film earlier titled as 'Ninnindale' is having a new title. Vijayakumar Kalagandur is producer of this film launching on 12th of August 2013 at Kanteerava studios.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada